ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿಯಲ್ಲಿ ದೇವೇಗೌಡ-ಷರೀಫ್ ಭೇಟಿ

By Staff
|
Google Oneindia Kannada News

HD Devegowda meets Jaffer Sharif
ನವದೆಹಲಿ, ಮಾ. 4 : ಮಹತ್ವದ ಬೆಳವಣಿಗೆಯೊಂದರಲ್ಲಿ ನವದೆಹಲಿಯ ದೇವೇಗೌಡರ ನಿವಾಸಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಹಾಗೂ ಕೇಂದ್ರದ ಮಾಜಿ ಸಚಿವ ಸಿಕೆ ಜಾಫರ್ ಷರೀಫ್ ಭೇಟಿ ಮಾಡಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಲಹಕ್ಕೆ ಕಾರಣವಾಗಿದೆ. ತೃತೀಯ ರಂಗದಲ್ಲಿ ಗುರುತಿಸಿಕೊಂಡಿರುವ ಗೌಡರೊಂದಿಗೆ ಕಾಂಗ್ರೆಸ್ಸಿನ ಜಾಫರ್ ಷರೀಫ್ ನಡುವೆ ಎಂತಹ ಮಾತುಕತೆ ನಡೆದಿರಬಹುದು ಎನ್ನುವುದು ಇದೀಗ ಯಕ್ಷಪ್ರಶ್ನೆಯಾಗಿ ಕಾಡತೊಡಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೇವೇಗೌಡ, ಇದೊಂದು ಸೌಹಾರ್ದಯುತ ಭೇಟಿ ಎಂದಷ್ಟೇ ಹೇಳಿದ್ದಾರೆ. ಜಾಫರ್ ಭೇಟಿ ಸ್ನೇಹಪೂರ್ವಕ ಭೇಟಿ ಇದಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಬೆಳವಣಿಗೆ ಕುರಿತು ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್ ಈಗಾಗಲೇ ತೃತೀಯ ರಂಗದೊಂದಿಗೆ ಗುರುತಿಸಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡುಕೊಳ್ಳುವ ವಿಷಯ ಮುಗಿದ ಅಧ್ಯಾಯ ಎಂದು ಗೌಡರು ಖಂಡತುಂಡಾಗಿ ಮಾತನಾಡಿದ್ದಾರೆ.

ಆದರೆ, ಚುನಾವಣೆ ನಂತರ ಏನಾದರೂ ಆಗಬಹುದು ಎಂಬ ಗೌಡರ ಹೇಳಿಕೆಗೆ ಹಿನ್ನೆಲೆಯಲ್ಲಿ ಈ ಭೇಟಿ ಅತ್ಯಂತ ಮಹತ್ವದ್ದು ಎನ್ನಲಾಗಿದೆ. ದೇವೇಗೌಡರ ರಾಜಕೀಯ ನಡೆ ಅತ್ಯಂತ ರೋಚಕ ಎನ್ನುವುದು ಕೂಡ ಗುಟ್ಟಾಗೇನು ಉಳಿದಿಲ್ಲ.

(ದಟ್ಸ್ ಕನ್ನಡ ವಾರ್ತೆ)
ಸೈಕಲ್ ಹಿಡಿದ ಕೈ, ಎನ್ ಡಿಎ ತೆಕ್ಕೆಗೆ ಆರ್ಎಲ್ ಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X