ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷಯ ಪಾತ್ರಾ ಲಿಮ್ಕಾ ದಾಖಲೆಗೆ ಪಾತ್ರ

By Staff
|
Google Oneindia Kannada News

ಬೆಂಗಳೂರು, ಜ.3: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿರುವ ಇಸ್ಕಾನ್ ನ 'ಅಕ್ಷಯ ಪಾತ್ರಾ' ಕಾರ್ಯಕ್ರಮ ಲಿಮ್ಕಾ ದಾಖಲೆಗೆ ಪಾತ್ರವಾಗಿದೆ. ಈ ಮೂಲಕ ಅಕ್ಷಯ ಪಾತ್ರಾ ಯೋಜನೆಗೆ ಮತ್ತೊಂದು ಗರಿ ಮೂಡಿದಂತಾಗಿದೆ.

ಇಸ್ಕಾನ್ ನ ಅಕ್ಷಯ ಪಾತ್ರಾ ಯೋಜನೆ ವಿಶ್ವದಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದು ಶಾಲಾ ಮಕ್ಕಳಿಗೆ ನಡೆಸುತ್ತಿರುವ ಅತಿದೊಡ್ಡ ಕಾರ್ಯಕ್ರಮವಾಗಿದೆ. ಸರ್ಕಾರಿ, ಖಾಸಗಿ ಮತ್ತು ಅಂಗನವಾಡಿ ಕೇಂದ್ರಗಳ 9.73 ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆಯ ಮೂಲಕ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ದೇಶದಾದ್ಯಂತ 5700 ಶಾಲೆಗಳು ಈ ಯೋಜನೆಯ ಲಾಭ ಪಡೆಯುತ್ತಿವೆ.

'ದೇಶದಲ್ಲಿರುವ ಯಾವುದೇ ಮಗು ಹಸಿವಿನಿಂದಾಗಿ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಧ್ಯೇಯೋದ್ದೇಶ ಹೊಂದಿರುವ ಈ ಯೋಜನೆ ನಿಜಕ್ಕೂ ಅನುಕರಣೀಯ' ಎಂದು ಲಿಮ್ಕಾ ವಿಶ್ವದಾಖಲೆಗಳ ಪುಸ್ತಕ ಬಣ್ಣಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಕ್ಷಯ ಪಾತ್ರಾ ಪ್ರತಿಷ್ಠಾನದ ಮಧು ಪಂಡಿತ್ ದಾಸ್, ಇದು ನಮ್ಮ ಪ್ರತಿಷ್ಠಾನಕ್ಕೆ ಸಂದ ಗೌರವವಾಗಿದೆ. ಈ ದಶಕ ಪೂರ್ಣಗೊಳ್ಳುವ ಹೊತ್ತಿಗೆ ನಿತ್ಯ 10 ಲಕ್ಷ ಮಕ್ಕಳಿಗೆ ಬಿಸಿಯೂಟ ನೀಡುವ ಗುರಿಗೆ ಮತ್ತಷ್ಟು ಹತ್ತಿರವಾಗಿದ್ದೇವೆ ಎಂದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X