ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್ಐ ಮೇಲೆ ಎಸ್ಪಿ ನಾರಂಗ್ ಹಲ್ಲೆ

By Staff
|
Google Oneindia Kannada News

ಬೆಳಗಾವಿ, ಜ. 19 : ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿ ಸೋನಿಯಾ ನಾರಂಗ್ ಗೊತ್ತಿರಬೇಕಲ್ಲ, ದಾವಣಗೆರೆ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರಿಗೆ ಕಪಾಳಮೋಕ್ಷ ಮಾಡಿ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದವರು. ಆ ಘಟನೆ ಹಸಿರಿರುವಾಗಾಲೇ ಬೆಳಗಾವಿ ಅಧಿವೇಶನದ ವೇಳೆ ಕರ್ತವ್ಯಲೋಪ ಎಸಗಿದ ಪಿಎಸ್ಐ ವಿಕಾಸ ಲಮಾಣಿ ಅವರನ್ನು ಎಸ್ಪಿ ನಾರಂಗ್ ಸಿಕ್ಕಾಪಟ್ಟೆ ಥಳಿಸಿದ ಪ್ರಕರಣ ಭಾನುವಾರ ನಡೆದಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿ ಜ.16 ರಂದು ಮಹಾಮೇಳಾವ ಸಮಾವೇಶ ನಡೆಸಲು ಉದ್ದೇಶಿತ್ತು. ಆದರೆ ಜಿಲ್ಲಾಡಳಿತ ತಾಲ್ಲೂಕಿನನಾದ್ಯಂತ ನಿಷೇಧಾಜ್ಞೆ ಜಾರಿಗೆ ತಂದ ಹಿನ್ನೆಲೆಯಲ್ಲಿ ಸಮಾವೇಶ ವಿಫಲಗೊಂಡಿತ್ತು. ನಗರದ ಕೆಲವಡೆ ಎಂಇಎಸ್ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಅಧಿವೇಶನದ ಸ್ವಾಗತ ಫಲಕಗಳನ್ನು ಕಿತ್ತು ಹಾಕಿದ್ದರು. ಇದೇ ಸಂದರ್ಭದಲ್ಲಿ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ಎಂಇಎಸ್ ಕಿಡಿಗೇಡಿಗಳು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬ್ಯಾನರ್ ಹರಿದು ಹಾಕಿದ್ದಾರೆ. ಈ ಘಟನೆ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ ನಾರಂಗ್ ಗಮನಕ್ಕೆ ಬಂದಿದೆ.

ಹಾಗಾಗಿ ಶನಿವಾರ ರಾತ್ರಿ ಅವರು ಎಪಿಎಂಸಿ ಠಾಣೆ ಪಿಎಸ್ಐ ವಿಕಾಸ ಲಮಾಣಿ ಅವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಬ್ಯಾನರ್ ಹರಿದು ಹಾಕುತ್ತಿದ್ದಾಗ ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಪಿಎಸ್ ಐ ಬೇಜವಾಬ್ದಾರಿ ಮಾತುಗಳನ್ನಾಡಿದ್ದಾರೆ. ಇದರಿಂದ ಕುಪಿತರಾದ ಎಸ್ಪಿ ನಾರಂಗ್ ಪಿಎಸ್ಐಯನ್ನು ಮನಬಂದಂತೆ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಲಮಾಣಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಧೀರ್ಘಕಾಲದ ಅವಧಿಗೆ ರಜೆ ಮೇಲೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)
ಅಧಿವೇಶನ : ಹೊಸತನವಿಲ್ಲದ ರಾಜ್ಯಪಾಲ ಭಾಷಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X