ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳದ ಆನೆಗೊಂದಿ ಬಳಿಕುಸಿದು ಬಿದ್ದಸೇತುವೆ

By Staff
|
Google Oneindia Kannada News

Hanging bridge collapses at Koppal
ಕೊಪ್ಪಳ (ಆನೆಗೊಂದಿ), ಜ. 22 : ಇಲ್ಲಿನ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದ ನಿರ್ಮಾಣದ ಹಂತದಲ್ಲಿದ್ದ ಆನೆಗೊಂದಿ ತೂಗು ಸೇತುವೆ ಕುಸಿದ ಪರಿಣಾಮ 20 ಜನರು ಅವಶೇಷಗಳಡಿಯಲ್ಲಿ ಸಿಲುಕಿರುವ ಘಟನೆ ಗುರುವಾರ ಮೂರು ಗಂಟೆ ಹೊತ್ತಿಗೆ ನಡೆದಿದೆ. ಇದರಲ್ಲಿ 6 ಮಂದಿಯನ್ನು ರಕ್ಷಿಸಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಕೊಪ್ಪಳ ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿ ಆಗಮಿಸಿದ್ದು, ರಕ್ಷಣಾ ಕಾರ್ಯ ಮುಂದುವರೆದೆ. ಅವಶೇಷಗಳಡಿ ಸಿಲುಕಿರುವ 14 ಮಂದಿ ಮೃತಪಟ್ಟಿರುವ ಸಾಧ್ಯತೆಗಳಿವೆ.

ಕಳೆದ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆನೆಗೊಂದಿ ತೂಗುಸೇತುವೆ ನಿರ್ಮಾಣ ಕಾರ್ಯ ಇತ್ತೀಚೆಗೆ ಆರಂಭಗೊಂಡಿತ್ತು. ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ಈ ಸೇತುವೆ ನಿರ್ಮಿಸಿದರೆ, ಐತಿಹಾಸಿಕ ಪರಂಪರೆ ಪಟ್ಟಿಯಿಂದ ಹಂಪೆ ಹಾಗೂ ಆನೆಗೊಂದಿಯ ಹೆಸರಗಳನ್ನು ತೆಗೆಯಲಾಗುವುದು ಎಂದು ಯುನೆಸ್ಕೋ ಎಚ್ಚರಿಕೆ ನೀಡಿತ್ತು. ಇದರಿಂದ ಈ ಯೋಜನೆಯನ್ನು ದಶಕಗಳಿಂದ ರಾಜ್ಯ ಸರ್ಕಾರ ಕೈಬಿಟ್ಟಿತ್ತು.

ಇತ್ತೀಚೆಗೆ ಆರೋಗ್ಯ ಸಚಿವ ಶ್ರೀರಾಮುಲು ಅವರ ಪ್ರಯತ್ನದ ಫಲವಾಗಿ ತೂಗುಸೇತುವೆ ಕಾಮಗಾರಿಗೆ ಮತ್ತೆ ಚಾಲನೆ ನೀಡಲಾಗಿತ್ತು. ಹಳೆಯದಾದ ಈ ಸೇತುವೆ ಕಾಮಗಾರಿಯನ್ನು ನಿಲ್ಲಿಸಿ ಅನೇಕ ದಿನಗಳೆ ಕಳೆದುಹೋಗಿದ್ದವು. ಹಳೆಯ ಕಟ್ಟಡವಾಗಿದ್ದರಿಂದ ಕಬ್ಬಿಣದ ಸಾಮರ್ಥ್ಯ ಕಡಿಮೆಯಾಗಿರುವ ವರದಿಯನ್ನು ಇಂಜಿನಿಯರ್ ಗಳು ನೀಡಿದ್ದರೂ ಕೂಡಾ ಅದೇ ಸೇತುವೆ ಮೇಲೆಯೇ ಮತ್ತೆ ಕಾಮಗಾರಿ ಆರಂಭಿಸಿರುವುದು ಈ ದುರ್ಘಟನೆ ಕಾರಣ ಎನ್ನಲಾಗಿದೆ.

ಐತಿಹಾಸಿಕ ಪ್ರದೇಶವಾಗಿರುವ ಆನೆಗೊಂದಿಯ ತೂಗುಸೇತುವೆ ಪೂರ್ಣಗೊಳಿಸಿದರೆ ಹಂಪೆಗೆ ತೆರಳಲು ಸರಳವಾಗುತ್ತಿತ್ತು. ಈ ಪ್ರದೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿದೇಶ ಪ್ರವಾಸಿಗರು ಪ್ರತಿ ವರ್ಷ ಭೇಟಿ ನೀಡುತ್ತಾರೆ. ಇದು ರಾಜ್ಯದ ಪ್ರವಾಸಿ ತಾಣವೂ ಹೌದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X