ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದಿನಲ್ಲಿ ಸತ್ಯಂ ಸುದ್ದಿಗೋಷ್ಠಿ

By *ಶಾಂತಾರಾಂ, ಹೈದರಾಬಾದ್
|
Google Oneindia Kannada News

sathyam new ceo ram myanmpati
ಹೈದರಾಬಾದ್, ಜ. 8 :7 ಸಾವಿರ ಕೋಟಿ ರೂ ಕಾರ್ಪೋರೇಟ್ ಹಗರಣದಲ್ಲಿ ಸಿಲುಕಿ ತೊಳಲಾಡುತ್ತಿರುವ ಸತ್ಯಂ ಕಂಪ್ಯೂಟರ್ಸ್ ಕಂಪನಿ ಇಂದು ಸಂಜೆ ಸಾರ್ವಜನಿಕರ ಮುಂದೆ ಪ್ರತ್ಯಕ್ಷವಾಯಿತು.ಹೈದರಾಬಾದಿನಲ್ಲಿ ಗುರುವಾರ ಸಂಜೆ 5 ಗಂಟೆಗೆ ಕಂಪನಿಯ ವಕ್ತಾರರು ಪತ್ರಿಕಾಗೋಷ್ಠಿ ನಡೆಸಿದರು. ಗೋಷ್ಠಿಯ ಮುಖ್ಯಾಂಶಗಳು ಕೆಳಕಂಡಂತಿವೆ :

*ಪತ್ರಿಕಾಗೋಷ್ಠಿ ಗುರುವಾರ ಸಂಜೆ 5 ಗಂಟೆಗೆ ಸತ್ಯಂ ಕಂಪ್ಯೂಟರ್ಸ್ ನ ಪ್ರಧಾನ ಕಾರ್ಯಾಲಯದಲ್ಲಿ ಆರಂಭವಾಯಿತು.
*ಸತ್ಯಂ ಕಂಪ್ಯೂಟರ್ಸ್ ನ ಆರು ಮಂದಿ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
*ಹಂಗಾಮಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮ್ ಮೈನಂ ಪತಿ, ವೀರೇಂದ್ರ ಅಗರ್ವಾಲ್, ಸಿ ಆರ್ ಆನಂದ್ ಮತ್ತು ಕೇಶವ್ ಪಾಂಡ ಸಭೆಯಲ್ಲಿ ಉಪಸ್ಥಿತರಿದ್ದರು.
*ಪ್ರಸ್ತುತ ನಮಗೆ ಎದುರಾಗಿರುವ ಪರಿಸ್ಥಿತಿ ದುರದೃಷ್ಟಕರ.
*ಈ ದುರದೃಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತೇವೆ. ನೌಕರರು, ಗ್ರಾಹಕರೊಂದಿಗೆ ಪೂರ್ಣ ವಿಶ್ವಾಸದಿಂದ ವ್ಯವಹರಿಸುತ್ತೇವೆ.
*ವ್ಯಾಪಾರ ವಹಿವಾಟುಗಳನ್ನು ಮುಂದುವರಿಸುವುದು, ಸಮಸ್ಯೆಗಳಿಂದ ಹೊರಬರುವುದು ನಮ್ಮ ಪ್ರಧಾನ ಆದ್ಯತೆಗಳು.
*ಆಡಿಟಿಂಗ್ ನಲ್ಲಿ ಆದ ಅವ್ಯವಹಾರಗಳ ಬಗ್ಗೆ ವಿಚಾರಣೆ ಮಾಡಲು ಸಂಪೂರ್ಣವಾಗಿ ಸಹಕರಿಸುತ್ತೇವೆ.
*ಈ ಅವ್ಯವಹಾರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ರಾಮ್ ಸ್ಪಷ್ಟನೆ.
*ಗ್ರಾಹಕರು, ನೌಕರರಿಗೆ ನಮ್ಮ ಬಗ್ಗೆ ನಂಬಿಕೆ ಇದೆ.
*ರಾಮಲಿಂಗರಾಜು ಬಿಡುಗಡೆ ಮಾಡಿರುವ ಪತ್ರಗಳಲ್ಲಿನ ಅಂಶಗಳ ಬಗ್ಗೆ ಪರಿಶೀಲಿಸುತ್ತೇವೆ.
*ಕಂಪನಿಯಲ್ಲಿ 53 ಸಾವಿರ ನೌಕರರಿದ್ದಾರೆ. ಅವರ ಉದ್ಯೋಗ ರಕ್ಷಣೆಗೆ ಸತ್ಯಂ ಸಿದ್ಧ
*ಜಗತ್ತಿನ ನಾನಾಕಡೆ ಇರುವ 50,000 ಗ್ರಾಹಕರು ನಮ್ಮೊಂದಿಗೇ ಇದ್ದಾರೆ.
*ಹೊಸ ಆಡಳಿತ ಮಂಡಳಿಯನ್ನು ಸ್ಥಾಪಿಸುತ್ತೇವೆ, ನಮ್ಮ ಗುರಿ ಮುಟ್ಟುತ್ತೇವೆ.
*ನೌಕರರ ಸಂಬಳದ ಬಗ್ಗೆ ನಾವು ಆದಷ್ಟು ಕಾಳಜಿ ವಹಿಸುತ್ತೇವೆ.
*ರಾಮಲಿಂಗರಾಜು ಅವರ ರಾಜಿನಾಮೆ ಪತ್ರವನ್ನು ಸಮಗ್ರವಾಗಿ ಅಧ್ಯಯನ ಮಾಡಲಾಗುತ್ತಿದೆ.
*ರಾಮಲಿಂಗರಾಜು ರಾಜೀನಾಮೆಯನ್ನು ಇನ್ನೂ ಅಂಗೀಕರಿಸಿಲ್ಲ.
*ಜನವರಿ 10ರಂದು ನಡೆಯುವ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಣಯ ತೆಗೆದುಕೊಳ್ಳಲಾಗುತ್ತದೆ.
*ರಾಮಲಿಂಗರಾಜು ರಾಜಿನಾಮೆ ನಂತರ ಸಹ ಅವರು ಕಾನ್ಪರೆನ್ಸ್ ಕಾಲ್ ಮೂಲಕ ನಮ್ಮೊಂದಿಗೆ ಮಾತನಾಡಿದ್ದಾರೆ.
*ಅಗತ್ಯವಾದರೆ ಸಭೆಗೆ ನಾನೂ ಬರುತ್ತೇನೆ ಎಂದು ರಾಮಲಿಂಗರಾಜು ತಿಳಿಸಿದ್ದಾರೆ.
*ಸೆಬಿ ಅಧಿಕಾರಿಗಳು ಸತ್ಯಂ ಕಂಪನಿಗೆ ಬಂದಿದ್ದಾರೆ. ಅವರಿಗೆ ಸಹಕರಿಸುತ್ತೇವೆ.
*ಮುಖ್ಯ ಹಣಕಾಸು ಅಧಿಕಾರಿ(ಸಿಎಫ್ ಓ) ವಿ.ಶ್ರೀನಿವಾಸ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
*ಹೊಸ ಸಿಎಫ್ ಒ ನೇಮಕಾತಿ ಬಗ್ಗೆ ಜ.10ರಂದು ನಿರ್ಣಯ ಕೈಗೊಳ್ಳಲಾಗುವುದು.

ಪೂರಕ ಓದಿಗೆ:
ಮೇಟಾಸ್ ಇನ್ ಫ್ರಾ ಲಿ.ಅಧ್ಯಕ್ಷ ರಾಜೀನಾಮೆ
ಸತ್ಯಂ ಖರೀದಿರುವ ಆಲೋಚನೆ ಇಲ್ಲ: ಇನ್ಫಿ
ತಲೆಮರೆಸಿಕೊಂಡ ರಾಮಲಿಂಗಾರಾಜು: ಸೆಬಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X