ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್ 09 ಮುಖ್ಯಾಂಶಗಳು

By Staff
|
Google Oneindia Kannada News

ಬೆಂಗಳೂರು, ಫೆ.20: ಆರ್ಥಿಕ ಬಿಕ್ಕಟ್ಟು ಮತ್ತು ಲೋಕಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಬಜೆಟ್ ಮಂಡಿಸಿದರು. ಬಜೆಟ್ ಮಂಡನೆಗೂ ಮುನ್ನ್ನ ಸರ್ವರ ಅಭ್ಯುದಯಕ್ಕಾಗಿ ಪಣ ತೊಟ್ಟಿದ್ದೇನೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ರಾಜ್ಯಕ್ಕೂ ತಟ್ಟಿದೆ. ಹೀಗಿದ್ದೂ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಿರುವುದಾಗಿ ತಿಳಿಸಿದರು. ಬಜೆಟ್ ಮುಖ್ಯಾಂಶಗಳು.

*ಒಟ್ಟು ಯೋಜನಾ ಗಾತ್ರ 29, 500 ಕೋಟಿ ರು.ಗಳು
*ರಾಯಚೂರು ಜಿಲ್ಲೆಗೆ ಕೃಷಿ ವಿಶ್ವವಿದ್ಯಾಲಯ
*ಕೆರೆಗಳ ಅಭಿವೃದ್ಧಿಗೆ ರು.764 ಕೋಟಿ
*ಬೆಂಬಲ ಬೆಲೆ ಒದಗಿಸಲು ರು.100 ಕೋಟಿ ಮೀಸಲು
*ದಾವಣಗೆರೆಯಲ್ಲಿ ನೂತನ ವಿಶ್ವವಿದ್ಯಾಲಯ
*ಗದಗ ಪಶುವೈದ್ಯ ಕಾಲೇಜಿಗೆ ರು.5 ಕೋಟಿ.
*ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ರು.750 ಕೋಟಿ.
*ಚಾಮರಾಜ ನಗರದಲ್ಲಿ ಅರಿಷಿಣ ಮಾರುಕಟ್ಟೆ.
*ಕೃಷಿ ಸಂಬಂಧಿಸಿದ ಸೇವೆಗಳಿಗೆ ರು.2,112 ಕೋಟಿ.
*ಶಕ್ತಿ ಮೂಲಗಳಿಗೆ ರು. 3126 ಕೋಟಿ.
*ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ರು.850 ಕೋಟಿ.
*ವಾರ್ತಾ ಮತ್ತು ಪ್ರಚಾರ ಕ್ಷೇತ್ರಕ್ಕೆ ರು. 50.60 ಕೋಟಿ.
*ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ರು. 800 ಕೋಟಿ.
*ರಾಜ್ಯ ಪಶುವೈದ್ಯ ವಿಶ್ವವಿದ್ಯಾಲಯಕ್ಕೆ ರು.10 ಕೋಟಿ.
*ಬೆಂಗಳೂರಿನ ಬ್ಯಾಟರಾಯನ ಪುರದಲ್ಲಿ ಸುಸಜ್ಜಿತ ಸಗಟು ಮಾರುಕಟ್ಟೆ.
* ಕೈಗಾರಿಗೆ, ಖನಿಜಗಳಿಗೆ ರು. 828 ಕೋಟಿ.
*ಆರೋಗ್ಯ ಕ್ಷೇತ್ರಕ್ಕೆ ರು.897 ಕೋಟಿ.
*ತುಮಕೂರು ವಿಶ್ವವಿದ್ಯಾಲಯವನ್ನು ಡಾ.ಶಿವಕುಮಾರ ಸ್ವಾಮೀಜಿ ವಿಶ್ವವಿದ್ಯಾಲಯ ಎಂದು ನಾಮಕರಣ.
*ಭಾರಿ ಮತ್ತ್ತು ಮಧ್ಯಮ ನೀರಾವರಿಗೆ ರು.3096 ಕೋಟಿ.
*ವಿಶೇಷ ಪ್ರದೇಶ ಯೋಜನೆಗೆ ರು. 188 ಕೋಟಿ.
*ಸಾಮಾನ್ಯ ಆರ್ಥಿಕ ಸೇವೆಗೆ ರು. 769 ಕೋಟಿ.
*ಕಾರ್ಮಿಕ, ಉದ್ಯೋಗ ವಲಯಕ್ಕೆ ರು. 167 ಕೋಟಿ.
*ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ರು. 2,574 ಕೋಟಿ.
*ಕೃಷ್ಣ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನ.
*ಉದ್ಯೋಗ ಮೇಳದಿಂದ 13 ಸಾವಿರ ನಿರುದ್ಯೋಗಿಗಳಿಗೆ ಅನುಕೂಲ.
*ಚಾಮರಾಜ ನಗರದಲ್ಲಿ ಶೈತ್ಯಾಗಾರಕ್ಕೆ ರು.10 ಕೋಟಿ.
*ಪ್ರತಿ ತಾಲೂಕಿನಲ್ಲೂ ಗೋ ಶಾಲೆ
*ಶಿಕ್ಷಣ ಕ್ಷೇತ್ರಕ್ಕೆ ರು.8,888 ಕೋಟಿ.
*ಸಾವಯವ ಕೃಷಿಗೆ ರು.100 ಕೋಟಿ ಸಹಾಯ ಧನ
*ಪ್ರತಿ ಗೋಶಾಲೆಗೆ ರು.10 ಲಕ್ಷ ಅನುದಾನ
*ರೈತರ ವಿದ್ಯುತ್ ಸರಬರಾಜು ಯೋಜನೆಗೆ 2,100 ಕೋಟಿ ರು.
*ಕೃಷಿ ಅಭಿವೃದ್ಧಿಗೆ ರು.2,440 ಕೋಟಿ.
*ಮೀನುಗಾರರ ಸ್ವ ಸಹಾಯ ಗುಂಪುಗಳಿಗೆ ರು.10 ಕೋಟಿ.
*ನಗರಾಭಿವೃದ್ಧಿಗೆ ರು. 7376 ಕೋಟಿ.
*ಶೇ.3ರ ಬಡ್ಡಿದರದಲ್ಲಿ ರೈತರಿಗೆ ಸಾಲ ಸೌಲಭ್ಯ.
*ನೀರಾವರಿ ಕ್ಷೇತ್ರಕ್ಕೆ ರು.4741 ಕೋಟಿ.
*ಈ ಸಾಲಿನಲ್ಲಿ ಸಾವಿರ ರೈತರಿಗೆ ವಿದೇಶ ಪ್ರವಾಸ.
*ಗ್ರಾಮೀಣಾಭಿವೃದ್ಧಿಗೆ ರು. 3063 ಕೋಟಿ
*ವಿದ್ಯುತ್ ವಲಯಕ್ಕೆ ರು. 6,101 ಕೋಟಿ
*ಕೋಲಾರಕ್ಕೆ ತೋಟಗಾರಿಕಾ ಕಾಲೇಜು
*ಸಾರಿಗೆ ವಲಯಕ್ಕೆ 1327 ಕೋಟಿ
*ಬೆಳಗಾವಿಯಲ್ಲಿ ತೋಟಗಾರಿಕಾ ಮಾರುಕಟ್ಟೆ ಸ್ಥಾಪನೆ.
*ಮಲೆನಾಡು ತೂಗು ಸೇತುವೆ ನಿರ್ಮಾಣಕ್ಕೆ ರು.25 ಕೋಟಿ.
*ವಸತಿ ಕ್ಷೇತ್ರಕ್ಕೆ ರು.729 ಕೋಟಿ.
*ಭದ್ರಾ ಮೇಲ್ದಂಡೆ ಯೋಜನೆಗೆ ರು.500 ಕೋಟಿ.
*ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ ರು.800 ಕೋಟಿ.
*ಗಂಗಾವತಿಗೆ ನೂತನ ಇಂಜಿನಿಯರಿಂಗ್ ಕಾಲೇಜು

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X