ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರದಲ್ಲಿ ಶವಾಸನ ಮಾಡಿದ ಶಿರೂರು ಶ್ರೀಗಳು

By Staff
|
Google Oneindia Kannada News

ಉಡುಪಿ ಜ 27 : ಸೂರ್ಯಗ್ರಹಣದಿಂದ ಲೋಕಕ್ಕೆ ಆಗುವ ದೋಷ ನಿವಾರಣೆಗೆ ಇಲ್ಲಿನ ಅರಬ್ಬೀಸಮುದ್ರ ತೀರದಲ್ಲಿ 1 ಗಂಟೆ 25 ನಿಮಿಷ ಶವಾಸನದ ಮೂಲಕ ಉಡುಪಿ ಭಾವಿ ಪರ್ಯಾಯ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ತೇಲುತ್ತಾ ಜಪ ನಡೆಸಿದರು.

ಸೂರ್ಯಗ್ರಹಣದ ದಿನವಾದ ನಿನ್ನೆ ಮಧ್ಯಾಹ್ನ 2.30 ಕ್ಕೆ ಸಮುದ್ರಕ್ಕೆ ಇಳಿದ ಶ್ರೀಗಳು, ಸಮುದ್ರ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಅಂಗಾತ ಮಲಗಿ ಶವಾಸನ ಹಾಕಿ ವರುಣ ಜಪ ಆರಂಭಿಸಿದರು. ಸಮುದ್ರದ ಅಲೆ ಅವರನ್ನು ನಿಧಾನವಾಗಿ ಸಮುದ್ರದ ಮಧ್ಯೆ ಸೆಳೆದೊಯ್ಯಲಾರ೦ಭಿಸಿತು. ಸುಮಾರು 2 ಕಿ. ಮೀ ನಷ್ಟು ದೂರ ಸಮುದ್ರದಲ್ಲಿ ಮಲಗಿ ವಿವಿಧ ಮಂತ್ರಗಳನ್ನು ಪಠಿಸಿ ಗ್ರಹಣ ಮೋಕ್ಷದ ಸಮಯದಲ್ಲಿ ಜಪಕ್ಕೆ ಮಂಗಳ ಹಾಡಿದರು.

ಸಮುದ್ರದಲ್ಲಿ ಮುಂದೆ ಹೋಗುತ್ತಿದಂತೆ ವಿಚಿತ್ರ ನಿಶ್ಯಬ್ದದ ಅನುಭವವಾಗುತ್ತಿತ್ತು. ನೀರಿನ ಕುಲಕಾಟ ಬಿಟ್ಟರೆ ಬೇರೆ ಯಾವುದೇ ಅನುಭವವಾಗುತ್ತಿರಲಿಲ್ಲ. ದೇಹ ಸಂಪೂರ್ಣ ಹಗುರವಾದಂತೆ ಭಾಸವಾಗುತ್ತಿತ್ತು ಎಂದು ಶ್ರೀಗಳು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)
ಜ.26ರಂದು ವರ್ಷದ ಮೊದಲ ಸೂರ್ಯಗ್ರಹಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X