ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾದೇಗೌಡರ ಮೇಲೆ ಬಿಜೆಪಿ ಜನರ ಹಲ್ಲೆ

By Staff
|
Google Oneindia Kannada News

BJP activists attack G Madegowda in Maddur
ಮದ್ದೂರು, ಡಿ. 30 : ಬಿಜೆಪಿ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ವಿರುದ್ಧವಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು ಹಿರಿಯ ರಾಜಕಾರಣಿ ಜಿ. ಮಾದೇಗೌಡರ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ಮಾದೇಗೌಡರಿದ್ದ ಗಾಂಧಿ ಸ್ಮಾರಕ ಭವನಕ್ಕೆ ನುಗ್ಗಿದ ದುಷ್ಕರ್ಮಿಗಳು ಭವನದ ಕಿಟಕಿ ಗಾಜು, ಕುರ್ಚಿ ಮೇಜುಗಳನ್ನು ನುಚ್ಚುನೂರು ಮಾಡಿದ್ದಾರೆ ಮತ್ತು ಮಾದೇಗೌಡರಿಗೆ ಸೇರಿದ ಕಾರನ್ನು ಜಖಂಗೊಳಿಸಿದ್ದಾರೆ.

'ಮಾದೇಗೌಡರು ತಮ್ಮ ಮಗನನ್ನು ರಾಜಕೀಯವಾಗಿ ಪ್ರವರ್ಧಮಾನಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮದ್ದೂರಿನಲ್ಲಿ ಸೋಲಲು ಮಾದೇಗೌಡರೇ ಕಾರಣ' ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಮಾದೇಗೌಡರನ್ನು ದೈಹಿಕವಾಗಿ ಹೊಡೆದಿದ್ದಲ್ಲದೆ ಅವರ ಬಟ್ಟೆಗಳನ್ನು ಹರಿದು ಚಿಂದಿಮಾಡಲಾಗಿದೆ. ಈಗ ತಾನೆ ಮುಗಿದಿರುವ ಉಪಚುನಾವಣೆಯಲ್ಲಿ ಇಲ್ಲಿ ಜೆಡಿಎಸ್ ಅಭ್ಯರ್ಥಿ ಕಲ್ಪನಾ ಸಿದ್ದರಾಜು ಗೆದ್ದಿದ್ದು, ತಮ್ಮಣ್ಣ ಹಿನಾಯವಾಗಿ ಸೋತಿದ್ದಾರೆ. ಹಲ್ಲೆ ಮಾಡಿದವರು ನನ್ನನ್ನು ಕೊಂದಿಲ್ಲದಿರುವುದೇ ಹೆಚ್ಚು. ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾದೇಗೌಡರು ಆಗ್ರಹಿಸಿದ್ದಾರೆ.

ದೇವೇಗೌಡ ಧರಣಿ ಬೆದರಿಕೆ : ಮಾದೇಗೌಡರ ಮೇಲೆ ಹಲ್ಲೆ ನಡೆದಿರುವುದನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೀವ್ರವಾಗಿ ಖಂಡಿಸಿದ್ದಾರೆ. ಆರೋಪಿಗಳನ್ನು ಕೂಡಲೆ ಬಂಧಿಸದಿದ್ದರೆ ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆಯ ಮುಂದೆ ಸ್ವತಃ ಧರಣಿ ಕೂಡುವುದಾಗಿ ಬೆದರಿಸಿದ್ದಾರೆ.

ಮಾದೇಗೌಡ ಮತ್ತು ನನ್ನ ನಡುವೆ ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅಂತಹ ಹಿರಿಯ ರಾಜಕಾರಣ ಮೇಲೆ ನಡೆದ ಹಲ್ಲೆ, ಅವಮಾನ ದುಃಖ ತರುವಂಥದ್ದು ಎಂದು ದೇವೆಗೌಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮ ಪಕ್ಷದ ಹೆಣ್ಣಮಗು ಕಲ್ಪನಾ ಸಿದ್ದರಾಜು ಘಟಾನುಘಟಿಗಳನ್ನು ಸೋಲಿಸಿದ್ದಾರೆ. ಅವರ ಮೇಲೆಯೂ ಹಲ್ಲೆಯಾಗಬಹುದು. ಅಲ್ಲಿ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ಹಲ್ಲೆ ಮಾಡಿದ ಮೇಲೆ ಎಸ್ ಪಿಗೆ ದೂರು ನೀಡಿದರೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಜಿಲ್ಲಾಧಿಕಾರಿ ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೇವೇಗೌಡ ಆರೋಪಿಸಿದರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಕಲ್ಪನಾ ಸಿದ್ದರಾಜುಗೆ ಮದ್ದೂರು ವಡೆ
ವಿಧವೆಯರ ಬೆಂಬಲಕ್ಕೆ ನಿಲ್ಲುವ ಮಂಡ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X