ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಿನಲ್ಲಿ ಅಪ್ರಾಪ್ತೆ ಹುಡುಗಿ ಆತ್ಮಹತ್ಯೆ

By Staff
|
Google Oneindia Kannada News

ಮಂಗಳೂರು, ಫೆ. 12 : ರಾಜ್ಯದಲ್ಲಿ ವಿದ್ಯಾವಂತರ, ಸುಶಿಕ್ಷಿತರ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಂಗಳೂರು ಇತ್ತೀಚೆಗೆ ವಿವಾದ ಕೇಂದ್ರ ಬಿಂದುವಾಗಿ ಪರಿಣಮಿಸಿದೆ. ಚರ್ಚೆ ದಾಳಿ ದೇಶದಲ್ಲಿ ಕೋಲಾಹಲ ಸೃಷ್ಟಿಸಿದ ಪ್ರಕರಣವಾದರೆ, ಅದನ್ನು ಮೀರಿಸುವಂತೆ ಪಬ್ ದಾಳಿ ಪ್ರಕರಣ ದೇಶದ ಖಂಡನೆ ಗುರಿಯಾಯಿತು. ನಂತರ ಕೇರಳ ಶಾಸಕ ಪುತ್ರಿ ಅಪಹರಣ ನಡೆದು ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನಿಸುವಂತಾಯಿತು. ಈ ಪ್ರಕರಣಗಳು ಮಾಸುವ ಮುನ್ನವೇ ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ. ಈ ಆತ್ಮಹತ್ಯೆ ಕೂಡ ಸಂಘ ಪರಿವಾರದ ಸದಸ್ಯರು ನೀಡಿದ ಕಿರುಕುಳವೇ ಕಾರಣ ಎನ್ನಲಾಗಿದೆ.

ಸಾರ್ವಜನಿಕವಾಗಿ ನಿಂದಿಸಿ, ಹೀಯಾಳಿಸಿದ್ದರಿಂದ ಮನನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಗೆ ಸಮೀಪದ ಕಿನ್ನಿಗೋಳಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. 16 ವರ್ಷದ ಅಶ್ವಿನಿ ಮೃತಪಟ್ಟ ನತದೃಷ್ಟೆ.

ಅಶ್ವಿನಿ ಇಲ್ಲಿನ ಐಕಾಳದ ಪೊಮೈ ಎನ್ನುವ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಹುಡುಗಿ. ಈಕೆ ತನ್ನ ಮೂರು ಜನ ಸಹಪಾಠಿಗಳೊಂದಿಗೆ ಮೂಡಬಿದಿರೆಯ ಬಳಿಯ ಮರೂರು ಎನ್ನುವ ಜಾಗದಲ್ಲಿ ಬಸ್ ನಿಲ್ಲಿಸಿದ ಸಂಘ ಪರಿವಾರದ ಸದಸ್ಯರು ಬಸ್ ನಿರ್ವಾಹಕ ಸಲೀಂ ಹಾಗೂ ಕ್ಲೀನರ್ ರಫೀಕ್ ನನ್ನು ಥಳಿಸಿದ್ದಾರೆಂದು ವರದಿಗಳಿಂದ ತಿಳಿದು ಬಂದಿದೆ. ಆಕೆಯನ್ನು ಸಮೀಪದ ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ವಿಚಾರಣೆ ನಂತರ ಅಶ್ವಿನಿಯನ್ನು ಪೋಷಕರ ವಶಕ್ಕೆ ನೀಡಿದ್ದಾರೆ ಆದರೆ ಅಶ್ವಿನಿಯ ತಂದೆ ಆಕೆಯ ಭವಿಷ್ಯದ ದೃಷ್ಟಿಯಿಂದ ಘಟನೆ ಬಗ್ಗೆ ಪೊಲೀಸರಿಗೆ ಲಿಖಿತ ದೂರು ನೀಡಿಲ್ಲ ಎಂದು ದೈಜಿ ವರ್ಲ್ಡ್ ಪತ್ರಿಕೆ ವರದಿ ಮಾಡಿದೆ.

ಮೂಡಬಿದಿರೆಯ ಸಬ್ ಇನ್ಸ್ ಪೆಕ್ಟರ್ ಭಾರತಿ ಅವರು ಸಲೀಂನಿಗೆ ಎಚ್ಚರಿಕೆ ಎಚ್ಚರಿಕೆ ನೀಡಿ, ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಬಿಟ್ಟರು ಎನ್ನಲಾಗಿದೆ. ಆದರೆ ಈ ಘಟನೆಯಿಂದ ತೀವ್ರವಾಗಿ ಮನನೊಂದು ಅವಮಾನ ತಾಳಲಾರದೆ ಅಶ್ವಿನಿ ಎಲ್ನಿಂಜೆಯಲ್ಲಿನ ತನ್ನ ಮನೆಯಲ್ಲಿ ಸಾವಿಗೆ ಶರಣಾಗಿದ್ದಾಳೆ. ಬಸ್ ಮಾಲೀಕನಾದ ಸಲೀಂ ಮೇಲೆ ಅತ್ಯಾಚಾರ ಮತ್ತು ಆಮಿಷ ಒಡ್ಡಿದ ಆರೋಪ ಮಾಡಿದ್ದ ಮೃತ ತಂದೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ತಾಲಿಬಾನೀಕರಣ ಹೇಳಿಕೆ, ರೇಣುಕಾಗೆ ನೋಟೀಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X