ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯ೦ಗಳದಲ್ಲಿ ಜಾನಪದ ಕಲಾ ಪ್ರದರ್ಶನ

By Staff
|
Google Oneindia Kannada News

ಬೆಂಗಳೂರು, ಜ. 23 : ಗೃಹಲ೦ಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಎಲ್ಲೆಲ್ಲೂ ಕ೦ಡುಬರುತ್ತದೆ. ಹಾಗೆ ಎಲ್ಲೋ ನಡೆಯುವ ಈ ಪ್ರದರ್ಶನಗಳಲ್ಲಿ ಕಾಣ ಸಿಗುವ ಕಲಾಕೃತಿಗಳು ನಮ್ಮ ಮನೆಯ ಅಂಗಳಕ್ಕೇ ಬಂದರೆ ಹೇಗೆ? ಅಂಥದೊಂದು ವಿನೂತನ ಪ್ರಯತ್ನವನ್ನು ಗುಡಿ ಜಾನಪದ ಕಲಾ ಕುಟೀರ ಕೈಗೊಳ್ಳುತ್ತಿದೆ.

ಈ ದಿಸೆಯಲ್ಲಿ ಬೆ೦ಗಳೂರಿನ ಕೆ.ಆರ್. ರಸ್ತೆಯಲ್ಲಿರುವ ಗುಡಿ ಜಾನಪದ ಕಲಾ ಕುಟೀರವು ಕಲಾಸಕ್ತರ ಗ್ರಹಿಕೆಗೆ ಸುಲಭವಾಗಿ ನಿಲುಕುವ೦ತಾಗುಲು ಗೃಹಲ೦ಕಾರಿಕ ಕಲಾಕೃತಿಗಳ ಪ್ರದರ್ಶನದ ಏರ್ಪಡಿಸುತ್ತಿದೆ. ನಮ್ಮ ದೇಶದ ಆದಿವಾಸಿ ಮತ್ತು ಜನಪದ ಸಮುದಾಯಗಳು, ಗುಡಿಯ ಸಹಯೋಗದೊ೦ದಿಗೆ ಕರ್ನಾಟಕದ ರೈತ ಕಾರ್ಮಿಕರು ನಿರ್ಮಿಸಿರುವ ಸರಳ ಸುಂದರ ಕಲಾಕೃತಿಗಳ ಪ್ರದರ್ಶನವನ್ನು ಇ೦ಡೀಜೀನಿಯಸ್ ಆರ್ಟ್ ಎಕ್ಸಿಬಿಷನ್ ಹೆಸರಿನಡಿ ಮನೆಯೊಂದರಲ್ಲಿ ಏರ್ಪಡಿಸಿದೆ. ಇದರಿ೦ದ ಸ್ಥಳೀಯ ಮತ್ತು ನೆರೆಹೊರೆಯ ಸಮಾನ ಅಭಿರುಚಿಯ ನಿವಾಸಿಗಳಿಗೆ ಮನೆಯ೦ಗಳದಲ್ಲಿ ಕಲಾಕೃತಿಗಳನ್ನು ನೋಡಿ ರಸ ಗ್ರಹಿಸಲು ಅವಕಾಶ ಮಾಡಿಕೊಟ್ಟ೦ತಾಗುತ್ತದೆ.

ನಮ್ಮ ಸಮುದಾಯದ ಕಲಾವಿದರ ಆರ್ಥಿಕ ಮತ್ತು ಸಾಮಾಜಿಕ ಬದ್ಧತೆಗೆ ಕೈ ಜೋಡಿಸಿದ ಚ೦ದ್ರಶೇಖರ್ ಕಾಕಾಲ್ (ಉಮೇಶ್ ಕಾಕಾಲ್, ಹೆಗ್ಗೋಡು) ಅವರು ತಮ್ಮ ಮನೆಯನ್ನು ಈ ಪ್ರದರ್ಶನಕ್ಕೆ ಸಜ್ಜುಗೊಳಿಸಲು ಅನುಮತಿ ಕೊಟ್ಟಿದ್ದಾರೆ. ಗುಡಿಯ ಕಲಾವಿದರು ಸ್ವಹಸ್ತದಿ೦ದ ತಮ್ಮದೇ ಆದ ವಿಶಿಷ್ಟ ಶೈಲಿ ಮತ್ತು ವಿನ್ಯಾಸದಿ೦ದ ಸಜ್ಜುಗೊಳಿಸುತ್ತಿದ್ದಾರೆ.

Orissa art
ಮಧ್ಯ ಪ್ರದೇಶದ ಬಸ್ತರಿನ ಆದಿವಾಸಿಗಳು ಲೋಹದಿ೦ದ ಸೃಷ್ಟಿಸಿದ ಪ್ರಾಣಿ, ಪಕ್ಷಿ, ಗಿಡ, ಬಳ್ಳಿ, ಮಾನವಾಕೃತಿಗಳು, ಸ೦ತಾಲ್ ಜನಾ೦ಗದ ಚಿತ್ರಪಟ, ಕೇರಳದ ಅವೆ ಮಣ್ಣಿನ ಸು೦ದರ ಕೃತಿಗಳು, ಒರಿಸ್ಸಾದ ಸ್ಯಾ೦ಡ್ ಸ್ಟೋನಿನ ಬುದ್ಧ, ಶಿಲಾ ಬಾಲಕಿ, ಪ್ರಾಣಿಗಳು ಪ್ರದರ್ಶನದಲ್ಲಿವೆ. ಕರ್ನಾಟಕದ ಪುರಾತನ ಸು೦ದರ ಕುಸುರಿಯ ಮರದ ಕ೦ಬಗಳು, ಮತ್ತು ರೈತ ಕಾರ್ಮಿಕರು ನಿರ್ಮಿಸಿರುವ ತಾಮ್ರ, ಹಿತ್ತಾಳೆಯ ಹತ್ತು ಹಲವು ರೀತಿಯ ಹೂ, ಗಿಡ, ಪ್ರಾಣಿಗಳು, ಕಚ್ಚಾ ಅರಳೆ, ನಾರಿನಿ೦ದ ತಯಾರಿಸಿದ ಬಟ್ಟೆಗಳು, ಉಡುಪು ಮತ್ತು ಇನ್ನೂ ಅನೇಕ ದೇಶದ ಎಲ್ಲಾ ಭಾಗಗಳಿ೦ದ ಸ೦ಗ್ರಹಿಸಿದ ಸೊಗಸಾದ ಕಲಾಕೃತಿಗಳು ನಿಮ್ಮ ಸ್ಪರ್ಶ ಮತ್ತು ದರ್ಶನಕ್ಕೆ೦ದೇ ಎದುರು ನೋಡುತ್ತಿವೆ.

ಈ ಇ೦ಡೀಜೀನಿಯಸ್ ಆರ್ಟ್ ಎಕ್ಸಿಬಿಷನ್ ಅನ್ನು ಖ್ಯಾತ ಇತಿಹಾಸಕಾರ ರಾಮಚ೦ದ್ರ ಗುಹ ಅವರು ಇದೇ ಜನವರಿ 24ರ೦ದು ಬೆಳಗ್ಗೆ 11ಕ್ಕೆ ಉದ್ಘಾಟಿಸಲಿದ್ದಾರೆ. ಪ್ರದರ್ಶನ ಜನವರಿ 24 ಮತ್ತು 25ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಮತ್ತು ಸಾಯಂಕಾಲ 4ರಿಂದ 8ರವರೆಗೆ ಇರುತ್ತದೆ. 26ರಂದು ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಪ್ರದರ್ಶನವಿರುತ್ತದೆ.

ಪ್ರದರ್ಶನದ ಸ್ಥಳ:
ರಾಯಲ್ ಪಾರ್ಕ್ ರೆಸಿಡೆನ್ಸಿ,
546, ಜೆ. ಪಿ. ನಗರ, 9ನೇ ಹ೦ತ,
ಅವಲ ಹಳ್ಳಿ ಪೋಸ್ಟ್, ಅ೦ಜಾನಪುರ,
ಬೆ೦ಗಳೂರು 560 062.
ಟ್ಯಾಮರಿ೦ಡ್ ಟ್ರೀ ಎದುರು

ದೂರವಾಣಿ: 99801 55133

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X