• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪದ್ಮವಿಭೂಷಣ ಇಸ್ರೊಸಿಬ್ಬಂದಿಗೆ ಅರ್ಪಣೆ: ನಾಯರ್

By Staff
|

ನವದೆಹಲಿ, ಜ. 26 : ಕರ್ನಾಟಕದ ಖ್ಯಾತ ವಿಜ್ಞಾನಿ, ಇಸ್ರೋ ಚೇರಮನ್ ಮಾಧವನ್ ನಾಯರ್ (ಪದ್ಮವಿಭೂಷಣ) ಐಶ್ವರ್ಯಾ ರೈ ಬಚ್ಚನ್, ಬನ್ನಂಜೆ ಗೋವಿಂದಾಚಾರ್ಯ, ಮತ್ತೂರು ಕೃಷ್ಣಮೂರ್ತಿ, ಶಶಿ ದೇಶಪಾಂಡೆ, ಪಂಕಜ್ ಅಡ್ವಾಣಿ, ಬಿ ಆರ್ ಶೆಟ್ಟಿ ಅವರಿಗೆ ಸಹಿತ 133 ಮಂದಿ ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ದೇಶದ ಎರಡನೇ ಅತ್ಯುನ್ನತ ನಾಗರಿಕ ಸನ್ಮಾನ ಪದ್ಮವಿಭೂಷಣಕ್ಕೆ ಖ್ಯಾತ ಪರಿಸರವಾದಿ ಸುಂದರ್ ಲಾಲು ಬಹುಗುಣ, ವಿಜ್ಞಾನಿ ಮಾಧವನ್ ನಾಯರ್, ಮಿಷನರಿ ಆಫ್ ಚಾರಿಟೇಸ್ ನ ಮುಖ್ಯಸ್ಥ ಸಿಸ್ಟರ್ ನಿರ್ಮಲಾ, ಖ್ಯಾತ ಅಣು ವಿಜ್ಞಾನಿ ಅನಿಲ್ ಕಾಕೋಡ್ಕರ್ ಸಹಿತ 10 ಮಂದಿ ಪಾತ್ರರಾಗಿದ್ದಾರೆ. ದೇಶದ ಅತ್ಯುನ್ನತ ಪ್ರಶಸ್ತಿ ಭಾರತರತ್ನವನ್ನು ಪಂಡಿತ್ ಭೀಮಸೇನ್ ಜೋಷಿ ಅವರ ಹೆಸರನ್ನು ಈಗಾಗಲೇ ಘೋಷಿಸಲಾಗಿದೆ.

ಸ್ವೀಡನ್ ಮೂಲದ ವಿಶ್ವ ಸಮುದಾಯದ ಪ್ರಥಮ ಕುಲಪತಿ ಚಂದ್ರಿಕಾ ಪ್ರಸಾದ್ ಶ್ರೀವಾಸ್ತವ, ಖ್ಯಾತ ಇತಿಹಾಸಕಾರ ಡಿ ಪಿ ಚಟ್ಟೋಪಾಧ್ಯಾಯ, ವೈದ್ಯಕೀಯ ರಂಗದ ಜಸ್ಬೀರ್ ಸಿಂಗ್ ಬಜಾಜ್ ಮತ್ತು ಪುರುಷೋತ್ತಮ ಲಾಲ್, ಮಾಜಿ ರಾಜ್ಯಪಾಲ ಗೋವಿಂದ ನಾರಾಯಣ ಹಾಗೂ ಉದ್ಯಮಿ ಎ ಎಸ್ ಗಂಗೂಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಮೂರನೇ ಅತ್ಯುನ್ನತ ಸನ್ಮಾನ ಪದ್ಮಭೂಷಣಕ್ಕೆ ಬೀಜಿಂಗ್ ಒಲಿಂಪಿಕ್ಸ್ ನ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ, ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, ಅರ್ಥ ಶಾಸ್ತ್ರಜ್ಞ ಇಷಾರ್ ಜಡ್ಜ್ ಅಹ್ಲುವಾಲಿಯಾ, ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಸೇರಿ 30 ಮಂದಿ ಪಾತ್ರರಾಗಿದ್ದಾರೆ. ಭಾರತದ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಸ್ಪಿನ್ನರ್ ಹರ್ಬಜನ್ ಸಿಂಗ್, ಗಾಯಕ ಉದಿತ್ ನಾರಾಯಣ್, ನಟಿ ಐಶ್ವರ್ಯಾ ರೈ ಬಚ್ಚನ್, ತಾಜ್ ಹೋಟೆಲ್ ಸಮೂಹದ ಆರ್ ಕೆ ಕೃಷ್ಣ ಕುಮಾರ್, ಖ್ಯಾತ ಉದ್ಘೋಷಿಕ ಅಮೀನ್ ಸಯಾನಿ, ನಟಿ ಹೆಲೆನ್, ಸಂಗೀತಕಾರ ಹೃದಯನಾಥ ಮಂಗಷ್ಕರ್, ಮಾಜಿ ಹಾಕಿ ಆಟಗಾರ ಬಲ್ಬೀರ್ ಸಿಂಗ್ ಖುಲ್ಲಾರ್ ಸೇರಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X