ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಾನಿ, ಪ್ರೇಮ್ ಜೀ ಅವರಿಂದ ಒಬಾಮ ಭೇಟಿ

By Staff
|
Google Oneindia Kannada News

ವಾಷಿಂಗ್ ಟನ್, ಫೆ. 13 : ರಿಲೈಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮುಖ್ಯಸ್ಥ ಮುಖೇಶ್ ಅಂಬಾನಿ, ವಿಪ್ರೋ ಕಂಪನಿ ಮುಖ್ಯಸ್ಥ ಅಜೀಮ್ ಪ್ರೇಮ್ ಜೀ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ವೈಟ್ ಹೌಸ್ ನಲ್ಲಿ ಇಂದು ಭೇಟಿ ಮಾಡಲಿದ್ದಾರೆ.

ಜಾಗತಿಕ ಮಟ್ಟದ ಬೃಹತ್ ಉದ್ಯಮಗಳ ಸಿಇಒಗಳ ಒಕ್ಕೂಟದಲ್ಲಿ ಈ ಇಬ್ಬರು ಭಾರತೀಯ ಉದ್ಯಮದಾರರಿದ್ದು, ಬರಾಕ್ ಒಬಾಮಾ ಅಧಿಕಾರ ಸ್ವೀಕರಿಸಿದ ನಂತರ 150 ಸಿಇಒಗಳನ್ನು ಒಳಗೊಂಡಿರುವ ಒಕ್ಕೂಟದ ಪ್ರಮುಖರು ಇಂದು ಒಬಾಮಾ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳು ಕುರಿತು ಚರ್ಚೆ ನಡೆಸಲಿದ್ದಾರೆ. ಮುಖ್ಯವಾಗಿ ಹೊರಗುತ್ತಿಗೆ ಸಂಬಂಧಿಸಿದಂತೆ (out sourcing) ಚರ್ಚೆ ನಡೆಸಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.

ವಿಶ್ವ ಸಿಇಒಗಳ ಒಕ್ಕೂಟ 1933 ರಚನೆಯಾಗಿದ್ದು, ಜಗತ್ತಿನ ಪ್ರಮುಖ ಕಂಪನಿಗಳ ಮಾಲೀಕರು ಹಾಗೂ ಸಿಇಒಗಳು ಈ ಒಕ್ಕೂಟದಲ್ಲಿರುತ್ತಾರೆ. ಮುಖೇಶ್ ಅಂಬಾನಿ ಹಾಗೂ ವಿಪ್ರೋದ ಅಜೀಮ್ ಪ್ರೇಮ್ ಜೀ ಅವರುಗಳು ವಿಶ್ವ ಪ್ರಮುಖ ಸಿಇಒಗಳ ಪಟ್ಟಿಯಲ್ಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಎದುರಿಸುತ್ತಿರುವ ಸಮಸ್ಯೆಗಳು ಕುರಿತು ಚರ್ಚೆ ಸಿಇಒಗಳು ಚರ್ಚೆ ನಡೆಸಲಿದ್ದಾರೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಸರ್ಕಾರದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲು ಸಿಇಒಗಳು ಇಂದು ವೈಟ್ ಹೌಸ್ ಗೆ ಭೇಟಿ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X