ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೃಪತುಂಗ ಬೆಟ್ಟದ ಅಭಿವೃದ್ಧಿಗೆ 99 ಲಕ್ಷ ಬಿಡುಗಡೆ

By Staff
|
Google Oneindia Kannada News

ಹುಬ್ಬಳ್ಳಿ, ಫೆ. 11 : ನಗರದ ನೃಪತುಂಗ ಬೆಟ್ಟವನ್ನು ಪ್ರೇಕ್ಷಣೀಯ ತಾಣವಾಗಿಸಲು ವಿವಿಧ ಅಭಿವೃಧ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 99 ಲಕ್ಷ ರೂ. ಮಂಜೂರು ಮಾಡಲಾಗಿದ್ದು, ಬೆಟ್ಟದ ಅಭಿವೃಧ್ಧಿ ಕಾರ್ಯ ಪ್ರಾರಂಭಗೊಂಡಿದೆ ಎಂದು ವಿಧಾನಸಭಾಧ್ಯಕ್ಷ ಜಗದೀಶ ಶೆಟ್ಟರ್ ತಿಳಿಸಿದರು.

ಬೆಟ್ಟದಲ್ಲಿ ಕೈಕೊಂಡ ಅಭಿವೃಧ್ಧಿ ಕಾರ್ಯಗಳ ವೀಕ್ಷಿಸಿದ ನಂತರ ಅವರು ಮಾತನಾಡುತ್ತಿದ್ದರು. ಈ ಹಣದಿಂದ ಬೆಟ್ಟದ 6.5 ಎಕರೆ ಸ್ಥಳದಲ್ಲಿ ನೈಸರ್ಗಿಕ ಸೌಂದರ್ಯ, ಹುಲ್ಲು ಹಾಸಿಗೆ , ಉದ್ಯಾನವನ, ನೀರು ಪೂರೈಕೆ , 1.2 ಕಿ. ಮೀ. ಕಾಲುದಾರಿ , 30 ಅಡಿಯೊಂದಕ್ಕೆ ಒಂದರಂತೆ ವಿದ್ಯುತ್ ದೀಪ , ಎರಡು ಕಾರಂಜಿಗಳು, ದ್ವಾರಬಾಗಿಲು ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಶೆಟ್ಟರ್ ವಿವರಿಸಿದರು.

ಈ ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿರುವ ನಿರ್ಮಿತಿ ಕೇಂದ್ರ ನೀಲನಕ್ಷೆ ರಚಿಸಿ ಕೈಗೆತ್ತಿಕೊಂಡಿದ್ದು, ಬರುವ ಏಪ್ರಿಲ್ ತಿಂಗಳ ಹೊತ್ತಿಗೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅವರು ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ತಿಳಿಸಿದರು. ಈಗಾಗಲೇ ಲೋಕಪ್ಪನ ಹಕ್ಕಲ ಬಳಿ ರೇಲ್ವೇ ಕೆಳಸೇತುವೆ ನಿರ್ಮಾಣ ಕಾರ್ಯ ಮುಗಿದಿದ್ದು, ರಾಜನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಸಿದ್ದಗೊಳ್ಳುತ್ತಿದೆ. ಈ ಅಭಿವೃಧ್ಧಿ ಕಾರ್ಯಗಳಿಂದಾಗಿ ನಗರಕ್ಕೆ ನೀಡಿದ ಸೌಕರ್ಯಗಳ ಭರವಸೆ ಈಡೇರಿದಂತಾಗಿದೆ ಎಂದು ಶೆಟ್ಟರ ಹೇಳಿದರು.

ಸಂಸದ ಪ್ರಹ್ಲಾದ ಜೋಶಿ ಅವರು ಮಾತನಾಡಿ, ಆಕರ್ಷಕ ನಿಸರ್ಗ ತಾಣದ ಅಭಿವೃಧ್ಧಿ ಪ್ರಕ್ರಿಯೆ ಆರಂಭವಾಗಿದೆ. ಈ ಸಮಯದಲ್ಲಿಯೇ ಈ ಬೆಟ್ಟದ ಅಭಿವೃಧ್ಧಿ ಕಾರ್ಯಗಳ ನಿರ್ವಹಣೆ ಬಗ್ಗೆಯೂ ಸಹ ಯೋಚಿಸಬೇಕು ಎಂದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X