ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವಣಗಿತ್ತಿಯಂತೆ ಸಂಭ್ರಮಿಸುತ್ತಿರುವ ಬೆಳಗಾವಿ

By Staff
|
Google Oneindia Kannada News

Belgaum second session on Jan 16
ಬೆಳಗಾವಿ, ಜ. 16 : 10 ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲದ ಅಧಿವೇಶನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಚೆನ್ನಮ್ಮ ವೃತ್ತದಿಂದ ಜೀರಿಗೆ ಸಭಾಂಗಣದವರೆಗೆ ಭವ್ಯ ಮೆರವಣಿಗೆ ಆರಂಭವಾಗಿದೆ. ಮುಖ್ಯಮಂತ್ರಿ ಡಾ ಬಿಎಸ್ ಯಡಿಯೂರಪ್ಪ ಮೆರವಣಿಗೆಯ ನೇತೃತ್ವ ವಹಿಸಿದ್ದಾರೆ. ಈ ಮೂಲಕ ಬೆಳಗಾವಿ ನಗದಲ್ಲಿ ಹಬ್ಬದ ವಾತಾವರಣ ಹಾಗೂ ಸಂಭ್ರಮದ ದೃಶ್ಯಗಳು ಎಲ್ಲೆಲ್ಲೂ ಕಂಡುಬರತೊಡಗಿವೆ. ಈ ಮಧ್ಯೆ ಮಹಾಮೇಳಾವ ಕಾರ್ಯಕ್ರಮ ನಡೆಸಲು ಆಗಮಿಸುತ್ತಿದ್ದ ಐದು ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಒಟ್ಟು 50 ಮಂದಿ ಎಂಇಎಸ್ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಂತಾಗಿದೆ.

ರಾಜ್ಯಪಾಲ ರಾಮೇಶ್ವರ ಠಾಕೂರ್ ಇಂದು ಮಧ್ಯಾಹ್ನ 12.30ಕ್ಕೆ ಜಂಟಿ ಸದನ ಉದ್ದೇಶಿಸಿ ಮಾತನಾಡಲಿದ್ದಾರೆ. ಅರ್ಧ ಗಂಟೆಯ ಭಾಷಣದ ನಂತರ ಜೆಡಿಎಸ್ ಶಾಸಕರಾಗಿದ್ದ ಸಿದ್ದರಾಜು, ಮಾಜಿ ಪ್ರಧಾನಮಂತ್ರಿ ವಿಪಿ ಸಿಂಗ್ ಹಾಗೂ ಮಾಜಿ ಸಚಿವ ಹಾಗೂ ನೀರಾವರಿ ತಜ್ಞ ಎಚ್ಎನ್ ನಂಜೇಗೌಡ ಅವರ ನಿಧನಕ್ಕೆ ಸಂತಾಪ ಸೂಚಕ ಸಭೆ ನಡೆಸಿ ಕಲಾಪವನ್ನು ನಾಳೆಗೆ ಮುಂದೂಡುವ ಸಾಧ್ಯತೆಗಳಿವೆ.

ಪ್ರಶ್ನೋತ್ತರ ವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡದಿರುವ ಸರ್ಕಾರದ ಕ್ರಮವನ್ನು ತೀವ್ರ ಖಂಡಿಸಿ ಪ್ರತಿಪಕ್ಷಗಳು ಚರ್ಚೆಗೆ ಅವಕಾಶ ನೀಡಲೇಬೇಕು ಎಂದು ಪಟ್ಟು ಹಿಡಿಯುವ ಸಾಧ್ಯತೆಗಳಿವೆ. ಆದರೆ, ಶೂನ್ಯ ವೇಳೆಯಲ್ಲಿ ಚರ್ಚೆ ಅವಕಾಶ ಕಲ್ಪಿಸಿಕೊಡಲಾಗುವುದು. ಪ್ರಶ್ನೋತ್ತರಕ್ಕೆ ಯಾವುದೇ ಚ್ಯುತಿ ಬರದ ಹಾಗೆ ಅಧಿವೇಶನ ಯಶಸ್ವಿಯಾಗಿ ನಡೆಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಬೆಳಗಾವಿ ಅಧಿವೇಶನಕ್ಕೆ ಭಾರಿ ಭದ್ರತೆಯನ್ನು ಕಲ್ಪಿಸಲಾಗಿದ್ದು, ಸುಮಾರು 5 ಸಾವಿರ ಪೊಲೀಸರನ್ನು ಪಹರೆಗೆ ನಿಯೋಜಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಉತ್ತರಕರ್ನಾಟಕದಲ್ಲಿ ಇನ್ನೊಂದು ಅಧಿವೇಶನ
ಬೆಳಗಾವಿ ಚಿತ್ರಮಂದಿರಗಳಲ್ಲಿ ಕನ್ನಡ ಕಂಪು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X