ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿಗೆ ಯುನೆಸ್ಕೋ ತಂಡದ ಭೇಟಿ

By Staff
|
Google Oneindia Kannada News

ಮೈಸೂರು, ಫೆ. 26 : ನವದೆಹಲಿಯಲ್ಲಿನ ಯುನೆಸ್ಕೋ ನಿರ್ದೇಶಕ ಮಿಸ್ ಮಿನ್‌ಜಾಯಂಗ್ ಇವರ ನೇತೃತ್ವದಲ್ಲಿ ಯುನೆಸ್ಕೋ ತಂಡದ ಇತರ ಸದಸ್ಯರಾದ ಮಿಸ್ ನಿಕೋಲ್, ಫ್ರಾನ್ಸ್‌ನ ಮಿಸ್ಟರ್ ಪೌಲ್ ಟ್ರಯಿಲೋಡ್, ಫ್ರಾನ್ಸ್‌ನ ಮಿಸ್ಟರ್ ಗೆರಾರ್ಡ್ ಗ್ಯಾಸಲೀನ್ ಅವರು ಮೈಸೂರಿಗೆ ಭೇಟಿ ನೀಡಿ ವೀಕ್ಷಿಸಿದರು.

ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳು, ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಮೈಸೂರು ನಗರ, ಪಾರಂಪರಿಕ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಇತರೇ ಸ್ಟೇಕ್ ಹೋಲ್ಡರ್ ಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದು , ಮೈಸೂರಿನ ಸುತ್ತಮುತ್ತ ಪಾರಂಪರಿಕ ಸಂರಕ್ಷಣಾ ಚಟುವಟಿಕೆಗಳ ಬಗ್ಗೆ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸುವ ಬಗ್ಗೆ ಚರ್ಚಿಸಿದರು.

ಪಾರಂಪರಿಕ ಘಟಕ ಸ್ಥಾಪಿಸುವ, ಮಹತ್ವದ ತರಬೇತಿ ಮತ್ತು ಕಟ್ಟಡ ಚಟುವಟಿಕೆಗಳ ಸಾಮರ್ಥ್ಯ, ನಗರದ ಒಳಭಾಗದಲ್ಲಿನ ಸಂಚಾರವನ್ನು ಗುರುತಿಸುವುದು. ಸಾಮಾಜಿಕ ಆರ್ಥಿಕತೆಯ ಅಧ್ಯಯನ ಮಾಡುವುದು, ಸ್ಪಷ್ಟವಾದ ಮತ್ತು ಅಸ್ಪಷ್ಟವಾದ ಸ್ಮಾರಕಗಳನ್ನು , ವಿಷಯಗಳನ್ನು ಪಟ್ಟಿ ಮಾಡುವ ಬಗ್ಗೆ ಚರ್ಚಿಸಲಾಯಿತು. ಅನುಷ್ಠಾನಗೊಳಿಸುವ ಪ್ರಕ್ರಿಯೆಯನ್ನು ಸಹ ಸುದೀರ್ಘವಾಗಿ ಚರ್ಚಿಸಲಾಯಿತು.

ಈಗಾಗಲೇ ಗುರುತಿಸಲ್ಪಟ್ಟಿರುವ ಅಧಿಸೂಚಿತ ಕಟ್ಟಡಗಳು, ಹೆಚ್ಚುವರಿ ಸ್ಮಾರಕಗಳನ್ನು ಪಟ್ಟಿ ಮಾಡುವುದು, ತಾಂತ್ರಿಕತೆಯ ನಿಯಂತ್ರಣಕ್ಕಾಗಿ ನಿಬಂಧನೆಗಳನ್ನು ರೂಪಿಸುವುದು, ಖಾಸಗಿ ಮಾಲೀಕರಿಗೆ ಪ್ರೋತ್ಸಾಹ ನೀಡುವುದು, ಖಾಸಗಿ ಮಾಲೀಕತ್ವದ ತಾಂತ್ರಿಕತೆಯನ್ನು ತಿಳಿದುಕೊಳ್ಳುವ ಬಗ್ಗೆಯೂ ಸಹ ವಿವರವಾಗಿ ಚರ್ಚಿಸಲಾಯಿತು. ಮಾಸ್ಟರ್ ಪ್ಲಾನ್‌ಗಳನ್ನು ಸಿದ್ಧಪಡಿಸುವ ಪ್ರಕ್ರಿಯೆ ಬಗ್ಗೆಯೂ ಸಹ ಸಾಯಿ ಕನ್ಸಲ್ಟಿಂಗ್ ಇಂಜಿನಿಯರ್‍ಸ್ ಪ್ರೈ ಲಿ., ಅವರೊಂದಿಗೆ ಚರ್ಚಿಸಲಾಯಿತು ಮತ್ತು ಪಾರಂಪರಿಕ ದೃಷ್ಠಿಕೋನದ ಬಗ್ಗೆ ಮೈಸೂರು ನಗರದ ಮುಂದಿನ ಮಾಸ್ಟರ್ ಪ್ಲಾನ್‌ನಲ್ಲಿ ಅಳವಡಿಸುವ ಬಗ್ಗೆ ನಿಶ್ಚಯಿಸಲಾಯಿತು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ರಾಯ್ಕರ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
40 ಸಾವಿರಕ್ಕೆ 10 ಜ್ಯೋತಿರ್ ಲಿಂಗಗಳ ದರ್ಶನ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X