ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದ ಹಲವೆಡೆ ಪೆಟ್ರೋಲ್, ಡಿಸೇಲ್ ಲಭ್ಯ

By Staff
|
Google Oneindia Kannada News

ಮೈಸೂರು, ಜ. 9 : ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯ ಅಧಿಕಾರಿಗಳ ವೇತನ ಏರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೆಟ್ರೋಲ್, ಡಿಸೇಲ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಇದರ ಜೊತೆಗೆ ಮೈಸೂರಿನ ಪೆಟ್ರೋಲ್ ಬಂಕ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ತೀವ್ರ ಆತಂಕ ಸೃಷ್ಟಿ ಮಾಡಿದೆ ಘಟನೆ ನಡೆದಿದೆ.

ಮೈಸೂರಿನ ಕೆ ಜಿ ಕೊಪ್ಪಲಿನಲ್ಲಿರುವ ಬಂಕ್ ಪೆಟ್ರೋಲ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಬಂಕ್ ಮುಂದೆ ಜಮಾಯಿಸಿದ್ದ ಅನೇಕ ಜನರು ಕಕ್ಕಾಬಿಕ್ಕಿಯಾಗುವಂತೆ ಮಾಡಿತು. ಕಳೆದ ಎರಡು ದಿನಗಳಿಂದ ಹಗಲಿರುಳು ಕಾರ್ಯ ನಿರ್ವಹಿಸಿದ ಬಂಕ್ ಮಷೀನ್ ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸರಸ್ವತಿಪುರದ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಬಂಕ್ ಗೆ ಅಲ್ಪಪ್ರಮಾಣದ ನಷ್ಟ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.

ಮುಷ್ಕರದಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಕೊರೆತೆ ಎದುರಾಗಿದ್ದು, ಗ್ರಾಹಕರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರಂತೂ ಪೆಟ್ರೋಲ್ ಗಾಗಿ ಪರದಾಡುತ್ತಿರುವುದು ಪ್ರತಿ ಬಂಕ್ ಮುಂದೆ ಕಂಡು ಬರುವ ಸಾಮಾನ್ಯ ದೃಶ್ಯವಾಗಿದೆ.

ಬೆಂಗಳೂರಿನ ಕೆಳಗೆ ನೀಡಲಾಗಿರುವ ಬಂಕ್ ಪೆಟ್ರೋಲ್ ಹಾಗೂ ಡಿಸೇಲ್ ಗಳು ಲಭ್ಯವಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.

ಬನ್ನೇರು ಘಟ್ಟ ಜಲಭವನದ ಬಳಿ ಬಂಕ್
ಕಾಮಾಕ್ಷಿ ಪಾಳ್ಯದ ಐಬಿಪಿ ಬಂಕ್
ಬಸವೇಶ್ವರ ನಗರದ ತಿಮ್ಮಯ್ಯ ರಸ್ತೆಯ ಎಚ್ ಪಿ ಬಂಕ್
ಜಯನಗರದ ಮಾರೇನಹಳ್ಳಿ ಬಂಕ್
ಯಶವಂತಪುರದ ಸಾಬೂನು ಕಾರ್ಖಾನೆ ಬಳಿಯ ಬಂಕ್
ಯಲಹಂಕ ಎಚ್ ಪಿ ಬಂಕ್
ರಾಗಿಗುಡ್ಡ ವುಡ್ಡೀಸ್ ಬಳಿಯ ಬಂಕ್
ಮೈಸೂರು ರಸ್ತೆ ಶೆಲ್
ಬಿಎಲ್ ಇಎಲ್ ಬಂಕ್
ರೂಪೇನ ಅಗ್ರಹಾರ, ಹೊಸೂರು ರಸ್ತೆ ಬಂಕ್

(ದಟ್ಸ್ ಕನ್ನಡ ವಾರ್ತೆ)
ಎಸ್ಮಾ ತನ್ನಿ ಇಲ್ಲ ಮನೆಗೆ ಹೋಗಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X