ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರು.20 ಸಾವಿರಕ್ಕೆ ವಿಪ್ರೋ ಲ್ಯಾಪ್ ಟಾಪ್ ಲಭ್ಯ

By Staff
|
Google Oneindia Kannada News

Affordable Laptops From Wipro!
ಬೆಂಗಳೂರು, ಫೆ. 24 : ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಸಾಫ್ಟವೇರ್ ಉದ್ಯಮ ಗಮನಾರ್ಹವಾಗಿ ಕುಸಿತ ಕಂಡಿರುವ ಸಂಕಷ್ಟದ ಸ್ಥಿತಿಯಲ್ಲಿ ದೇಶದ ಎರಡನೇ ಪ್ರತಿಷ್ಠಿತ ಸಾಫ್ಟವೇರ್ ಕಂಪನಿ ನಂಬಲಾಗದಂತಹ ದರದಲ್ಲಿ ಲ್ಯಾಪ್ ಟಾಪ್ ವೊಂದನ್ನು ಮಾರುಕಟ್ಟೆ ಬಿಡುಗಡೆ ಮಾಡಿದೆ. ವಿಪ್ರೋ ಲ್ಯಾಪ್ ಟಾಪ್ ಬೆಲೆ ಕೇವಲ 20 ಸಾವಿರ ರುಪಾಯಿ ಮಾತ್ರ. ಆಶ್ಚರ್ಯವಾದರೂ ಇದು ಸತ್ಯ.

ವಿಪ್ರೋ ಕಂಪನಿ ಬಿಡುಗಡೆ ಮಾಡಿರುವ ನೂತನ 12 ಮತ್ತು 14 ಇಂಚು ಸ್ಕ್ರೀನ್ ಹೊಂದಿರುವ ಲ್ಯಾಪ್ ಟಾಪ್ ಗಳು ಮಾರುಕಟ್ಟೆಗೆ ಬರಲಿವೆ. ಮುಖ್ಯವಾಗಿ ಮೂರುಪ ವಿವಿಧ ಮಾಡೆಲ್ ಗಳನ್ನು ಬಿಡುಗಡೆ ಮಾಡಿದ್ದು, 77F3800, EM471X ಸೀರಿಸ್ and BM2700 ಸಿರೀಸ್ ಗಳಿವೆ. ಅಲ್ಲದೆ, ಇದರಲ್ಲಿ 2 ಮೆಗಾ ಪಿಕ್ಸೆಲ್ ಕ್ಯಾಮರಾ, ವಿಂಡೋಸ್ ಹಾಗೂ ಮೂರು ಗಂಟೆವರೆಗೂ ಬ್ಯಾಟರಿ ಬ್ಯಾಕಪ್ ನ್ನು ಈ ಲ್ಯಾಪ್ ಟಾಪ್ ಹೊಂದಿದೆ. ಕ್ರೋಮಾ ರೆಡ್, ಒಶಿಯನ್ ಬ್ಲ್ಯೂ, ರೇಸರ್ ಯೆಲ್ಲೂ, ಅಟುಮನ್ ರೆಡ್ ಹಾಗೂ ಕೂರಲ್ ಬ್ಲ್ಯೂ ಬಣ್ಣಗಳಲ್ಲಿ ಈ ಲ್ಯಾಪ್ ಟಾಪ್ ಗಳು ದೊರೆಯಲಿವೆ. ಆರಂಭಿಕ ದರ 19,999 ಎಂದು ಕಂಪನಿ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X