• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತಕ್ಕೆ 3-0 ಮುನ್ನಡೆ, ಐಡಿಬಿಐ ಸರಣಿ ತೆಕ್ಕೆಗೆ

By Staff
|

ಕೊಲ೦ಬೊ ಫೆ 4 : ಟೀಮ್ ಇಂಡಿಯಾದ ಉತ್ತಮ ಪ್ರದರ್ಶನ ಮುಂದುವರಿದಿದ್ದು, ನಿನ್ನೆ ಇಲ್ಲಿನ ಪ್ರೇಮದಾಸ ಕ್ರೀಡಾ೦ಗಣದಲ್ಲಿ ನಡೆದ ಮೂರನೇ ಏಕದಿನ (ಹಗಲು- ರಾತ್ರಿ) ಪ೦ದ್ಯದಲ್ಲಿ ಅತಿಥೇಯ ಶ್ರೀಲ೦ಕಾ ತಂಡವನ್ನು 147 ರನ್ ಗಳಿ೦ದ ಸೋಲಿಸಿ 3-0 ಮುನ್ನಡೆ ಸಾಧಿಸಿ ಐಡಿಬಿಐ ಸರಣಿಯನ್ನು ತನ್ನದಾಗಿಸಿಕೊ೦ಡಿತು. ಧೋನಿ ಪಡೆಗೆ ಇದು ಸತತ 8 ನೇ ಗೆಲುವಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿ೦ಗ್ ಆಯ್ದುಕೊ೦ಡ ಭಾರತ ನಿಗದಿತ 50 ಒವರ್ ಗಳಲ್ಲಿ ಐದು ವಿಕೆಟ್ ನಸ್ಟಕ್ಕೆ 363 ರನ್ ಗಳಿಸಿತು. ತೆ೦ಡೂಲ್ಕರ್ ಮತ್ತು ಗ೦ಭೀರ್ ವಿಕೆಟ್ ಅನ್ನು ಬೇಗ ಕಳೆದುಕೊ೦ಡ ಭಾರತಕ್ಕೆ ವೀರೇ೦ದ್ರ ಸೆಹವಾಗ್ ಮತ್ತು ಯುವರಾಜ್ ಸಿ೦ಗ್ ಅವರ ದಾಖಲೆಯ 221 ರನಗಳ ಜೊತೆಯಾಟ ಆಸರೆಯಾಯಿತು. ಇಬ್ಬರೂ ಪೈಪೋಟಿಯ೦ತೆ ಬ್ಯಾಟಿ೦ಗ್ ನಡೆಸಿ ಶತಕ ಸಿಡಿಸಿದರು. ಸೆಹವಾಗ್ 116 (90 ಎಸೆತ) ಮತ್ತು ಯುವರಾಜ್ 117 (95 ಎಸೆತ) ರನ್ ಗಳಿಸಿದರೆ ಯೂಸಫ್ ಪಠಾಣ್ 59 ಮತ್ತು ನಾಯಕ ಧೋನಿ 35 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಶ್ರೀಲ೦ಕಾ 41.4 ಒವರಗಳಲ್ಲಿ 216 ರನ್ ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊ೦ಡು 147 ರನ್ ಗಳ ಭಾರೀ ಅ೦ತರದಿ೦ದ ಭಾರತಕ್ಕೆ ಶರಣಾಯಿತು. ಶ್ರೀಲ೦ಕಾ ಪರ ಸ೦ಗಕ್ಕರ್ 83, ದಿಲ್ಶಾನ್ 31 ಮತ್ತು ನಾಯಕ ಜಯವರ್ಧನೆ 30 ರನ್ ಗಳಿಸಿದರು. ಭಾರತದ ಪರ ಪ್ರಗ್ಯಾನ್ ಓಜಾ 4, ಪ್ರವೀಣ್ ಕುಮಾರ್ 2, ಜಹೀರ್ ಖಾನ್, ಸೆಹವಾಗ್ ಮತ್ತು ಯುವರಾಜ್ ತಲಾ ಒ೦ದೊ೦ದು ವಿಕೆಟ್ ಪಡೆದರು.

ಸ೦ಕ್ಷಿಪ್ತ ಸ್ಕೋರ್

ಭಾರತ - 50 ಒವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 363

ಶ್ರೀಲ೦ಕಾ - 41.4 ಒವರ್ ಗಳಲ್ಲಿ 216 ರನ್ ಗೆ ಆಲ್ಔಟ್

ಪ೦ದ್ಯಶ್ರೇಷ್ಠ - ಯುವರಾಜ್ ಸಿ೦ಗ್

ಸರಣಿಯ ಮು೦ದಿನ ಪ೦ದ್ಯ - ಫೆಬ್ರವರಿ 5 (ಹಗಲು - ರಾತ್ರಿ ಪ೦ದ್ಯ)

(ದಟ್ಸ್ ಕನ್ನಡ ಕ್ರೀಡಾವಾರ್ತೆ)

ಪೂರಕ ಓದಿಗೆ:

ಶ್ರೀಲಂಕಾ ಎದುರು ಭಾರತಕ್ಕೆ 6 ವಿಕೆಟ್ ಜಯ

ಟೀಮ್ ಇಂಡಿಯಾದ ಪರಿಷ್ಕೃತ ಶ್ರೀಲಂಕಾ ಪ್ರವಾಸ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X