ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ದಾಳಿ : ಬೃಹತ್ ಆರೋಪಪಟ್ಟಿ ಸಲ್ಲಿಕೆ

By Staff
|
Google Oneindia Kannada News

Chargesheet filed against Mumbai attackers
ಮುಂಬೈ, ಫೆ. 25 : ಸೆಪ್ಟೆಂಬರ್ 26ರ ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ದಾಳಿ ನಡೆಸಿದ ಅಜ್ಮಲ್ ಕಸಬ್ ಮತ್ತು ಇತರ ಉಗ್ರರ ವಿರುದ್ಧ 5 ಸಾವಿರ ಪುಟಗಳ ಬೃಹತ್ ಆರೋಪಪಟ್ಟಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಮ್‌ಜೆ ಮಿರ್ಜಾಗೆ ಮುಂಬೈ ಪೊಲೀಸರು ಸಲ್ಲಿಸಿದ್ದಾರೆ.

ವಿವರವಾದ ಆರೋಪಪಟ್ಟಿಯ ಜೊತೆಗೆ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ನಡೆಸಿದ ವಿಧಿವಿಜ್ಞಾನ ಪರೀಕ್ಷೆಯ ವರದಿಯನ್ನೂ ನ್ಯಾಯಾಧೀಶರಿಗೆ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ಎಫ್‌ಬಿಐ ಭಾರತದ ಕೇಂದ್ರ ರಕ್ಷಣಾ ಏಜೆನ್ಸಿಯೊಡನೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪಾಕಿಸ್ತಾನದ ಉಗ್ರರೊಂದಿಗೆ ಕಸಬ್ ನಡೆಸಿದ ಮಾತುಕತೆಯ ವಿವರ, ವಿಚಾರಣೆಯ ವರದಿ ಮತ್ತು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳನ್ನು ಆರೋಪಪಟ್ಟಿ ಒಳಗೊಂಡಿದೆ.

ಸರ್ಕಾರಿ ನ್ಯಾಯವಾದಿ ಉಜ್ವಲ್ ನಿಕಮ್ ಮತ್ತು ಕ್ರೈಂ ಬ್ರಾಂಚ್‌ನ ಇತರ ಅಧಿಕಾರಿಗಳು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸುವಾಗ ಉಪಸ್ಥಿತರಿದ್ದರು. ಮೊಹಮ್ಮದ್ ಅಜ್ಮಲ್ ಕಸಬ್‌ನನ್ನು ಆರೋಪಪಟ್ಟಿ ಸಲ್ಲಿಸುವಾಗ ಹಾಜರುಪಡಿಸಲಾಗಿರಲಿಲ್ಲ.

ಆರೋಪಪಟ್ಟಿಯಲ್ಲಿ 9 ಲಷ್ಕರ್-ಇ-ತಯ್ಬಾದ ಉಗ್ರರು ಮತ್ತು 20 ಮೋಸ್ಟ್ ವಾಂಟೆಡ್ ಆರೋಪಿಗಳನ್ನು ಹೆಸರಿಸಲಾಗಿದೆ. ಮುಂಬೈ ದಾಳಿಯ ಪ್ರಮುಖ ಆರೋಪಿಗಳಾಗಿರುವ ಝಾಕಿರ್-ಉರ್-ರೆಹಮಾನ್ ಲಕ್ವಿ, ಮತ್ತು ಯುಸೂಫ್ ಮುಜಮ್ಮಿಲ್ ಸೇರಿದಂತೆ 20 ಉಗ್ರರು ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವರೆಂದು ನಂಬಲಾಗಿದೆ. ಕೊಲೆ ಮತ್ತು ದೇಶದ ವಿರುದ್ಧ ಯುದ್ಧ ಸಾರಿದ ಆರೋಪ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಪ್ರಕಾರ ಅನೇಕ ಆರೋಪಗಳನ್ನು ಕಸಬ್ ಎದುರಿಸುತ್ತಿದ್ದಾನೆ.

ಬಲ್ಲ ಮೂಲಗಳ ಪ್ರಕಾರ, ಆರೋಪಪಟ್ಟಿಯನ್ನು ಉರ್ದು ಸೇರಿದಂತೆ 7 ಭಾರತೀಯ ಭಾಷೆಗಳಲ್ಲಿ ಬರೆಯಲಾಗಿದೆ. ಉರ್ದು ಪ್ರತಿಯನ್ನು ಕಸಬ್ ಗೂ ನೀಡಲಾಗುತ್ತಿದೆ. ಆರೋಪಪಟ್ಟಿ ಸಲ್ಲಿಸಿದ ನಂತರ ಆರೋಪಿಗಳ ವಿರುದ್ಧ ವಿಚಾರಣೆ ಪ್ರಾರಂಭವಾಗಲಿದೆ. ಆದರೆ, ವಿಚಾರಣೆ ಮುಗಿಸಲು ಯಾವುದೇ ಗಡುವನ್ನು ನೀಡಲಾಗಿಲ್ಲ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X