ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕರ್ನಾಟಕಕ್ಕೆ ಭರಪೂರ ಯೋಜನೆ

By Staff
|
Google Oneindia Kannada News

ಬೆಳಗಾವಿ, ಜ. 25 : ಉತ್ತರ ಕರ್ನಾಟಕಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತಷ್ಟು ಕೊಡುಗೆಗಳ ಸುರಿಮಳೆಗೆರೆದಿದ್ದಾರೆ. ಕಳೆದ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಕಟಿಸಿದ್ದ ಕೊಡುಗೆಗಳ ಪಟ್ಟಿಗೆ ಹೊಸ 19 ಕಾರ್ಯಕ್ರಮಗಳು ಸೇರ್ಪಡೆಯಾಗಿವೆ. ಈ ಪೈಕಿ ಬೆಳಗಾವಿ ಅಭಿವೃದ್ಧಿಗೆ ಪ್ರತ್ಯೇಕ ಕಾರ್ಯಕ್ರಮಗಳಿವೆ. ಆ ಮೂಲಕ ಎರಡನೇ ಸಲ ಗಡಿ ಭಾಗದಲ್ಲಿ ನಡೆದ ಅಧಿವೇಶನವನ್ನೂ ಚರಿತ್ರಾರ್ಹಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.

ಪ್ರತಿಪಕ್ಷಗಳ ಟೀಕೆ, ಟಿಪ್ಪಣಿಗಳ ನಡುವೆ ತಾಳ್ಮೆ ಕಳೆದುಕೊಳ್ಳದೆ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಶನಿವಾರ ಮಧ್ಯಾಹ್ನ ಒಂದು ತಾಸಿಗೂ ಹೆಚ್ಚು ಕಾಲ ಉತ್ತರಿಸಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಮುಂದಿನ ಬಜೆಟ್ ರೈತನೇ ಕೇಂದ್ರ ಬಿಂದು. ತಜ್ಞರ ನೇತೃತ್ವದಲ್ಲಿ ರಚಿಸಿರುವ ಕೃಷಿ ಮಿಷನ್ ನೀಡುವ ವರದಿ ಮೇರೆಗೆ ಬಜೆಟ್ ಸಿದ್ಧಗೊಳಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಉತ್ತರ ಕರ್ನಾಟಕಕ್ಕೆ ನೀಡಿದ ಹೊಸ ಕೊಡುಗೆಗಳು

* ಮುಧೋಳದಲ್ಲಿ ಬೆಲ್ಲದ ಸಂಸ್ಕರಣಾ ಘಟಕ ಸ್ಥಾಪನೆ- 5 ಕೋಟಿ ರುಪಾಯಿ.
* ಧಾರವಾಡದಲ್ಲಿ ಕೃಷಿ ವಿವಿಯಲ್ಲಿ ಹವಾಮಾನ ಬದಲಾವಣೆ ಕೇಂದ್ರ - 5 ಕೋಟಿ ರುಪಾಯಿ.
* ಚಿಕ್ಕೋಡಿಯ ಮುಂಗೂರು ಗ್ರಾಮದ 50 ಎಕರೆ ಪ್ರದೇಶದಲ್ಲಿ ಬೆಳ್ಳಿ ಆಭರಣ ತಯಾರಿಕಾ ಘಟಕ -5 ಕೋಟಿ ರುಪಾಯಿ.
* ಬ್ಯಾಡಗಿಯಲ್ಲಿ ಮೆಣಿಸಿನಕಾಯಿ ಹಾಗೂ ಇತರೆ ದಿನಸಿಗಳ ಸಂಸ್ಕರಣ ಘಟಕ - 10 ಕೋಟಿ ರುಪಾಯಿ.
* ಬಸವಕಲ್ಯಾಣದಲ್ಲಿ 20 ಎಕರೆ ಜಾಗದಲ್ಲಿ ಅಟೋ ಪಾರ್ಕ್ - 10 ಕೋಟಿ ರುಪಾಯಿ.
* ಕೊಪ್ಪಳದಲ್ಲಿ 10 ಸಾವಿರ ಎಕರೆ ಪ್ರದೇಶದಲ್ಲಿ ಕೆಐಎಡಿಬಿ ಮೂಲಕ ಉಕ್ಕು ಪಾರ್ಕ್.
* ಧಾರವಾಡ-ಬೆಳಗಾವಿ ನೇರ ರೈಲು ಸಂಪರ್ಕ, ಕುಡಚಿ ಬಾಗಲಕೋಟ, ಗದಗ-ಹಾವೇರಿ, ಆಲಮಟ್ಟಿ-ಕೊಪ್ಪಳ ಯೋಜನೆಗಳಿಗೆ ರಾಜ್ಯ ಸರ್ಕಾರದ ಶೇ.50 ರಷ್ಟು ಹಣ.
* ಉತ್ತರ ಕರ್ನಾಟಕ ಫ್ಲೋರೈಡ್ ಬಾಧಿತ 848 ಗ್ರಾಮಗಳಿಗೆ 78 ಕುಡಿಯುವ ನೀರು ಯೋಜನೆ - 600 ಕೋಟಿ ರುಪಾಯಿ
* ಕಾರವಾರದ ಠ್ಯಾಗೋರ್ ಬೀಚ್ ಅಭಿವೃದ್ಧಿ - 5 ಕೋಟಿ ರುಪಾಯಿ.
* ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಮತ್ತು ಗುಡ್ಡಗಾಡು ಗ್ರಾಮಗಳಿಗೆ - 15 ಕೋಟಿ ರುಪಾಯಿ.
* ಚಿಮ್ಮಲಗಿ ಏತ ನೀರಾವರಿ ಯೋಜನೆ ಅಡಿ 20 ಟಿಎಂಸಿ ನೀರನ್ನು ಎತ್ತಿ ಮುದ್ದೇಬಿಹಾಳ, ಬಸವನ ಬಾಗೇವಾಡಿ, ಸಿಂದಗಿ, ಇಂಡಿ ಮತ್ತು ವಿಜಾಪುರ ತಾಲ್ಲೂಕಿಗಳ 87.067 ಹೆಕ್ಟರ್ ಪ್ರದೇಶಕ್ಕೆ ನೀರಾವರಿ.

ಬೆಳಗಾವಿಗೆ ವಿಶೇಷ ಉಡುಗೂರೆ

* ವ್ಯಾಕ್ಸಿನ್ ಡಿಪೋ ಜಾಗದಲ್ಲಿ ಹೆರಿಟೇಜ್ ಬೊಟಾನಿಕಲ್ ಪಾರ್ಕ್, ಸಮಗ್ರ ವರದಿ ತಯಾರಿಕೆಗೆ ತಜ್ಞರ ಸಮಿತಿ - 5 ಕೋಟಿ ರುಪಾಯಿ.
* ಖಾಸಗಿ ಸಹಭಾಗಿತ್ವದಲ್ಲಿ 150 ಕೋಟಿ ರುಪಾಯಿ ವೆಚ್ಚದಲ್ಲಿ 38 ಕಿಮೀ ವರ್ತುಲ ರಸ್ತೆ ನಿರ್ಮಾಣ, ಭೂಸ್ವಾಧೀನಕ್ಕೆ - 5 ಕೋಟಿ ರುಪಾಯಿ
* ನೆನೆಗುದಿಗೆ ಬಿದ್ದಿರುವ ಕಣಬರ್ಗಿ ಅಟೋ ಪಾರ್ಕ್ ಗೆ ರಾಷ್ಟ್ರೀಯ ಹೆದ್ದಾರಿ 4 ರಿಂದ ಸಂಪರ್ಕ ರಸ್ತೆ.
* ರಾಷ್ಟ್ರೀಯ ತೋಟಗಾರಿಕೆ ಮಿಷನ್ ಸಹಯೋಗದಲ್ಲಿ ಸಗಟು ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆ ಸ್ಥಾಪನೆಗೆ ಸಹಾಯಧನ.
* ಕರ್ನಾಟರ ಸಕ್ಕರೆ ಸಂಸ್ಥೆ ಅಭಿವೃದ್ಧಿ ಮತ್ತು ಉನ್ನತೀಕರಣ 5 ಕೋಟಿ.
* ಒಳಚರಂಡಿ ವ್ಯವಸ್ಥೆ ನವೀಕರಣಕ್ಕೆ 120 ಕೋಟಿ ರುಪಾಯಿ.

(ದಟ್ಸ್ ಕನ್ನಡ ವಾರ್ತೆ)
ತುಮರಿ ಸೇತುವೆ ಶೀಘ್ರ ನಿರ್ಮಾಣ, ಯಡಿಯೂರಪ್ಪ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X