ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರಾಭಿವೃದ್ಧಿ,ಚಿಲ್ಲರೆಪಲ್ಲರೆಗೆ ಕರಡಿಪಾಲು

By Super
|
Google Oneindia Kannada News

Ktaka Budget, BSY biscuits and carrots
ಬೆಂಗಳೂರು, ಫೆ.20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 4 ನೇ ಬಜೆಟ್ ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಎಂದಿನಂತೆ ಕೃಷಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಜೊತೆಗೆ ಈ ಬಾರಿ ನಗರಾಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅಮೃತಮಹೋತ್ಸವ ಹಬ್ಬ ಆಚರಿಸುತ್ತಿರುವ ಕನ್ನಡ ಚಲನಚಿತ್ರರಂಗಕ್ಕೆ ಅತಿ ಕಡಿಮೆ ಅನುದಾನ ಲಭ್ಯವಾಗಿದೆ. ಒಟ್ಟಾರೆಯಾಗಿ ಭೂಮಿ ನೀರು, ವಿದ್ಯುತ್ ಮೇಲೆ ಹೆಚ್ಚಿನ ಹಣ ಹೂಡಿಕೆ ಹಾಗೂ ಮಹತ್ವ ನೀಡಲಾಗಿದೆ.

ತಾಳಿಭಾಗ್ಯ, ಶಾಲಾಮಕ್ಕಳಿಗೆ ಸೈಕಲ್ ಮುಂತಾದ ಜನಪ್ರಿಯ ಯೋಜನೆಗಳಿಗೆ ಕೊಕ್. ಕೇವಲ ಮೇಲ್ವರ್ಗ ಮತ್ತು ಮೇಲ್ಜಾತಿಗಳನ್ನು ಮಾತ್ರ ಪ್ರೀತಿ ಮಾಡಬಾರದೆಂಬ ಎಚ್ಚರ ಅಂಕಿಅಂಕಿಗಳಲ್ಲಿ ಕಾಣ ಸಿಗುತ್ತದೆ. ಎಲ್ಲರನ್ನೂ ಸಂತುಷ್ಟಗೊಳಿಸುವ ಯತ್ನದಲ್ಲಿ ಸಾಗಿದ ಮುಂಗಡಪತ್ರ ಎನ್ನಲು ಅಡ್ಡಿಯಿಲ್ಲ. ಒಟ್ಟಾರೆ, ಅನೇಕರನ್ನು ಏಕಕಾಲಕ್ಕೆ ಓಲೈಸಲು ಹೆಣಗಿದ ಯಡ್ಡಿ ಬಜೆಟ್ ಎಂದು ಬಣ್ಣಿಸಬಹುದು.

ವಿಹಂಗಮ ಮುನ್ನೋಟ:

* ಡಾ. ಬಿಎಸ್ ಯಡಿಯೂರಪ್ಪ ಅವರ 4 ನೇ ಬಜೆಟ್
* ಬಿಜೆಪಿ ಸರ್ಕಾರದ 2 ನೇ ಬಜೆಟ್
* ಒಟ್ಟು ಯೋಜನಾ ಗಾತ್ರ 29, 500 ಕೋಟಿ ರು.ಗಳು
* ಕೃಷಿ, ಶಿಕ್ಷಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಟಿಬದ್ಧ
* ಮನರಂಜನೆ, ಉನ್ನತ ಕೈಗಾರಿಕೆ, ತಂತ್ರಜ್ಞಾನ, ಕ್ರೀಡೆ, ಪರಿಸರ ಕ್ಷೇತ್ರಕ್ಕೆ ಸೊನ್ನೆ
* ಆರ್ಥಿಕ ಬಿಕ್ಕಟ್ಟು, ಉದ್ಯೋಗ ಸೃಷ್ಟಿ ಕಡೆ ಗಮನವಿಲ್ಲ.
* ಕನ್ನಡ ನಾಡು ನುಡಿಗೆ ಮಹತ್ವ.
* ಮೂಗಿಗೆ ತುಪ್ಪ ಸವರುವ ಬಜೆಟ್, ಗೊತ್ತು ಗುರಿಯಿಲ್ಲ, ಜಾತಿವಾರು ಅನುದಾನ, ಚುನಾವಣಾ ದೃಷ್ಟಿಯುಳ್ಳ ಬಜೆಟ್ ಎಂದು ಪ್ರತಿಪಕ್ಷ ನಾಯಕರ ಟೀಕೆ

ಮುಂದುವರೆದುದು....

ನಗರಾಭಿವೃದ್ಧಿ

*ನಗರಾಭಿವೃದ್ಧಿಗೆ ರು. 7376 ಕೋಟಿ.
*ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ರು.850 ಕೋಟಿ.
*ಬೆಂಗಳೂರಿನ ಬ್ಯಾಟರಾಯನ ಪುರದಲ್ಲಿ ಸುಸಜ್ಜಿತ ಸಗಟು ಮಾರುಕಟ್ಟೆ.
*ಗುಲ್ಬರ್ಗ ವಿಮಾನ ನಿಲ್ದಾಣಕ್ಕೆ ರು.100 ಕೋಟಿ.
*ಬೆಂಗಳೂರು ಕೆರೆಗಳ ಅಭಿವೃದ್ಧಿಗೆ ರು. 100 ಕೋಟಿ.
*ಬೆಳಗಾವಿ ಸುವರ್ಣಸೌಧಕ್ಕೆ ರು.100ಕೋಟಿ.
*ಕೊಳಚೆ ನಿರ್ಮೂಲನ ಮಂಡಳಿ 5 ಸಾವಿರ ಮನೆ.
*ಜಿಲ್ಲಾ, ತಾಲೂಕು ಕೋರ್ಟ್ ಕಟ್ಟಡಕ್ಕೆ ರು. 25ಕೋಟಿ.
*8 ನಗರ ಪಾಲಿಕೆಗಳಿಗೆ ತಲಾ ರು. 50 ಕೋಟಿ.
*ಮೆಟ್ರೊ ಯೋಜನೆಗೆ ರು.600 ಕೋಟಿ.

ಮನರಂಜನೆ

*ಕನ್ನಡ ಚಲನಚಿತ್ರ ಅಮೃತ ಮಹೋತ್ಸವ ಭವನಕ್ಕೆ ರು.5 ಕೋಟಿ.
*ಮನರಂಜನಾ ತೆರಿಗೆ ಶೇ. 40 ರಿಂದ ಶೇ. 30 ಕ್ಕೆ ಇಳಿಕೆ

ಆರೋಗ್ಯ

* ಆರೋಗ್ಯ ಕ್ಷೇತ್ರಕ್ಕೆ ರು.897 ಕೋಟಿ.
* ಮೈಸೂರು, ಕ್ಯಾನ್ಸರ್, ಹೃದ್ರೋಗ ಆಸ್ಪತ್ರೆಗೆ ರು. 10 ಕೋಟಿ.
* ಬಳ್ಳಾರಿ ಸೇರಿದಂತೆ ವಿವಿಧೆಡೆ ಔಷಧ ಪರೀಕ್ಷಾ ಕೇಂದ್ರಗಳ ಹೆಚ್ಚಳ

ಜಾತಿ/ಪಂಗಡ/ಮಠ/ಮಾನ್ಯ

*ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ 2,142 ಕೋಟಿ ರು
*ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 200 ಹೊಸ ಹಾಸ್ಟೆಲ್
*ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 50 ಹೊಸ ಹಾಸ್ಟೆಲ್
*ಎಲ್ಲ ಮಠಮಾನ್ಯಗಳಿಗೆ ಹಣ ಬಿಡುಗಡೆ ?
*ಬಂಜಾರ ಭವನ ನಿರ್ಮಾಣಕ್ಕೆ ರು.10 ಕೋಟಿ.
*ಶಾದಿಮಹಲ್ ಗಳ ನಿರ್ಮಾಣಕ್ಕೆ ರು.15 ಕೋಟಿ.
*ಲಿಡ್ಕರ್ ಸಂಸ್ಥೆಗೆ ರು.5 ಕೋಟಿ.
*ಬಂಜಾರ ಭವನಗಳ ನಿರ್ಮಾಣಕ್ಕೆ 10 ಕೋಟಿ
*ಅಲ್ಪಸಂಖ್ಯಾತರ ವಿದ್ಯಾರ್ಥಿಭವನ 30 ಕೋಟಿ
*ವಾಲ್ಮೀಕಿ ಭವನ ಅನುದಾನ 2 ಕೋಟಿಗೆ ಏರಿಕೆ
*ನಿರಾಶ್ರಿತ ಮಹಿಳೆಯರಿಗೆ 400 ರು ಮಾಸಾಶಾನ
*ದೇವದಾಸಿಯರ ಪುನರ್ವಸತಿಗೆ ರು.20 ಕೋಟಿ
*ಬೆಂಗಳೂರಿನ ಹಜ್ ಭವನಕ್ಕೆ ರು.5 ಕೋಟಿ.
*ದೇವರಾಜ್ ಅರಸ್ ಅಭಿವೃದ್ಧಿ ನಿಗಮಕ್ಕ್ಕೆ ರು. 50 ಕೋಟಿ.
*ಬೆಂಗಳೂರು ಜಗಜೀವನ್ ಸ್ಮಾರಕಕ್ಕೆ ರು. 5 ಕೋಟಿ.

ಗ್ರಾಮೀಣಾಭಿವೃದ್ಧಿ/ಪ್ರದೇಶಾಭಿವೃದ್ಧಿ/ವಸತಿ

*ಗ್ರಾಮೀಣ ವಸತಿ ಯೋಜನೆಯಡಿ 3 ಲಕ್ಷ ಮನೆ.
*ಗ್ರಾಮೀಣಾಭಿವೃದ್ಧಿಗೆ ರು. 3,063 ಕೋಟಿ
*ವಸತಿ ಕ್ಷೇತ್ರಕ್ಕೆ 729 ಕೋಟಿ ರು
*ಇಂದಿರಾ ಆವಾಸ್ ಯೋಜನೆಯಡಿ 1ಲಕ್ಷ ಮನೆ
*ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ರು. 2,574 ಕೋಟಿ.

ಸಾರಿಗೆ

*ಸಾರಿಗೆ ವಲಯಕ್ಕೆ 1,327 ಕೋಟಿ ರೂ
*ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ರು. 800 ಕೋಟಿ.
*ಸಾಮಾನ್ಯ ಆರ್ಥಿಕ ಸೇವೆಗೆ ರು. 769 ಕೋಟಿ.
*ವಿದ್ಯುತ್ ಚಾಲಿತ ವಾಹನಗಳಿಗೆ ಜೀವಿತಾವಧಿ ತೆರಿಗೆ ವಿನಾಯಿತಿ

ಇತರೆ/ಚೂರುಪಾರು

*ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ಹೆಚ್ಚಳ
*ವಾರ್ತಾ ಮತ್ತು ಪ್ರಚಾರ ಇಲಾಖೆಗೆ 15 ಕೋಟಿ ರು
*ಪತ್ರಕರ್ತರಿಗೆ ಉಚಿತ ಬಸ್ ಪಾಸ್
*ಪತ್ರಕರ್ತರಿಗೆ ಯಶಸ್ವಿನಿ ಯೋಜನೆ
*ವಕೀಲರ ಕಲ್ಯಾಣ ನಿಧಿಗೆ ರು. 1 ಕೋಟಿ.
*ಹುಬ್ಬಳ್ಳಿ-ಕಲಘಟಗಿ ಬಳಿ ವನ್ಯ ಪ್ರಾಣಿ ಧಾಮ.
*ಕೈಗಾರಿಕೆ, ಖನಿಜ ಕ್ಷೇತ್ರಕ್ಕೆ ರು. 823 ಕೋಟಿ.
*ಮಲೆನಾಡಿನಲ್ಲಿ ತೂಗು ಸೇತುವೆ ನಿರ್ಮಾಣ 25 ಕೋಟಿ ರು
*ಮೀನುಗಾರರ ಸ್ವ ಸಹಾಯ ಗುಂಪುಗಳಿಗೆ ರು.10 ಕೋಟಿ.
(ದಟ್ಸ್ ಕನ್ನಡವಾರ್ತೆ)
ಪೂರಕ ಓದಿಗೆ: ಶಿಕ್ಷಣ ನೀರಾವರಿ ಕೃಷಿಗೆ ಸಿಂಹಪಾಲು

English summary
Agriculture, Education, Irrigation gets the lion share out of Karnataka Budget-2009. BSY acrobatics to appease all sections, sects and sectors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X