ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಂ ನೂತನ ಅಡಳಿತ ಮಂಡಳಿ ನೇಮಕ

By Staff
|
Google Oneindia Kannada News

ನವದೆಹಲಿ, ಜ. 11 : ಸತ್ಯಂ ಕಂಪನಿಯ ಆಡಳಿತ ಮಂಡಳಿಯನ್ನು ವಜಾಗೊಳಿಸಿರುವ ಕೇಂದ್ರ ಸರ್ಕಾರ ಇಂದು ಮೂರು ಸದಸ್ಯರನ್ನು ಒಳಗೊಂಡ ನೂತನ ಸ್ವಾತಂತ್ರ್ಯ ನಿರ್ದೇಶಕ ಆಡಳಿತ ಮಂಡಳಿಯನ್ನು ರಚಿಸಿದೆ. ನಾಸ್ಕಾಂನ ಮಾಜಿ ಅಧ್ಯಕ್ಷ ಕಿರಣ್ ಕಾರ್ನೀಕ್, ಎಚ್ ಡಿ ಎಫ್ ಸಿ ಬ್ಯಾಂಕ್ ನ ಚೇರಮನ್ ದೀಪಕ್ ಪಾರೇಖ್ ಹಾಗೂ ಸೆಬಿಯ ಮಾಜಿ ಸದಸ್ಯ ಸಿ ಅಚ್ಯುತನ್ ಸತ್ಯಂ ಕಂಪನಿಯ ನೂತನ ಆಡಳಿತ ಮಂಡಳಿ ಸದಸ್ಯರು ಎಂದು ಸರ್ಕಾರ ತಿಳಿಸಿದೆ.

ಸತ್ಯಂ ಕಂಪನಿಗೆ ನೂತನ ಆಡಳಿತ ಮಂಡಳಿಯ ಅವಶ್ಯಕತೆ ಇರುವುದನ್ನು ಮನಗಂಡಿರುವ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಸತ್ಯಂ ಸಂಸ್ಥೆಯ ಷೇರುದಾರರು ಹಾಗೂ ಉದ್ಯೋಗಿಗಳ ಹಿತ ದೃಷ್ಟಿಯಿಂದ ಕಂಪನಿಯ ಆಗುಹೋಗುಗಳ ಬಗ್ಗೆ ಗಮನದಲ್ಲಿರಿಸಲಾಗುವುದು ಎಂದು ಕೇಂದ್ರ ಸರ್ಕಾರ ಕಂಪನಿ ವ್ಯವಹಾರಗಳ ಖಾತೆ ಸಚಿವ ಪಿ ಸಿ ಗುಪ್ತಾ ತಿಳಿಸಿದ್ದಾರೆ.

ಸತ್ಯಂ ತೀವ್ರ ಸಂಕಷ್ಟದಲ್ಲಿ ಮುಳುಗಿದೆ. ಈ ಸಂದರ್ಭದಲ್ಲಿ ನೂತನವಾಗಿ ರಚಿಸಲಾಗಿರುವ ಸ್ವಾತಂತ್ರ್ಯ ನಿರ್ದೇಶಕ ಹೊಣೆ ಅರಿತು ಕೆಲಸ ನಿರ್ವಹಿಸಲಿದೆ. ಮುಂದಿನ 24 ಗಂಟೆಯೊಳಗೆ ನೂತನ ಮಂಡಳಿ ಮಹತ್ವದ ಸಭೆ ನಡೆಯಲಿದೆ. ಆಡಳಿತ ಮಂಡಳಿಯಲ್ಲಿ ಒಟ್ಟು 10 ಜನರು ಇರಬೇಕು. ಸರ್ಕಾರದಿಂದ ನೇಮಕಗೊಂಡಿರುವ ಮೂವರು ಸ್ವಾತಂತ್ರ್ಯ ನಿರ್ದೇಶಕರು ಉಳಿದ ಏಳು ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಗುಪ್ತಾ ವಿವರಿಸಿದರು.

ಅನಾಮತ್ತು 7 ಸಾವಿರ ಕೋಟಿ ರುಪಾಯಿಗಳ ಹರಗಣದ ಸರದಾರ ಭಾರತೀಯ ಎನ್ರಾನ್ ಅಲಿಯಾಸ್ ಸತ್ಯಂನ ಮಾಜಿ ಮುಖ್ಯಸ್ಥ ಗೋಲ್ ಮಾಲ್ ರಾಮಲಿಂಗರಾಜು ಅವರನ್ನು ಜನವರಿ 23ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಸಿಐಡಿ ಪೊಲೀಸರಿಂದ ಸತ್ಯಂ ರಾಜು ಬಂಧನ
ಸತ್ಯಂ ಸಿಎಫ್ಒ ಶ್ರೀನಿವಾಸ್ ಆತ್ಮಹತ್ಯೆಗೆ ಯತ್ನ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X