ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊರಗುತ್ತಿಗೆಗೆ ಬೆಂಗಳೂರು ಸುರಕ್ಷಿತವಲ್ಲ, ವರದಿ

By Staff
|
Google Oneindia Kannada News

ಬೆಂಗಳೂರು, ಮಾ. 2 : ಭಾರತದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಉಗ್ರರ ದಾಳಿಗಳಿಂದ ಉದ್ಯಮಗಳಿಗೆ ಭಾರಿ ಹೊಡೆತ ಬೀಳತೊಡಗಿದೆ. ಅಮೆರಿಕ ಬ್ರೌನ್-ವಿಲ್ಸನ್ ಸಮೂಹ ನಡೆಸಿದ ಸರ್ವೆ ಪ್ರಕಾರ ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ಅಪಾಯಕಾರಿ ನಗರ ಎಂಬ ಅಪಖ್ಯಾತಿ ಒಳಗಾಗಿರುವ ನಗರವಾಗಿದೆ.

ಭಾರತದಲ್ಲಿ ಭದ್ರತೆ ಕೊರತೆ ಇದ್ದು, ಹೊರಗುತ್ತಿಗೆ ವಹಿವಾಟಿಗೆ ಪೂರಕ ವಾತಾವರಣ ಇಲ್ಲವಾಗಿದೆ ಎಂದು ಬ್ರೌನ್-ವಿಲ್ಸನ್ ಸಮೂಹದ ವರದಿ ಸಹ ಮುಖ್ಯಸ್ಥ ಡೌಗ್ ಬ್ರೌನ್ ಅವರು 2009ರ ದಿ ಇಯರ್ ಆಫ್ ಔಟ್ ಸೋರ್ಸಿಂಗ್ ರಿಪೋರ್ಟ್ ನಲ್ಲಿ ಹೇಳಿದ್ದಾರೆ. ಭಯೋತ್ಪಾದಕ ಕೃತ್ಯಗಳ ಇತ್ತೀಚೆಗೆ ಅವ್ಯಾಹತವಾಗಿ ನಡೆಯುತ್ತಿರುವುದರಿಂದ ಕಾರ್ಯ ನಿರ್ವಹಿಸುವುದು ಕಷ್ಟಕರ ಎಂಬ ವಾತಾವರಣ ಸೃಷ್ಟಿಯಾಗಿದೆ ಎಂದು ಅವರು ಹೇಳಿದ್ದಾರೆ.

ಇದರ ಜೊತೆಗೆ ಹೊರಗುತ್ತಿಗೆ ನಡೆಸುವುದಕ್ಕೆ ಮೂಲಭೂತ ಸೌಕರ್ಯಗಳು ಅತ್ಯಂತ ಕೆಟ್ಟದಾಗಿವೆ. ಇಂದಿನ ಸ್ಥಿತಿಯಲ್ಲಿ ಉದ್ಯಮ ಹೇಳಿ ಮಾಡಿಸಿದ ಸ್ಥಳ ಭಾರತ ಅಲ್ಲ ಎಂದು ಹೇಳಬಹುದು ಎಂದಿದ್ದಾರೆ. ಬೆಂಗಳೂರು ಅಪಾಯಕಾರಿ ನಗರ ಎಂಬುದಕ್ಕೆ ಕೆಲ ಉದಾಹರಣೆಗಳನ್ನು ಅವರು ನೀಡಿದ್ದಾರೆ. ಮುಖ್ಯವಾಗಿ, ಭಯೋತ್ಪಾದನೆ, ಯುದ್ಧ ಭೀತಿ, ರಾಜಕೀಯ ಅಸ್ಥಿರತೆ, ಪರಿಸರ ತೊಂದರೆ, ಅಪರಾಧಿ ಪ್ರಕರಣಗಳು, ರೋಗ ರುಜಿನಗಳು ಹೊರಗುತ್ತಿಗೆ ಹಿನ್ನೆಡೆಯಾಗಿದೆ ಎಂದು ಬ್ರೌನ್ ತಿಳಿಸಿದ್ದಾರೆ. ಬೆಂಗಳೂರು ಭಾರತದ ಇತರೆ ನಗರಗಳಾದ ಹೈದರಾಬಾದ್, ಚೆನ್ನೈ, ಪುಣೆ, ಕೋಲ್ಕತ್ತಾ ಅಪಾಯಕಾರಿ ನಗರಗಳ ಪಟ್ಟಿಯಲ್ಲಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X