ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತಿ, ಪತ್ನಿಗಿಲ್ಲ ಒಂದೆಡೆ ಕೂರಂಗಿಲ್ಲ: ಶೆಟ್ಟರ್

By Staff
|
Google Oneindia Kannada News

ಬೆಳಗಾವಿ, ಜ. 16 : ಬೆಳಗಾವಿ ಅಧಿವೇಶನಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ವಿಶೇಷ ಅಧಿವೇಶನವೇ ಸರಿ. ರಾಜ್ಯದಲ್ಲಿ ಪ್ರಥಮ ಬಾರಿಗೆ ಪತಿ ಪತ್ನಿ ಜೊತೆಗೂಡಿ ಅಧಿವೇಶನದಲ್ಲಿ ಪಾಲ್ಗೊಳ್ಳುವುದು ದಾಖಲೆ ಪುಟದಲ್ಲಿ ಸೇರಿಕೊಳ್ಳಲಿದೆ. ಆದರೆ ಮಧುಗಿರಿ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಅವರಿಬ್ಬರೂ ಒಂದೆಡೆ ಕೂರಲು ಸಾಧ್ಯವಿಲ್ಲ ಎನ್ನುತ್ತದೆ ಸರ್ಕಾರ. ಕಾರಣ ಕೇಳಿದರೆ ಹಿರಿಯತನಕ್ಕೆ ಆದ್ಯತೆ ಎಂದು ಹೇಳಿದೆ.

ಪ್ರತಿಪಕ್ಷಗಳ ಸಾಲಿನಲ್ಲಿ ಕುಮಾರಸ್ವಾಮಿ ಅವರು ಮೊದಲ ಸಾಲಿನಲ್ಲಿ ಇರುತ್ತಾರೆ. ಆದರೆ, ಪ್ರಥಮ ಸಲ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿರುವ ಅನಿತಾ ಕುಮಾರಸ್ವಾಮಿ ಅವರಿಗೆ 212 ನಂಬರ್ ಸೀಟನ್ನು ನೀಡಲಾಗಿದೆ. ಶಾಸಕರ ಹಿರಿತನದ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಪ್ರಥಮ ಬಾರಿಗೆ ಆಯ್ಕೆಯಾಗಿರುವ ಅನಿತಾ ಕುಮಾರಸ್ವಾಮಿ ಅವರನ್ನು ಪತಿ ಕುಮಾರಸ್ವಾಮಿ ಅವರ ಪಕ್ಕದ ಸೀಟ್ ನೀಡಬಹುದಾಗಿತ್ತಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸರಳ ಉತ್ತರ ನೀಡಿದ ಶೆಟ್ಟರ್, ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿದರೆ, ಖಂಡಿತವಾಗಿಯೂ ಮನವಿಗೆ ಸೂಕ್ತವಾಗಿ ಸ್ಪಂದಿಸುತ್ತೇವೆ. ಪತಿ ಹಾಗೂ ಪತ್ನಿ ಒಂದೆಡೆ ಕೂರಿಸುವ ಭರವಸೆಯನ್ನು ನೀಡಿದರು. ಆದರೆ, ಕುಮಾರಸ್ವಾಮಿ ಅವರಿಂದ ಮನವಿ ಬಂದರೆ ಮಾತ್ರ ಇದು ಸಾದ್ಯ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು. ತುರುವೇಕೆರೆ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಜೆಡಿಎಸ್ ಶಾಸಕ ಎಂ ಟಿ ಕೃಷ್ಣಪ್ಪ ಅವರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ಅಧಿವೇಶನ : ಹೊಸತನವಿಲ್ಲದ ರಾಜ್ಯಪಾಲ ಭಾಷಣ
ಮದುವಣಗಿತ್ತಿಯಂತೆ ಸಂಭ್ರಮಿಸುತ್ತಿರುವ ಬೆಳಗಾವಿ
ಉತ್ತರಕರ್ನಾಟಕದಲ್ಲಿ ಇನ್ನೊಂದು ಅಧಿವೇಶನ
ಬೆಳಗಾವಿ ಚಿತ್ರಮಂದಿರಗಳಲ್ಲಿ ಕನ್ನಡ ಕಂಪು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X