ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನಲ್ಲಿ ಪ್ರಧಾನಿ ಕಾಣದ ನರೇಂದ್ರ ಮೋದಿ

By Staff
|
Google Oneindia Kannada News

ಅಹ್ಮದಾಬಾದ್, ಜ. 17 : ಪ್ರಧಾನಿ ಪದವಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅರ್ಹ ಅಭ್ಯರ್ಥಿ ಎಂದು ಹುಯಿಲೆಬ್ಬಿಸಿದ್ದ ಕಾರ್ಪೊರೇಟ್ ದಿಗ್ಗಜರ ಆಸೆಗೆ ನರೇಂದ್ರ ಮೋದಿಯೇ ತಣ್ಣೀರು ಎರಚಿದ್ದಾರೆ. ತಾವು ಪ್ರಧಾನಿ ಗದ್ದುಗೆಯ ಆಕಾಂಕ್ಷಿಯಲ್ಲ, ಹಿರಿಯ ನಾಯಕ ಎಲ್ ಕೆ ಅಡ್ವಾಣಿಯೇ ಭಾರತೀಯ ಜನತಾ ಪಕ್ಷ ಪರ ಪ್ರಧಾನಿ ಅಭ್ಯರ್ಥಿ ಎಂದು ಹೇಳಿ ವಿವಾದಕ್ಕೆ ಮೋದಿ ತೆರೆ ಎಳೆದಿದ್ದಾರೆ.

"ನಾನು ಪ್ರಧಾನಿ ಪದವಿಯ ಸ್ಪರ್ಧೆಯಲ್ಲಿಲ್ಲ. ಗುಜರಾತ್ ಅಭಿವೃದ್ಧಿಯ ಪಥದಲ್ಲಿ ಸಾಗಿದಂತೆ ಅಡ್ವಾಣಿಯವರ ಸಮರ್ಥ ನಾಯಕತ್ವದಲ್ಲಿ ಭಾರತವೂ ಅಭಿವೃದ್ಧಿ ಹೊಂದಲಿದೆ" ಎಂದು ಮೋದಿ ಶನಿವಾರ ಮಧ್ಯ ಗುಜರಾತ್ ನ ಹಾಲೋಲ್ ನಗರದಲ್ಲಿ ಚತುಷ್ಪಥ ರಸ್ತೆಗೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಹೇಳಿದರು.

ಉದ್ಯಮಿಗಳಾದ ಅನಿಲ್ ಅಂಬಾನಿ ಮತ್ತು ಸುನೀಲ್ ಭಾರತಿ ಮಿತ್ತಲ್ ಅವರು, ಕಳೆದ ಬುಧವಾರ ಸಮಾರಂಭವೊಂದರಲ್ಲಿ, ಮೋದಿ ಭಾರತ ಮುನ್ನಡೆಸಲು ಸಮರ್ಥ ವ್ಯಕ್ತಿ. ಗುಜರಾತ್ ಮುನ್ನಡೆಸಿದಂತೆ ಭಾರತವನ್ನೂ ಅಭಿವೃದ್ಧಿಯತ್ತ ಮೋದಿ ಕೊಂಡೊಯ್ಯಬಲ್ಲರು ಎಂದು ನುಡಿದು ರಾಜಕೀಯ ಮತ್ತು ಕೈಗಾರಿಕಾ ವಲಯದಲ್ಲಿ ಅಚ್ಚರಿ ಮೂಡಿಸಿದ್ದರು ಮತ್ತು ವಿವಾದಕ್ಕೆ ಕಾರಣರಾಗಿದ್ದರು. ಬಿಜೆಪಿ ಪಕ್ಷ ಲಾಲ್ ಕೃಷ್ಣ ಅಡ್ವಾಣಿಯವರನ್ನು ಮೊದಲಿನಿಂದಲೂ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಬಂದಿದೆ.

(ಏಜೆನ್ಸೀಸ್)

ಪೂರಕ ಓದಿಗೆ
ಮೋದಿಯಲ್ಲಿ ಪ್ರಧಾನಿ ಕಂಡ ಅನಿಲ್ ಅಂಬಾನಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X