ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಮತಾಂತರ ನಿಷೇಧ ಕಾಯ್ದೆ ಬೇಕು

By Staff
|
Google Oneindia Kannada News

ಬೆಂಗಳೂರು, ಫೆ. 18: ಹಿಂದುಗಳಿಗೆ ಆಮಿಷ ಒಡ್ಡಿ ಕ್ರೈಸ್ತ ಸಮುದಾಯಕ್ಕೆ ಮತಾಂತರ ಮಾಡುವುದು ಬಹಳ ಹಿಂದಿನಿಂದ ನಡೆದು ಬಂದಿದೆ. ಇದನ್ನು ಹತ್ತಿಕ್ಕಲು ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವುದು ಅಗತ್ಯ ಎಂದು ರಾಜ್ಯ ಕಾನೂನು ಹಾಗೂ ಮಾನವ ಹಕ್ಕುಗಳ ಖಾತೆ ಸಚಿವ ಎಸ್ ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಸಂಘಪರಿವಾರದ ಮುಖವಾಣಿ 'ಆರ್ಗನೈಸರ್' ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದ ಸಮಯದಲ್ಲಿ ಸಚಿವರು ಈ ಮಾತುಗಳನ್ನಾಡಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಹೇರಿಕೆ ಬಗ್ಗೆ ಚರ್ಚೆ ನಡೆಸಿ, ಸದ್ಯದಲ್ಲೇ ಜಾರಿಗೆ ತರಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಮಂಗಳೂರು ಪಬ್ ದಾಳಿ ಪ್ರಕರಣದಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರ ಹಲ್ಲೆಯನ್ನು ಒಂದು ಕೋನದಲ್ಲಿ ಸಮರ್ಥಿಸಿಕೊಂಡ ಸಚಿವರು ನೈತಿಕ ಆರಕ್ಷಕರಿಗೆ ಜೈಕಾರ ಹಾಕಿದರು.ಆದರೆ , ಕಾನೂನಿನ ಮಿತಿ ಮೀರಬಾರದು. ಸೇನೆ ಕಾರ್ಯಕರ್ತರು ಕಾನೂನಿನ ಮೊರೆ ಹೋಗಬೇಕಿತ್ತು ಆತುರಪಟ್ಟರು ಪಬ್ ಸಂಸ್ಕೃತಿಗೆ ಖಂಡಿತಾ ಕಡಿವಾಣ ಹಾಕಲಾಗುವುದು ಎಂದು ಸಚಿವ ಸುರೇಶ್ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X