ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ, ಸುವರ್ಣ ಸೌಧಕ್ಕೆ ಯಡಿಯೂರಪ್ಪ ಅಡಿಗಲ್ಲು

By Staff
|
Google Oneindia Kannada News

ಬೆಳಗಾವಿ, ಜ. 22 : ತೀವ್ರ ವಿವಾದದ ನಡುವೆಯೇ ಇಂದು ಬೆಳಗ್ಗೆ ನಗರದ ಹೊರವಲಯದ ಹಲಗಾ ಪ್ರದೇಶದಲ್ಲಿ ನೂತನ ಸುವರ್ಣಸೌಧ ಕಟ್ಟಡಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದರು. ಅಧಿಕೃತವಾಗಿ ಆಹ್ವಾನ ನೀಡಿಲ್ಲ ಎನ್ನುವ ಕಾರಣಕ್ಕೆ ಪ್ರತಿಪಕ್ಷಗಳ ಮುಖಂಡರು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿರುವುದು ಎದ್ದು ಕಂಡಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, 230 ಕೋಟಿ ರುಪಾಯಿ ವೆಚ್ಚದಲ್ಲಿ ಸುವರ್ಣ ಸೌಧವನ್ನು ನಿರ್ಮಿಸಲಾಗುತ್ತಿದ್ದು, ಮುಂದಿನ ವರ್ಷದ ಅಧಿವೇಶನವನ್ನು ನೂತನ ಕಟ್ಟಡದಲ್ಲಿಯೇ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಅಗತ್ಯ ಸಹಾಯ ಸೌಕರ್ಯವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಪಕ್ಷಗಳ ಗೈರು ಹಾಜರಿ ಬಗ್ಗೆ ಗಮನ ಸೆಳೆದಾಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಯಡಿಯೂರಪ್ಪ, ಬಿಜೆಪಿ ಸರ್ಕಾರ ಅಧಿಕಾರ ಬಂದಾಗನಿಂದಲೂ ಪ್ರತಿಪಕ್ಷಗಳು ಸಹಕಾರ ನೀಡುತ್ತಿಲ್ಲ. ಪ್ರತಿಯೊಂದರಲ್ಲಿ ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ ಎಂದರು. ಸರ್ಕಾರದ ಪ್ರತಿ ಹೆಜ್ಜೆಯಲ್ಲೂ ರಾಜಕೀಯ ಬೆರೆಸಿ ಕಾಲೆಳೆಯುವ ಕಾರ್ಯದಲ್ಲಿ ವಿರೋಧ ಪಕ್ಷಗಳು ಮಗ್ನವಾಗಿವೆ ಆಕ್ರೋಶ ವ್ಯಕ್ತಪಡಿಸಿದರು.

ಸುವರ್ಣ ಸೌಧ ಕಟ್ಟಡಕ್ಕೆ ಅಡಿಗಲ್ಲು ಸಮಾರಂಭಕ್ಕೆ ಪ್ರತಿಪಕ್ಷಗಳಿಗೆ ಅಧಿಕೃತ ಆಹ್ವಾನ ನೀಡಿದರೂ ಗೈರು ಹಾಜರು ಆಗಿರುವುದು ರಾಜ್ಯದ ಐದೂವರೆ ಕೋಟಿ ಜನರಿಗೆ ಮೋಸ ಮಾಡಿದಂತೆ ಎಂದು ಆರೋಪಿಸಿದರು. ಈ ರಾಜ್ಯ ಜನತೆ ಬಿಜೆಪಿಗೆ ಜನಾದೇಶ ನೀಡಿದೆ. ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಾಗಿನಿಂದಲೂ ಕೆಲ ನಾಯಕರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ಮುಖಂಡರ ಮೇಲೆ ಹರಿದಾಯ್ದರು. ವಿನಾಕಾರಣ ಸರ್ಕಾರದ ವಿರುದ್ಧ ಹರಿಹಾಯುವುದನ್ನು ಪ್ರತಿಪಕ್ಷಗಳು ಕೈ ಬಿಡಬೇಕು ಎಂದು ಕಿವಿ ಮಾತು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಬೆಳಗಾವಿಲಿ ಸುವರ್ಣ ಸೌಧ ತಲೆಯೆತ್ತಲಿದೆ!!!
ಸುವರ್ಣ ಸೌಧ ಅಡಿಗಲ್ಲಿಗೆ ಪ್ರತಿಪಕ್ಷಗಳ ಕಿಡಿ
ಆರನೇ ದಿನದ ಕಲಾಪ ಗಣಿ ಲಂಚಕ್ಕೆ ಹೋಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X