ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯನಗರ ತ್ರಿವಳಿ ಕೊಲೆಗಾರ ಬಂಧನ

By Staff
|
Google Oneindia Kannada News

ಬೆಂಗಳೂರು, ಜ. 28 : ಐಟಿ ಸಿಟಿಯಲ್ಲಿ ತಲ್ಲಣ ಉಂಟು ಮಾಡಿದ್ದ ತಿಲಕ ನಗರ ತ್ರಿವಳಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರೆ. ಮಂಗಳೂರು ಸಮೀಪ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಜಯನಗರ ಟಿ ಬ್ಲಾಕ್, 18ನೇ ಮುಖ್ಯ ರಸ್ತೆಯಲ್ಲಿರುವ ಪ್ರಸಿದ್ಧ ಹೋಟೆಲ್ ವೊಂದರಲ್ಲಿ ಪಾನಿಪುರಿ ನೀಡುವ ಕೆಲಸ ಮಾಡುತ್ತಿದ್ದ ಗೋವಿಂದ (28) ಎಂಬಾತನನ್ನು ಮೂಡುಬಿದರೆ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆತನನ್ನು ನಗರಕ್ಕೆ ಇಂದು ಕರೆ ಕರೆತಂದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕುತೂಹಲಕಾರಿ ಸಂಗತಿ ಎಂದರೆ ಈತ ಕೊಲೆಯಾದ ಇಡೀ ಕುಟುಂಬಕ್ಕೆ ಪರಿಚಿತನಾಗಿದ್ದು, ಹತ್ಯೆಗೀಡಾದ ಜಯಶ್ರೀ ನಡೆಸುತ್ತಿದ್ದ ಹಣ ಹೂಡಿಕೆ ವ್ಯವಹಾರದಲ್ಲಿ ಭಾಗಿಯಾಗಿದ್ದ. ಈ ಸಂಬಂಧ ತಲೆದೋರಿದ ವೈಮನಸ್ಯದ ಹಿನ್ನೆಲೆಯಲ್ಲಿ ಮೂವರನ್ನೂ ಹತ್ಯೆ ಮಾಡಿದ್ದಾನೆ. ಜ.20 ರಂದು ಜಯನಗರ ಜನರಲ್ ಆಸ್ಪತ್ರೆ ಹಿಂಬದಿ ಇರುವ ಮನೆಯಲ್ಲಿ ಸತ್ಯಭಾಮ, ಸೊಸೆ ಜಯಶ್ರೀ, ಹಾಗೂ ಹಿರಿಯ ಮಗಳು ವಿಜಯಲಕ್ಷ್ಮಿ ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು.
***
ಕಾರ್ತೀಕ್ ಸೋಮಯ್ಯಗೆ ನ್ಯಾಯಾಂಗ ಬಂಧನ

ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ನಾಲ್ವರ ಸಾವಿಗೆ ಕಾರಣನಾಗಿದ್ದ ಕಾರ್ತೀಕ್ ಸೋಮಯ್ಯನನ್ನು ಫೆ 9 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎರಡನೇ ಮೆಟ್ರೋ ಪಾಲಿಟಿನ್ (ಸಂಚಾರ) ನ್ಯಾಯಾಲಯಕ್ಕೆ ಆತನನ್ನು ಮಂಗಳವಾರ ಹಾಜರುಪಡಿಸಲಾಗಿತ್ತು. ಸೋಮಯ್ಯ ಪರ ವಕೀಲ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ಬುಧವಾರ ವಿಚಾರಣೆ ನಡೆಸಲಿದೆ. ಗುಂಡಿನ ಗಮ್ಮತ್ತಿನಲ್ಲಿ ಕಾರ್ತೀಕ್ ಸೋಮಯ್ಯ ಇಂದಿರಾನಗರ ದೂಪನಹಳ್ಳಿ ಬಳಿ ನಾಲ್ಕು ಮಂದಿ ಅಮಾಯಕರ ಪ್ರಾಣ ತೆಗೆದುಕೊಂಡಿದ್ದ. ಆರೋಪಿ ವಿರುದ್ಧ ಐಪಿಸಿ ಹಾಗೂ ಮೋಟಾರ್ ವಾಹನ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X