ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್1-ಬಿ ನೌಕರರೆ ನಿರಾತಂಕವಾಗಿರಿ

By Staff
|
Google Oneindia Kannada News

ಬೆಂಗಳೂರು, ಫೆ. 18 : ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿರುವ ಅಮೆರಿಕಾದ ಅರ್ಥ ವ್ಯವಸ್ಥೆಯನ್ನು ಮೇಲೆತ್ತಲು ಅಮೆರಿಕಾದ ನೂತನ ಅಧ್ಯಕ್ಷ ಬರಾಕ್ ಒಬಾಮಾ ಸ್ಟಿಮ್ಯುಲಸ್ ಕಾಯ್ದೆಗೆ ಸಹಿ ಹಾಕಿದ್ದಾರೆ. ಭಾರತೀಯರು ಸೇರಿದಂತೆ ವಿದೇಶಿ ನೌಕರರಲ್ಲಿ ಈ ಕಾಯ್ದೆಯ ನಿಯವಾವಳಿಗಳು ಭಾರೀ ಗೊಂದಲಗಳನ್ನು ಸೃಷ್ಟಿಸಿವೆ. ಕೆಲಸ ಕಳೆದುಕೊಳ್ಳುತ್ತಿರುವ ಅಮೆರಿಕದ ನೌಕರರಿಗೆ ವರದಾನವಾಗಲಿದೆ ಎಂದು ನಂಬಲಾಗಿರುವ ಆ ಕಾಯ್ದೆಯಿಂದ ಎಚ್1-ಬಿ ವೀಸಾ ಪಡೆದು ಅಮೆರಿಕಕ್ಕೆ ತೆರಳಿಸುವ ನುರಿತ ತಜ್ಞರು ಕೆಲಸ ಕಳೆದುಕೊಳ್ಳುವ ಭಯದಿಂದ ತತ್ತರಿಸಿದ್ದಾರೆ.

ಈ ಕಾಯ್ದೆಯಿಂದ ಉದ್ಭವಾಗಿರುವ ಹಲ ಊಹಾಪೋಹಗಳು ಕೂಡ ಜನರನ್ನು ಗೊಂದಲದ ಗೂಡಿಗೆ ತಳ್ಳಿವೆ. ಎಚ್1-ಬಿ ವೀಸಾ ಪಡೆದಿರುವ ವಿದೇಶಿಗಳಲ್ಲಿ ಹೆಚ್ಚಿನವರು ಭಾರತೀಯರು. ಈ ಗೊಂದಲಗಳ ನಿವಾರಣೆಗೆ ಅಮೆರಿಕಾದ ವಲಸೆ ಕಾಯ್ದೆಯನ್ನು ಪ್ರಾಕ್ಟೀಸ್ ಮಾಡುತ್ತಿರುವ ರಾಜೀವ್ ಎಸ್ ಖನ್ನಾ ಎಂಬ ವಕೀಲರು ತಮ್ಮ ಬ್ಲಾಗಿನಲ್ಲಿ ಕೆಲ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.

ಅವರು ಹೇಳುವ ಪ್ರಕಾರ,

1) ವಸ್ತುಸ್ಥಿತಿ ಹಾಗಿಲ್ಲ, ಅಮೆರಿಕದಿಂದ ಜೀವದಾನ ಪಡೆದಿರುವ ಕಂಪನಿಗಳು ಎಚ್1-ಬಿ ನೌಕರನ್ನು ತೆಗೆದುಕೊಳ್ಳಬಹುದು. ಒಬಾಮಾ ಹೊರಡಿಸಿರುವ ಕಾಯ್ದೆ ಪ್ರಸ್ತುತ ಕೆಲಸದಲ್ಲಿರುವ ಎಚ್1-ಬಿ ನೌಕರರಿಗೆ ಅನ್ವಯವಾಗುವುದಿಲ್ಲ. ಕಾಯ್ದೆಯ ನಿಮಯಗಳು ಹಸಿರು ಕಾರ್ಡ್ ಅರ್ಜಿಗಳ ಮೇಲೂ ಪ್ರಭಾವ ಬೀರುವುದಿಲ್ಲ. ಆದರೆ, ಅಂಥ ಕಂಪನಿಗಳು ಕೆಲ ನಿಬಂಧನೆಗಳನ್ನು ಅಂಗೀಕರಿಸಬೇಕಾಗುತ್ತದೆ.

2) ಎಚ್1-ಬಿ ನೌಕರರು ಹೆಚ್ಚಾಗಿ ಇರುವ ಇಂಥ ಅನೇಕ ಕಂಪನಿಗಳು ಈ ಅಗತ್ಯಗಳನ್ನು ಈಗಾಗಲೆ ಒಪ್ಪಿಕೊಂಡಿವೆ. ಇಂಥ ಉದ್ಯೋಗ ಒದಗಿಸುವ ಕಂಪನಿಗಳಿಗೆ ಎಚ್1-ಬಿ ಅವಲಂಬಿತ ಕಂಪನಿಗಳೆಂದು ಹಣೆಪಟ್ಟಿ ನೀಡಲಾಗಿದೆ.

3) ಜೀವದಾನ ಪಡೆದಿರುವ ಕಂಪನಿಗಳು ಅನುಸರಿಸಬೇಕಾದ ಇನ್ನೂ ಕೆಲ ನಿಬಂಧನೆಗಳು ಕೆಳಗಿನಂತಿವೆ.

ಅ) ನೌಕರರನ್ನು ವರ್ಗಾಯಿಸುವ ಅಗತ್ಯ ಬಂದರೆ ಅಮೆರಿಕದ ನೌಕರರನ್ನು ವರ್ಗಾಯಿಸಿ ಅಲ್ಲಿ ಎಚ್1-ಬಿ ನೌಕರರನ್ನು ಕುಳ್ಳರಿಸುವಂತಿಲ್ಲ.
ಬ) ಅಮೆರಿಕದ ಪ್ರಜೆಗಳಿಗೆ ಕೆಲಸ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿರಬೇಕು.

4) ಕಾಯ್ದೆಗೆ ಅನುಮೋದನೆ ದೊರೆತ ನಂತರ ಎರಡು ವರ್ಷಗಳವರೆಗೆ ಈ ನಿಬಂಧನೆ ಜಾರಿಯಲ್ಲಿರುತ್ತದೆ.
5) ಎಲ್1 ನೌಕರರು ಕುರಿತಂತೆ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಈ ಕುರಿತು ಹೆಚ್ಚಿನ ವಿವರಗಳಿಗೆ ಈ ಅಂತರ್ಜಾಲ ತಾಣವನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X