ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಳಿವಿನಂಚಿನಲ್ಲಿ ಕರ್ನಾಟಕದ 6 ಭಾಷೆಗಳು

By Staff
|
Google Oneindia Kannada News

ನ್ಯೂಯಾರ್ಕ್, ಫೆ. 21: ಹಿಂದೊಮ್ಮೆ ಬಹುಭಾಷೆಗಳಿಂದ ಕೂಡಿದ ಶ್ರೀಮಂತ ದೇಶವಾಗಿದ್ದ ಭಾರತದಲ್ಲಿ ಇಂದು ಭಾಷೆಗಳು ಒಂದೊಂದಾಗಿ ಅವಸಾನದತ್ತ ಸಾಗುತ್ತಿವೆ. ಅತಿ ಹೆಚ್ಚು ಭಾಷೆ ಅಳಿವಿನಂಚಿನಲ್ಲಿರುವ ದೇಶಗಳ ಪೈಕಿ ಭಾರತ ಈಗ ಮೊದಲ ಸ್ಥಾನದಲ್ಲಿದೆ. ಕರ್ನಾಟಕದ 6 ಭಾಷೆಗಳು ಸೇರಿದಂತೆ ದೇಶದ 196 ಭಾಷೆಗಳು ಅಳಿವಿನಂಚಿನಲ್ಲಿವೆ ಎಂದು ವಿಶ್ವಸಂಸ್ಥೆಯ ಸಾಂಸ್ಕೃತಿಕ ವಿಭಾಗ ಯುನೆಸ್ಕೋ ಹೇಳಿದೆ.

ಅಂತಾರಾಷ್ಟ್ರೀಯ ಮಾತೃಭಾಷೆ ದಿನಾಚರಣೆಯ ಮುನ್ನಾ ದಿನವಾದ ಫೆಬ್ರವರಿ 21ರಂದು ಯುನೆಸ್ಕೋ ಈ ಆತಂಕಕಾರಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ವಿಶ್ವದಲ್ಲಿ ಒಟ್ಟು 6,000 ಭಾಷೆಗಳು ಬಳಕೆಯಲ್ಲಿದ್ದು ಈ ಪೈಕಿ 2,500 ಭಾಷೆಗಳು ಅಪಾಯದಲ್ಲಿದೆ ಎಂದು ಯುನೆಸ್ಕೊ ಎಚ್ಚರಿಸಿದೆ.

ರಾಜ್ಯದ ಅಳಿವಿನಂಚಿನಲ್ಲಿರುವ 6 ಭಾಷೆಗಳು ಕೊಡವ, ತುಳು, ಕುರುಬ ಅಥವಾ ಕುರುಂಬ, ಕೊರಗ, ಬೆಲ್ಲಾರಿ ಅಥವಾ ಪೆಂಗು ಮತ್ತು ಇರುಳ ಭಾಷೆಗಳು ಎಂದು ಯುನೆಸ್ಕೊ ಪ್ರಕಟಿಸಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X