ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರದ ಮೂಲಕ ಪರಮಾಣು ದಾಳಿ ಸಂಭವ

By Staff
|
Google Oneindia Kannada News

ನವದೆಹಲಿ ಫೆ 18: ಹಡಗಿನ ಮೂಲಕ ಪರಮಾಣು ಅಸ್ತ್ರಗಳನ್ನು ಸಾಗಿಸಿ ಭಾರತದ ಪ್ರಮುಖ ನಗರಗಳಲ್ಲಿ ಅದನ್ನು ಸ್ಫೋಟಿಸಲು ತಾಲಿಬಾನ್ ಉಗ್ರರು ಭಾರಿ ಸಂಚು ನಡೆಸಿದ್ದಾರೆ ಎಂದು ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಸುರೇಶ್ ಮೆಹ್ತಾ ಎಚ್ಚರಿಕೆ ನೀಡಿದ್ದಾರೆ.

ಮುಖ್ಯವಾಗಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಒಗ್ಗೂಡಿಸಿಕೊಂಡಿರುವ ಭಾರತದ ಪ್ರಮುಖ ನಗರಗಳನ್ನು ತಾಲಿಬಾನ್ ತನ್ನ ಗುರಿಯಾಗಿಸಿಕೊಂಡಿದ್ದು, ಯಾವುದೇ ನಿರ್ಧಿಷ್ಟ ಸ್ಥಳದ ಮೇಲೆ ಅಥವಾ ಸಮಯದಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ. ಆದರೆ ಗುಪ್ತಚರ ಇಲಾಖೆಯಿಂದ ದಾಳಿಗೆ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿದು ಬಂದಿಲ್ಲ ಎಂದು ಮೆಹ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಶಾಂತಿಗಾಗಿ ಮೆರವಣಿಗೆ

ಈ ನಡುವೆ ಇಸ್ಲಾಮಿಕ್ ಮೂಲವಾದಿ ಸಂಘಟನೆಯ ಮುಖಂಡ ಮೌಲಾನಾ ಸೂಫಿ ಮಹಮ್ಮದ್ ನೇತೃತ್ವದಲ್ಲಿ ಶಾಂತಿಗಾಗಿ ಬೃಹತ್ ಮೆರವಣಿಗೆಯನ್ನು ಇಂದು ಪಾಕಿಸ್ತಾನದ ಸ್ವಾಟ್ ಕಣಿವೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಈ ಶಾಂತಿ ಮೆರವಣಿಗೆಯಲ್ಲಿ
ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಮೆರವಣಿಗೆಯ ನಂತರ ಮೌಲನ ಅವರು ಸ್ಥಳೀಯ ತಾಲಿಬಾನ್ ಮುಖಂಡ ಹಾಗೂ ಸ್ವಂತ ಅಳಿಯ ಮೌಲನ ಫೌಜುಲ್ಲಾ ಜತೆ ಮಾತುಕತೆ ನಡೆಸಿ ಕಣಿವೆ ಪ್ರದೇಶದಲ್ಲಿ ಇಸ್ಲಾಮಿಕ್ ಕಾನೂನು ಜಾರಿಗೆ ತರುವ ಭರವಸೆ ಹಾಗೂ ಶಾಂತಿ ಕಾಪಾಡುವ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X