ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಗ್ಗಟ್ಟಿನಿಂದ ಅಭಿವೃದ್ಧಿ ಸಾಧ್ಯ :ಯಡಿಯೂರಪ್ಪ

By Staff
|
Google Oneindia Kannada News

Kannadigas, Marathi-speaking people living like brothers
ಬೆಳಗಾವಿ, ಜ. 21 : ರಾಜ್ಯದ ಸರ್ವಭಾಷಿಕ ಜನರು ಒಂದೆ ತಾಯಿಯ ಮಕ್ಕಳಂತೆ ಬಾಳಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಿದ್ದು, ಈ ದಿಸೆಯಲ್ಲಿ ನಾಗರಿಕರೆಲ್ಲರೂ ಒಗ್ಗಟ್ಟಾಗಿ ಇರಬೇಕೆಂದು ಮುಖ್ಯಮಂತ್ರಿ ಡಾ ಬಿ.ಎಸ್ ಯಡಿಯೂರಪ್ಪ ಅವರು ಕರೆ ನೀಡಿದ್ದಾರೆ.

ಬೆಳಗಾವಿ ಸಮೀಪದ ಯಮನಾಪುರ ಗ್ರಾಮದಲ್ಲಿಂದು ಮಹಾನಗರಪಾಲಿಕೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ 2007 ರ ಕನ್ನಡ ಪ್ರಭ ವರ್ಷದ ವ್ಯಕ್ತಿಯಾಗಿ ಪ್ರಶಸ್ತಿ ಪಡೆದ ಭೀಮರಾವ ಗಸ್ತಿ ಅವರ ಗೌರವಾರ್ಥ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಸಮುದಾಯ ಭವನಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡುತ್ತಿದ್ದ ಅವರು ಯಮನಾಪುರ ಗ್ರಾಮದಲ್ಲಿ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಗಸ್ತಿ ಅವರನ್ನು ಕನ್ನಡಪ್ರಭ ಪತ್ರಿಕೆಯು ಗುರುತಿಸಿ ಪ್ರಶಸ್ತಿ ನೀಡಿದ್ದು, ಪ್ರಶಂಸಾರ್ಹವಾಗಿದೆ ಎಂದರು.

ಯಮನಾಪುರ ಗ್ರಾಮವು ಹೆಚ್ಚು ಮರಾಠಿ ಜನಸಂಖ್ಯೆಯನ್ನು ಹೊಂದಿರುವಂತಹ ಗ್ರಾಮವಾಗಿದ್ದು, ಪತ್ರಿಕೆಗೆ ಆಗಲಿ, ಅಥವಾ ಸರಕಾರಕ್ಕಾಗಲಿ ಅಭಿವೃದ್ಧಿಯೇ ಮುಖ್ಯ ಅಭಿವೃದ್ಧಿಯಲ್ಲಿ ಭಾಷೆ ಅಡ್ಡಿ ಬರುವುದಿಲ್ಲವೆಂಬುದಕ್ಕೆ ಇಂದು ನಡೆದ ಸಮಾರಂಭವೇ ಸಾಕ್ಷಿಯಾಗಿದೆಯೆಂದು ಹೇಳಿದರು. ಕನ್ನಡಪ್ರಭ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಇತ್ತೀಚಿಗೆ ಗಸ್ತಿ ಅವರಿಗೆ ಪ್ರದಾನ ಮಾಡಿ, ಯಮನಾಪುರ ಅಭಿವೃದ್ಧಿಗೆ ಒಂದು ಕೋಟಿ ರೂ.ಗಳನ್ನು ಘೋಷಿಸಲಾಗಿತ್ತು. ತನ್ನ ಜನಾಂಗದ ನೋವು-ಸಂಕಷ್ಟಗಳ ವಿರುದ್ಧ ಹೋರಾಡುತ್ತಲೇ ಬಂದಿರುವ ಡಾ ಗಸ್ತಿ ಅವರ ಸಲಹೆ-ಸೂಚನೆಯಂತೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ನಾನು ಘೋಷಿಸಿದ ಅಭಿವೃದ್ಧಿ ಯೋಜನೆಗೆ ನಾನೇ ಚಾಲನೆ ನೀಡುತ್ತಿರುವುದು ಅತ್ಯಂತ ಸಂತೋಷ ತಂದಿದೆ. ಅದರಂತೆ ಈಗ ಸಮುದಾಯ ಭವನಕ್ಕೆ ಅಡಿಗಲ್ಲು ನೆರವೇರಿಸಿದ್ದು, ಉಳಿದ ಅನುದಾನವನ್ನು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುವುದು. ಸರಕಾರವು ಕೂಡಾ ಗಸ್ತಿ ಅವರಂತಹ ಸಮಾಜ ಸೇವಕರನ್ನು ಬೆನ್ನು ತಟ್ಟಿ, ಅವರ ಅಕಾಂಕ್ಷೆಗಳನ್ನು ಅನುಷ್ಠಾನಕ್ಕೆ ತರಲಿದೆ. ಅದರಂತೆ ಸರಕಾರವು ಎಲ್ಲ ಜನಾಂಗದ ಅಭಿವೃದ್ಧಿಗೂ ಬದ್ಧವಾಗಿದ್ದು, ಈಗ ಮಂಜೂರಾದ ಅನುದಾನ ಸಮರ್ಪಕವಾಗಿ ಬಳಸಿ ಕಾಲಮಿತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

(ದಟ್ಸ್ ಕನ್ನಡ ವಾರ್ತೆ)
ಅಕ್ರಮ ಗಣಿಗಾರಿಕೆ ಸ್ಪಷ್ಟನೆಗೆ ಪ್ರತಿಪಕ್ಷಗಳ ಆಗ್ರಹ
ಸಂಪುಟದಿಂದ ರೆಡ್ಡಿ ಕೈಬಿಡಲು ದೇಶಪಾಂಡೆ ಆಗ್ರಹ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X