• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾರ್ಚ್ 23 ರಂದು ನ್ಯಾನೋ ಕಾರು ಮಾರುಕಟ್ಟೆಗೆ

By Staff
|

ನವದೆಹಲಿ, ಫೆ. 26 : ಅತ್ಯಂತ ಅಗ್ಗದ ಬೆಲೆಯ ಕಾರು ಎಂಬ ಅಗ್ಗಳಿಕೆ ಪಡೆದಿರುವ ಟಾಟಾ ಮೋಟಾರ್ ಕಂಪನಿಯ 'ನ್ಯಾನೋ' ಕಾರು ಮಾರ್ಚ್ 23 ರಂದು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ. ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಬುಕ್ಕಿಂಗ್ ಆರಂಭಿಸಲಾಗುವುದು ಟಾಟಾ ಕಂಪನಿಯ ಮೂಲಗಳು ತಿಳಿಸಿವೆ.

ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಟಾಟಾ ನ್ಯಾನೋ ಕಾರುಗಳ ಬುಕ್ಕಿಂಗ್ ಸೇವೆಯ ಏಜೆನ್ಸಿಯನ್ನು ಪಡೆದುಕೊಂಡಿದೆ. ಮೊದಲ ಹಂತದಲ್ಲಿ ಒಂದು ಲಕ್ಷ ಕಾರುಗಳ ಬುಕ್ಕಿಂಗ್ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ. 1 ಲಕ್ಷ ರುಪಾಯಿಗಳಿಗೆ ಕಾರು ನೀಡುವುದಾಗಿ 2008ರಲ್ಲಿ ಟಾಟಾ ಕಂಪನಿಯ ಮುಖ್ಯಸ್ಥ ರತನ್ ಟಾಟಾ ಕಾರುಗಳ ಮೇಳದಲ್ಲಿ ಘೋಷಣ ಮಾಡಿದ್ದರು. ಆದರೆ, ಕೊಲ್ಕತ್ತಾದಲ್ಲಿ ನ್ಯಾನೋ ಕಾರು ಘಟಕ ಅನೇಕ ವಿವಾದಗಳಿಂದ ಗುಜರಾತಿಗೆ ಸ್ಥಳಾಂತರಗೊಂಡಿದೆ. ಇದರಿಂದ ಟಾಟಾ ಸಂಸ್ಥೆಗೆ ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾನೋ ಕಾರುಗಳ ಬೆಲೆ ಹೆಚ್ಚಾಗಲಿದೆ ಎನ್ನುವ ಸುದ್ದಿ ದಟ್ಟವಾಗಿದೆ.

ಮಾರ್ಚ್ 23 ರಂದು ಅಧಿಕೃತವಾಗಿ ಕಾರು ಮಾರುಕಟ್ಟೆ ಬರಲಿದೆ. ಬುಕ್ಕಿಂಗ್ ವ್ಯವಸ್ಥೆ ಮತ್ತಿತರ ವಿಷಯಗಳನ್ನು ಶೀಘ್ರ ತಿಳಿಸಲಾಗುವುದು. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮಕೈಗೊಳ್ಳಲಿದ್ದು, ದೇಶದ ಮೂಲೆಮೂಲೆಗೂ ಇದರ ಬುಕ್ಕಿಂಗ್ ವ್ಯವಸ್ಥೆ ಲಭ್ಯವಿರುತ್ತದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಟಾಟಾ ಕಂಪನಿ ಕಡಿಮೆ ಬೆಲೆಯ ನ್ಯಾನೋ ಕಾರ್ ನಿಂದ ಪ್ರೇರಿತರಾಗಿದ್ದ ನಿಸ್ಸಾನ್-ರೆನಾಲ್ಟ್ ಕಂಪನಿಯೂ ಸಹ ಕಡಿಮೆ ಬೆಲೆಯ ಕಾರನ್ನು ಮಾರುಕಟ್ಟೆ ತರಲಿದ್ದೇವೆ ಎಂದು ಹೇಳಿತ್ತು. ಆದರೆ, ಆರ್ಥಿಕ ಬಿಕ್ಕಟ್ಟಿನಿಂದ ರೆನಾಲ್ಟ್ ಕಂಪನಿ ಈ ಸಾಹಸವನ್ನು ಕೈಬಿಟ್ಟಿದೆ.

(ದಟ್ಸ್ ಕನ್ನಡ ವಾರ್ತೆ)
ಇದನ್ನೂ ಓದಿ:
ಬೆಂಗಳೂರಿನಲ್ಲಿ ಟೊಯೋಟಾ ಸಣ್ಣ ಕಾರು ಘಟಕ
ನ್ಯಾನೋ ಬಂದಿಲ್ಲ ಟೊಯೋಟಾ ಬರುತ್ತಂತೆ
ಟಾಟಾ ನ್ಯಾನೊಗೆ ಪ್ರತಿಸ್ಪರ್ಧಿಯಾಗಿ ಅಜಂತಾ ಕಾರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X