ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ಕಳೆದ ವರ್ಷ 2000 ಆತ್ಮಹತ್ಯೆಗಳು

By Staff
|
Google Oneindia Kannada News

ಬೆಂಗಳೂರು, ಜ. 2 : 2008 ರ ಅನೇಕ ಕಹಿ ಘಟನೆಗಳಲ್ಲಿ ಇನ್ನೊಂದು ಸೇರ್ಪಡೆಯಾಗಿದೆ. ಕಳೆದ ವರ್ಷದಲ್ಲಿ ಸುಮಾರು ಎರಡು ಸಾವಿರ ಜನ ವೈಯಕ್ತಿಕ ಹಾಗೂ ಮತ್ತಿತರ ಕಾರಣಗಳಿಂದ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಬಹಿರಂಗಪಡಿಸಿರುವ ಬೆಂಗಳೂರು ಅಪರಾಧಿ ವಿಭಾಗದ ಪೊಲೀಸ್ ಅಧಿಕಾರಿಗಳು ಮೃತಪಟ್ಟವರಲ್ಲಿ ಗಂಡಸರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ದೇಶದ ಅತ್ಯಹತ್ಯಾ ನಗರಿ ಎಂಬ ಪಟ್ಟ ಹೊಂದಲು ಬೆಂಗಳೂರು ಸಜ್ಜಾಗಿದೆ.

2008ರಲ್ಲಿ ಆತ್ಮಹತ್ಯೆಗಳ 2 ಸಾವಿರದಷ್ಟು ಜರುಗಿವೆ. ಈ ಘಟನೆಯಲ್ಲಿ ಸತ್ತವರು 20 ರಿಂದ 30 ವರ್ಷದ ಅಸುಪಾಸಿನವರಾಗಿದ್ದಾರೆ. ಜೀವನದಲ್ಲಿ ಜಿಗುಪ್ಸೆ, ಕೈಲಾಗದ ಸ್ಥಿತಿ, ಸಾಲದ ಬಾಧೆ ಗಂಡಸರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದರೆ, ಒತ್ತಡ, ಶೋಷಣೆ, ವರದಕ್ಷಿಣೆ ಕಾಟ, ಭಾವೋನ್ಮಾದಗಳು ಮಹಿಳೆಯರ ಜೀವವನ್ನು ಬಲಿತೆಗೆದುಕೊಂಡಿದೆ. 45 ವರ್ಷದ ನಂತರ ಗಂಡಸರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳುತ್ತಾರೆ ಸಾಗರ್ ಅಪೋಲೋ ಆಸ್ಪತ್ರೆಯ ಮನೋವೈದ್ಯ ಎಂ ಜೆ ಥಾಮಸ್.

ಇದರ ಜೊತೆಗೆ ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟು ಅನೇಕರನ್ನು ಬೀದಿಪಾಲು ಮಾಡಿದೆ. ನೂರೆಂಟು ಕಮಿಟ್ ಮೆಂಟ್ ಗಳನ್ನು ಹೊಂದಿರುವವರಿಗೆ ಇದ್ದಕ್ಕಿದ್ದ ಹಾಗೆ ವ್ಯಾಪಾರದಲ್ಲಿ ನಷ್ಟ ಹಾಗೂ ಪಿಂಕ್ ಸ್ಲಿಪ್ ಮೇಳಗಳ ಹಾವಳಿಯಿಂದ ಅನೇಕರು ಜೀವ ಕಳೆದುಕೊಂಡಿದ್ದಾರೆ ಎನ್ನುವುದು ಸತ್ಯ. ಪರೀಕ್ಷೆಯಲ್ಲಿ ಪಲ್ಟಿ, ಭಗ್ನ ಪ್ರೇಮಿಗಳು ಕೂಡ ಈ ಪಟ್ಟಿಯಲ್ಲಿದ್ದಾರೆ ಎಂದು ಥಾಮಸ್ ಹೇಳುತ್ತಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X