ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸವರ್ಷ ಮಸ್ತ್ ಮಜಾ ಮಾಡಿ, ಆದರೆ ನಿಯಮ ಮರೀಬೇಡಿ

By Staff
|
Google Oneindia Kannada News

Shankar Bidari
ಬೆಂಗಳೂರು, ಡಿ. 31 : ಹೊಸ ವರ್ಷದ ಸ್ವಾಗತ ಸಂಭ್ರಮ ನಡೆಯುವ ಮಹಾತ್ಮ ಗಾಂಧಿ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಡಿಸೆಂಬರ್ 31 ರ ರಾತ್ರಿ 8 ರಿಂದ ಜನವರಿ 1ರ ಬೆಳಗಿನ ಜಾವದವರೆಗೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ.

ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಹಾಗೂ ಸ್ಟ್ರೀಟ್ ರಸ್ತೆಯಲ್ಲಿ ಹೊಸ ವರ್ಷಾಚರಣೆ ಸಂಭ್ರಮ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ. ಡಿ. 31ರ ರಾತ್ರಿ 8 ಗಂಟೆ ಯ ನಂತರ ವಾಹನಗಳು ಈ ಕೆಳಗಿನ ಮಾರ್ಗಗಳ ಮೂಲಕ ಸಾಗಬಹುದು. ಕ್ವೀನ್ಸ್ ರಸ್ತೆ ಪ್ರತಿಮೆ ಕಡೆಯಿಂದ ಎಂಜಿ ರಸ್ತೆ ಮಾರ್ಗವಾಗಿ ಹಲಸೂರು ಕಡೆಗೆ ಹೋಗುವ ವಾಹನಗಳು ಅನಿಲ್ ಕುಂಬ್ಳೆ ವೃತ್ತದ ಬಳಿ ಎಡ ತಿರುವು ಪಡೆದು ವೆಬ್ ಜಂಕ್ಷನ್ ಬಳಿ ಕಬ್ಬನ್ ರಸ್ತೆಯತ್ತ ಬಲ ತಿರುವು ಪಡೆದು ವೆಬ್ ಜಂಕ್ಷನ್ ಬಳಿ ಎಂಜಿ ರಸ್ತೆ ಸೇರುವುದು. ಹಲಸೂರಿನಿಂದ ಬಂದು ದಂಡು ಪ್ರದೇಶದತ್ತ ಸಾಗುವ ವಾಹನಗಳು ಟ್ರಿನಿಟಿ ವೃತ್ತದ ಬಳಿ ಬಲ ತಿರುವು ಪಡೆದು ಹಲಸೂರು ರಸ್ತೆಯಲ್ಲಿ ಎಡ ತಿರುವು ಪಡೆದು ಡಿಕನ್ಸನ್ ರಸ್ತೆ ಮೂಲಕ ಸಾಗುವುದು.

ಇಲ್ಲಿ ಪಾರ್ಕಿಂಗ್ ಮಾಡಿ: ಕಾಮರಾಜ್ ರಸ್ತೆಯ ಎರಡು ಮಗ್ಗುಲುಗಳಲ್ಲಿ ಹಾಗೂ ಕಾಮರಾಜ್ ರಸ್ತೆಯಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೆ, ಕಬ್ಬನ್ ಪಾರ್ಕ್ ನ ಕಿಂಗ್ಸ್ ರಸ್ತೆ, ಶಿವಾಜಿ ನಗರ ಬಸ್ ನಿಲ್ದಾಣ ಸುತ್ತಮುತ್ತ ನಿಲುಗಡೆ ಮಾಡಬಹುದು. ಇದರ ಜೊತೆಗೆ ಹೊಸ ವರ್ಷದ ಸಂಭ್ರಮದಲ್ಲಿ ಅತಿಯಾಗಿ ಮಧ್ಯಪಾನ ಮಾಡದಿರುವಂತೆ ಪೊಲೀಸ್ ಆಯುಕ್ತ ಶಂಕರಿ ಬಿದರಿ ಮನವಿ ಮಾಡಿಕೊಂಡಿದ್ದಾರೆ. ಗುಂಪಾಗಿ ತೆರಳಿ ಮಧ್ಯಪಾನ ಹಾಗೂ ಸಂಭ್ರಮಾಚರಣೆ ಮಾಡುವವರು ಪೈಕಿ ವಾಹನ ಚಲಾಯಿಸುವವರು ಮಧ್ಯಪಾನ ಮಾಡಬಾರದು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರ ಜೊತೆ ಸಹಕರಿಸುವಂತೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X