ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಕ್ಷ ಕಲಾವಿದ ಕೆರೆಮನೆ ಶಂಭುಹೆಗಡೆ ಅಸ್ತಂಗತ

By Staff
|
Google Oneindia Kannada News

Keremane shambhu hegde with grandson sridhar
ಬೆಂಗಳೂರು, ಫೆ.2: ಖ್ಯಾತ ಯಕ್ಷಗಾನ ಕಲಾವಿದ, ಅಕಾಡೆಮಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ ಇಂದು ಮುಂಜಾನೆ ಸುಮಾರು 4:30 ಗಂಟೆಗೆ ನಿಧನರಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಗುಣವಂತೆಯ ಇಡುಗುಂಜಿ ಮೇಳದಲ್ಲಿ ಸಂಭ್ರಮದಿಂದ ಪಾಲ್ಗೊಂಡು ಲವ-ಕುಶ ಪ್ರಸಂಗಕ್ಕಾಗಿ ತಮ್ಮ ಮೆಚ್ಚಿನ ರಾಮನ ವೇಷ ಧರಿಸಿ ರಂಗವೇರಿದ್ದ ಶಂಭು ಹೆಗ್ಗಡೆ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿದರು ಎಂದು ಕುಟುಂಬದರು ತಿಳಿಸಿದ್ದಾರೆ.

ಬಡಗುತಿಟ್ಟಿನ ಇಡುಗುಂಜಿ ಮಹಾಗಣಪತಿ ಯಕ್ಷಗಾನ ಮಂಡಲಿಯ ಶಂಭು ಹೆಗ್ಗಡೆ ಅದ್ಭುತ ಕಲಾವಿದರಾಗಿದ್ದರು. ಖ್ಯಾತ ಯಕ್ಷಗಾನ ಕಲಾವಿದರಾಗಿದ್ದ ಇವರ ತಂದೆ ಕೆರೆಮನೆ ಶಿವರಾಮ ಹೆಗಡೆ ಅವರಂತೆ ಯಕ್ಷ ಕಲೆಗೆ ಶಂಭು ಹೆಗಡೆ ಹೆಸರು ತಂದು ಕೊಟ್ಟವರು. ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕೆರೆಮನೆಯ ಹವ್ಯಕ ಬ್ರಾಹ್ಮಣರಾದ ಶಿವರಾಮ ಹೆಗಡೆ ಅವರು ಮಹಾಗಣಪತಿ ಯಕ್ಷಗಾನ ಮಂಡಲಿಯನ್ನು 1934 ರಲ್ಲಿ ಕಟ್ಟಿ ಬೆಳೆಸಿದವರು. ಅಕ್ಟೋಬರ್ 6,1938 ರಲ್ಲಿ ಶಂಭುಹೆಗಡೆ ಅವರು ಜನಿಸಿದ್ದರು.

ತಂದೆಯ ಹಾದಿಯನ್ನೇ ಹಿಡಿದ ಶಂಭು ಹೆಗಡೆ ಅವರು ಸಾಂಪ್ರದಾಯಿಕ ಶೈಲಿಗೆ ಆಧುನಿಕತೆಯ ಸ್ಪರ್ಶ ನೀಡಿದರು. ಯಕ್ಷ ಕಲೆಯತ್ತ ಯುವಜನರನ್ನು ಕರೆ ತಂದರು.ದೇಶದ ಹಲವೆಡೆ ಯಕ್ಷಗಾನದ ಪ್ರಚಾರಕ್ಕೆ ಟೊಂಕ ಕಟ್ಟಿ ನಿಂತರು. ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಗಳಿಸಿದರು. ರಂಗಾಯಣದ 'ರಂಗ ಸಮಾಜ'ದ ಸದಸ್ಯರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ರಾಜ್ಯ ಪ್ರಶಸ್ತಿ ವಿಜೇತ 'ಪರ್ವ' ಚಿತ್ರದಲ್ಲಿ ಅಭಿನಯಿಸಿದ್ದರು.

ಬಲರಾಮ, ಜರಾಸಂಧ, ಕಾರ್ತವೀರ್ಯಾರ್ಜುನ ಹಾಗೂ ದುರ್ಯೋಧನ ಪಾತ್ರಗಳಲ್ಲಿ ತಾವೇ ತಾವಾಗಿ ರಂಗದ ಮೇಲೆ ಮಿಂಚಿದ್ದರು. ಇವರ ಮಗ ಶಿವಾನಂದ ಹೆಗಡೆ ಹಾಗೂ ಇತ್ತೀಚೆಗೆ ರಂಗ ಪ್ರವೇಶ ಮಾಡಿದ ಮೊಮ್ಮಗ ಶ್ರೀಧರ ಹೆಗಡೆ ಅವರ ಮೇಲೆ ಕೆರೆಮನೆ ಪರಂಪರೆಯನ್ನು ಉಳಿಸಿ, ಬೆಳಸಿಕೊಂಡು ಹೋಗುವ ಜವಾಬ್ದಾರಿಯನ್ನು ಶಂಭು ಹೆಗಡೆ ಅವರು ಬಿಟ್ಟು ಹೋಗಿದ್ದಾರೆ. ಅಗಲಿದ ರಂಗಚೇತನಕ್ಕೆ ನಾಡಿನ ಅನೇಕ ಗಣ್ಯರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X