ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಮರಣದಂಡನೆ

By Super
|
Google Oneindia Kannada News

Psychopath killer Umesh Reddy
ಬೆಂಗಳೂರು ಫೆ 18: ನ್ಯಾಯಮೂರ್ತಿ ಎಸ್ ಆರ್ ಬನ್ನೂರಮಠ ಅವರ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ 1998 ರ ಫೆ.28ರಂದು ನಡೆದಿದ್ದ ಜಯಶ್ರೀ ಮರಡಿಸುಬ್ಬಯ್ಯ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

ಈ ಹಿಂದೆ ಪೋಲಿಸ್ ಇಲಾಖೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದ ಉಮೇಶ್ ರೆಡ್ಡಿ ಆನಂತರ ಸೇವೆಯಿಂದ ವಜಾಗೊಂಡಿದ್ದ. ಇವನ ಮೇಲೆ 21 ಕೇಸುಗಳು ದಾಖಲಾಗಿದೆ. ಒಂದು ವರ್ಷದ ಹಿಂದೆ ನಗರದ ಸೆಷನ್ ಕೋರ್ಟ್ ಈತನಿಗೆ ಗಲ್ಲುಶಿಕ್ಷೆ ನೀಡಿ ವಿಧಿಸಿದ್ದ ತೀರ್ಪನ್ನು ಈಗ ಹೈಕೋರ್ಟ್ ಎತ್ತಿಹಿಡಿದಿದೆ. ಈತ ಸಮಾಜಕ್ಕೆ ಮತ್ತಷ್ಟು ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಇಂತಹ ಸಮಾಜಘಾತುಕ ವ್ಯಕ್ತಿಗಳಿಗೆ ಗಲ್ಲು ಶಿಕ್ಷೆಯೇ ಸೂಕ್ತ ಎಂದು ತೀರ್ಪನ್ನು ನೀಡಿದೆ.

ಕೊಲೆ ಮತ್ತು ಅತ್ಯಾಚಾರ ಪ್ರಕರಣದಿಂದ ಬೆಚ್ಚಿಬೀಳಿಸಿದ್ದ ಉಮೇಶ್ ರೆಡ್ಡಿ ಒಂಟಿ ಮಹಿಳೆಯರ ಮನೆಗೆ ನುಗ್ಗಿ, ಮೊದಲು ಕೊಲೆ ಮಾಡಿ ನಂತರ ಶವವನ್ನು ಸಂಭೋಗಿಸುತ್ತಿದ್ದ. ಹೆಂಗಸರ ಒಳ ಉಡುಪುಗಳನ್ನು ಧರಿಸಿ ಕುಣಿಯುತ್ತಿದ್ದ ಎನ್ನಲಾಗಿದೆ. ಅನೇಕ ಬಾರಿ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ರೆಡ್ಡಿಯನ್ನು ಬೆಳಗಾವಿ ಹಿಂಡಲಗಾ ಜೈಲಿನಿಂದ ಬೆಂಗಳೂರಿನ 3ನೇ ಜೆ ಎಂಎಫ್ ಸಿ ನ್ಯಾಯಾಲಯಕ್ಕೆ ಇಂದು ಕರೆ ತರಲಾಗಿತ್ತು. ಈತ ಸುಮಾರು 20ಕ್ಕೂ ಅಧಿಕ ಹೆಂಗಳೆಯರ ಹರಣಮಾಡಿದ್ದು ಅವರಲ್ಲಿ ಕೆಲವರು ವೇಶ್ಯೆಯರೂ ಸೇರಿದ್ದರು. ಸುಮಾರು 13 ವರ್ಷಜೈಲು ಶಿಕ್ಷೆ ಅನುಭವಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X