ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು: ತುರ್ತು ಅಗತ್ಯಕ್ಕೆ ತಕ್ಷಣ ಮಾಹಿತಿ

By Staff
|
Google Oneindia Kannada News

CM inaugurates mysore helpline
ಮೈಸೂರು, ಜ. 4 : ಮೈಸೂರು ಜಿಲ್ಲೆಯಲ್ಲಿ ತುರ್ತು ನಿರ್ವಹಣೆಗಾಗಿ ನಿಯಂತ್ರಣ ಸಹಾಯವಾಣಿ ಕೊಠಡಿಯೊಂದನ್ನು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಇಂದು ಉದ್ಘಾಟಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಜಿಲ್ಲೆಯ ತುರ್ತು ಅಗತ್ಯಗಳ ಸಂದರ್ಭದಲ್ಲಿ ಎಲ್ಲ ಪ್ರದೇಶಗಳಿಂದ ತಕ್ಷಣ ಮಾಹಿತಿ ಈ ವ್ಯವಸ್ಥೆಯಿಂದ ಲಭ್ಯವಾಗಲಿದೆ. ಶೀಘ್ರಗತಿಯಿಂದ ನಿರ್ವಹಣೆ ಸಾಧ್ಯವಾಗುವುದು. ಈ ನಿರ್ವಹಣೆಯಲ್ಲಿ ಎಲ್ಲ ಇಲಾಖೆಗಳ ಸಹಯೋಗವಿದೆ. ಜಿಲ್ಲೆಯಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳಿಂದಾಗುವ ಅನಾಹುತಗಳ ಪರಿಣಾಮಗಳ ನಿಯಂತ್ರಣ ಸಾಧ್ಯವಾಗುತ್ತದೆ. ಜಿಲ್ಲೆಯ ನಾಗರೀಕರು ಪ್ರತಿದಿನ 24 ಗಂಟೆಯೂ ಸಹಾಯವಾಣಿಯ ಸೌಲಭ್ಯ ಪಡೆಯಬಹುದು ಎಂದು ಮುಖ್ಯಮಂತ್ರಿ ಡಾ: ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಅಲ್ಲದೆ ಈ ನಿಯಂತ್ರಣ ಕೊಠಡಿಯಲ್ಲಿ ದೂರುಗಳ ಸ್ವೀಕೃತಿ ಮತ್ತು ಇತ್ಯರ್ಥದ ಕ್ರಮಗಳನ್ನು ಯಾವುದೇ ಸಮಯದಲ್ಲಿ ಪರಿಶೀಲಿಸಬಹುದಾಗಿದೆ. ದೂರನ್ನು ಸ್ವೀಕರಿಸಿದ ತಕ್ಷಣವೇ ಸಂಬಂಧಿತ ಅಧಿಕಾರಿಗೆ ದೂರಿನ ಮಾಹಿತಿ ತಲುಪುವುದರಿಂದ ತ್ವರಿತ ಪರಿಹಾರ ಸಾಧ್ಯವಾಗುವುದು. ಅಲ್ಲದೆ ಮಳೆ ವಿವರ, ಬೆಳೆ ಪರಿಸ್ಥಿತಿ, ಜಲಾಶಯಗಳ ನೀರಿನ ಮಟ್ಟ ಮುಂತಾದ ಮುಖ್ಯ ವಿಷಯಗಳ ದೈನಂದಿನ ಮಾಹಿತಿ ಸಂಗ್ರಹಣೆ ನಿಯಂತ್ರಣ ಕೇಂದ್ರದಿಂದ ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಇನ್ನು ಮುಂದೆಯೂ ಜಿಲ್ಲೆಯಲ್ಲಿ ತ್ವರಿತ ನಿರ್ವಹಣೆಗಾಗಿ ಸರ್ಕಾರ ಕೆಲವು ಯೋಜನೆಗಳನ್ನು ರೂಪಿಸುತ್ತಿದೆ. ಜಲಾಶಯಗಳಿಗೆ ಹೆಚ್ಚಿನ ಪ್ರಸರಣಾ ಶಕ್ತಿಯ ವೈರ್ ಲೆಸ್ ವ್ಯವಸ್ಥೆ ಹೊಂದುವುದು. ಕಂದಾಯ ಇಲಾಖೆಯ ಎಲ್ಲ ಗ್ರಾಮ ಲೆಕ್ಕಿಗರಿಗ ಸಹ ವೈರ್ ಲೆಸ್ ಉಪಕರಣವನ್ನು ನೀಡಲು ಯೋಜನೆ ರೂಪಿಸಲಾಗುತ್ತಿದ್ದು , ಇದರ ಮೂಲಕ ಜಿಲ್ಲೆಯ ಮೂಲೆಮೂಲೆಯಿಂದಲೂ ತಕ್ಷಣದ ಮಾಹಿತಿಯ ಸ್ವೀಕಾರ ಸಾಧ್ಯವಾಗುತ್ತದೆ. ಅಬಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳೂ ಸಹ ಮುಂದಿನ ಯೋಜನೆಗಳಲ್ಲಿ ಜಿಲ್ಲಾ ವೈರ್‌ಲೆಸ್ ಜಾಲಕ್ಕೆ ಸೇರಿಕೊಳ್ಳಲಿವೆ ಎಂದು ಡಾ: ಯಡಿಯೂರಪ್ಪ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)
ಭಯೋತ್ಪಾದನೆ ವಿರುದ್ಧ ಸಮರ : ಯಡಿಯೂರಪ್ಪ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X