ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷರಾಗಿ ಒಬಾಮಾ ಪ್ರಮಾಣ ವಚನ

By Staff
|
Google Oneindia Kannada News

ವಾಷಿಂಗ್ಟನ್, ಜ. 21 : ಮಾರ್ಟಿನ್ ಕಿಂಗ್ ಲೂಥರ್ ಅವರ ಕನಸನ್ನು ನನಸಾಗಿಸಿದ ಬರಾಕ್ ಹುಸೇನ್ ಒಬಾಮಾ ಮಂಗಳವಾರ ಅಮೆರಿಕದ 44ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಲ್ಲಿನ ಕ್ಯಾಪಿಟಲ್ ಹಿಲ್ ನಲ್ಲಿ ಮಧ್ಯಾಹ್ನ 12.35ಗಂಟೆಗೆ (ಭಾರತೀಯ ಕಾಲಮಾನ ರಾತ್ರಿ 10.35 ಗಂಟೆ) ಸುಪ್ರಿಂಕೋರ್ಟ್ ನ್ಯಾಯಾಮೂರ್ತಿ ಜಾನ್ ರಾಬರ್ಟ್ಸ್ ಅವರು ಬರಾಕ್ ಒಬಾಮಾ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಮಾಜಿ ಅಧ್ಯಕ್ಷ ಅಬ್ರಾಹಾಂ ಲಿಂಕನ್ ಅವರು ಹಿಡಿದಿದ್ದ ಬೈಬಲ್ ಮುಟ್ಟಿ ಒಬಾಮಾ ಅಧಿಕಾರ ಸ್ವೀಕರಿಸಿದರು. ಇದಕ್ಕೂ ಮುನ್ನ ನೂತನ ಉಪಾಧ್ಯಕ್ಷ ಜೋ ಬೈಡೆನ್ ಕೂಡಾ ಅಧಿಕಾರ ಸ್ವೀಕರಿಸಿದರು. ಇದೇ ಪ್ರಥಮ ಬಾರಿಗೆ ಆಫ್ರಿಕನ್ ಮೂಲದ ಅಮೆರಿಕನ್ ಸಂಜಾತ ಪ್ರಜೆಯೊಬ್ಬರು ಜಗತ್ತಿನ ಅತ್ಯಂತ ಪ್ರಭಾವಶಾಲಿ ಅಧಿಕಾರ ಸ್ಥಾನವಾದ ಶ್ವೇತಭವನ ಪ್ರವೇಶಿಸಿದ್ದು, ಕೊರೆಯುವ ಚಳಿಯಲ್ಲೂ ದೇಶದ ವಿವಿಧ ಪ್ರದೇಶದಿಂದ ಆಗಮಿಸಿದ್ದ ಸುಮಾರು 20 ಲಕ್ಷಕ್ಕೂ ಅಧಿಕ ಮಂದಿ ಆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಜಾರ್ಜ್ ಬುಷ್ ಗಿಂತ ಅಧಿಕ ಜೀವ ಬೆದರಿಕೆ ಇರುವ ಒಬಾಮಾ ಅವರ ರಕ್ಷಣೆಗೆ 45 ಸಾವಿರಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ, ಖಾಸಗಿ ಏಜನ್ಸಿಗಳ ಸಿಬ್ಬಂದಿ ಹಾಜರಿದ್ದಿದ್ದು ವಿಶೇಷವಾಗಿತ್ತು. ಮೂರು ಚದರ ಕಿಮೀ ವ್ಯಾಪ್ತಿಯ ಪ್ರದೇಶದಲ್ಲಿ ನಡೆದ ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಫ್ತಿಯಲ್ಲಿದ್ದ ಶಾರ್ಪ್ ಶೂಟರ್ ಗಳು ಯಾವುದೇ ವಿಧವಾದ ದಾಳಿ ನಿಗ್ರಹಿಸಲು ಸಜ್ಜಾಗಿದ್ದರು. ಅಮೆರಿಕ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದರೂ ಒಬಾಮಾ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ 170 ದಶಲಕ್ಷ ಡಾಲರ್ (850 ಕೋಟಿ ರುಪಾಯಿಗಳು) ವೆಚ್ಚ ಮಾಡಲಾಗಿದೆ ಎಂದು ವೈಟ್ ಹೌಸ್ ಮೂಲಗಳು ತಿಳಿಸಿವೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X