ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಲಿ ಸುವರ್ಣ ಸೌಧ ತಲೆಯೆತ್ತಲಿದೆ!!!

By Staff
|
Google Oneindia Kannada News

suvarna soudha
ಬೆಳಗಾವಿ, ಜ.22: ವಿಧಾನಸಭಾ ಅಧಿವೇಶನ ನಡೆಸಲು ಬೆಳಗಾವಿಯಲ್ಲಿ ಶಾಶ್ವತವಾದ ವಿಧಾನಸೌಧ ಮಾದರಿಯಲ್ಲಿ ಸುಸಜ್ಜಿತ ಸುವರ್ಣ ಸೌಧ ಕಟ್ಟಡ ನಿರ್ಮಿಸುವ ನಿರ್ಧಾರವನ್ನು ಸರ್ಕಾರಗಳು ತೆಗೆದುಕೊಂಡು ಎರಡೂವರೆ ವರ್ಷಗಳು ಕಳೆದ ನಂತರ,ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.ಮಹಾರಾಷ್ಟ್ರದ ಮುಂಬಯಿ ಹಾಗೂ ನಾಗಪುರದಲ್ಲಿ ಅಧಿವೇಶನ ನಡೆಯುವಂತೆ ಕರ್ನಾಟಕದಲ್ಲೂ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಜರುಗಲಿದೆ.

ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಅಂದಿನ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪ್ರಪ್ರಥಮ ಬಾರಿಗೆ ಬೆಳಗಾವಿಯಲ್ಲಿ2006ರ ಸೆ.25 ರಿಂದ 29ರ ವರೆಗೆ ಅಧಿವೇಶನವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ವಿಧಾನಮಂಡಳದ ಎರಡು ಸದನಗಳ ಅಧಿವೇಶನವನ್ನು ಪ್ರತಿವರ್ಷ ಬೆಳಗಾವಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಈ ಹಿನ್ನೆಲೆಯಲ್ಲಿ ವಿಧಾನಸಭಾ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳ ನೇತೃತ್ವದಲ್ಲಿ 2008 ರಲ್ಲಿ ರಚಿಸಲಾಗಿದ್ದ ಸಮಿತಿಯು, ಬೆಳಗಾವಿ ಸಮೀಪದ ಹಲಗಾ-ಬಸ್ತವಾಡ ಬಳಿಯ ಸ್ಥಳವನ್ನು ಇದಕ್ಕಾಗಿ ಆಯ್ಕೆ ಮಾಡಿತು. ಅದಕ್ಕನುಗುಣವಾಗಿ ಈಗ ಬೆಳಗಾವಿಯಿಂದ ಧಾರವಾಡಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ಹಲಗಾ-ಬಸ್ತವಾಡ ಗ್ರಾಮದ 130 ಎಕರೆ 12 ಗುಂಟೆ ಜಮೀನಿನಲ್ಲಿ "ಸುವರ್ಣ ಸೌಧ" ಕಟ್ಟಡ ತಲೆಯೆತ್ತಲಿದೆ.

ಈ ವೈಶಿಷ್ಟ್ಯಪೂರ್ಣ ಸುವರ್ಣ ಸೌಧ ಕಟ್ಟಡವನ್ನು ಅಂದಾಜು 230 ಕೋಟಿ ರು.ಗಳಲ್ಲಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಶಾಸಕರ ಭವನವನ್ನು ಪಬ್ಲಿಕ್ ಪ್ರೈವೇಟ್ ಪಾರ್ಟಿಸಿಪೇಷನ್ (ಪಿ.ಪಿ.ಪಿ) ಆಧಾರದ ಮೇಲೆ ಪ್ರತ್ಯೇಕವಾಗಿ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಈಗಾಗಲೇ ಶಾಸಕರ ಭವನ ಕಟ್ಟಡ ಹೊರತುಪಡಿಸಿ ಸೌಧ ನಿರ್ಮಾಣದ230 ಕೋಟಿ ರು.ಗಳ ಅಂದಾಜು ಪತ್ರಿಕೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಪ್ರಸಕ್ತ ವರ್ಷಕ್ಕಾಗಿ 50 ಕೋಟಿ ರು.ಗಳ ಅನುದಾನವನ್ನು ಸಹ ಬಿಡುಗಡೆ ಮಾಡಲಾಗಿದೆ. ಹಲಗಾ ಮತ್ತು ಬಸ್ತವಾಡ ಗ್ರಾಮಗಳ 146 ರೈತರ ಮಾಲೀಕತ್ವದಲ್ಲಿರುವ ಖಾಸಗಿ ಜಮೀನುಗಳ ಭೂಸ್ವಾಧೀನಕ್ಕಾಗಿಯೂ ಸಹ ಹಣವನ್ನು ಕಾಯ್ದಿರಿಸಲಾಗಿದೆ.

'ಸುವರ್ಣ ಸೌಧ' ದಲ್ಲಿ ಶಾಸಕಾಂಗ ಹಾಗೂ ಆಡಳಿತಾತ್ಮಕ ಕಟ್ಟಡವನ್ನು 37,966 ಚ.ಮೀ.ದಲ್ಲಿ ನಿರ್ಮಿಸಲಾಗುತ್ತಿದ್ದು, ಕಲ್ಲಿನ ಕಟ್ಟಡ ಹಾಗೂ ಶಿಲಾ ಶಿಖರದ ನೀಲ ನಕ್ಷೆ ಹೊಂದಿದೆ. ಸಚಿವಾಲಯದ ಕಟ್ಟಡವನ್ನು 450 ಚ.ಮೀ.ದಲ್ಲಿ ನಿರ್ಮಿಸಲಾಗುತ್ತಿದೆ. ಇದಲ್ಲದೆ ಪೊಲೀಸ್ ಠಾಣೆ, ಶಾಪಿಂಗ್, ಮೆಡಿಕಲ್ ಯುನಿಟ್ ಇತರ ಸೌಲಭ್ಯಗಳಿಗಾಗಿ ಒಟ್ಟಾರೆ 15,000 ಚ.ಮೀ. ಸ್ಥಳ ಕಾಯ್ದಿರಿಸಲಾಗಿದೆ. ಈ ಸೌಧದಲ್ಲಿ 60 ಅಡಿ ಅಗಲದ ರಸ್ತೆ, ನವೀನ ಮಾದರಿಯ ವಿದ್ಯುತ್ ದೀಪಗಳು, ಆವರಣ ಗೋಡೆ ಹಾಗೂ ಲ್ಯಾಂಡ್ ಸ್ಕೇಪಿಂಗ್ ಕಾಮಗಾರಿಗಳನ್ನು ಕೈಕೊಳ್ಳಲಾಗುವುದು. ಸುವರ್ಣ ಸೌಧ ಕಟ್ಟಡ ಹಾಗೂ ಶಾಸಕರ ಭವನ ಕಟ್ಟಡವನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಯೋಜನೆ ಹೊಂದಲಾಗಿದೆ.

(ದಟ್ಸ್ ಕನ್ನಡಅಂಕಿ ಅಂಶ)
ಪೂರಕ ಓದಿಗೆ:

ಬೆಕ್ಕು ನಾಯಿಗಳಾದ ನಮ್ಮ ಶಾಸಕರು
ಗಣಿಗಾರಿಕೆಗೆ ಸ್ಪಷ್ಟನೆಗೆ ಆಗ್ರಹ
ಒಗ್ಗಟ್ಟಿನಿಂದ ಅಭಿವೃದ್ಧಿ ಸಾಧ್ಯ:ಸಿಎಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X