ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡರ ಮಾನ ಕಾಪಾಡಿದ ಸೊಸೆ ಅನಿತಾ

By Staff
|
Google Oneindia Kannada News

anita kumaraswamy
ತುಮಕೂರು, ಡಿ. 30 : ಒಂದಡೆ ಆಡಳಿತ ಪಕ್ಷ ಬಿಜೆಪಿಯ ಆನೆಬಲ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಅಡ್ಡಗಾಲು. ಇವೆರಡರ ನಡುವೆ ಜಿಗಿದುಬಂದ ಕುದುರೆ ಜೆಡಿಎಸ್. ಚುನಾವಣಾ ಪಗಡೆಪಣಕ್ಕಿಟ್ಟ ದ್ರೌಪದಿ ಎಂಬ ಅಪಹಾಸ್ಯದ ಮಾತುಗಳನ್ನು ನುಂಗಿಕೊಂಡೇ ಮಧುಗಿರಿ ಕೋಟೆಯನ್ನು ಭೇದಿಸಿದವರು ಅನಿತಾ ಕುಮಾರಸ್ವಾಮಿ. ರಾಜಕೀಯ ಚದುರಂಗದಾಟದಲ್ಲಿ ಅಂತಿಮವಾಗಿ ಅವರು ಮಾವ ದೇವೇಗೌಡರು ಮತ್ತು ಗಂಡ ಕುಮಾರಸ್ವಾಮಿಯ ಮಾನ ಕಾಪಾಡಿದ್ದಾರೆ.

ಅನಿತಾ ಕುಮಾರಸ್ವಾಮಿ ಅವರು ಕಾಂಗ್ರೆಸ್ ನ ಕೆ ಎನ್ ರಾಜಣ್ಣ ಅವರ ವಿರುದ್ಧ 3,809 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅಂತಿಮ ಸುತ್ತಿನವರೆಗೂ ಜೆಡಿಎಸ್-ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿದವು. ಒಂದು ಹಂತದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚೆನ್ನಿಗಪ್ಪ ಪುತ್ರ ಜೆಡಿಎಸ್ ಅಭ್ಯರ್ಥಿ ಗೌರಿಶಂಕರ ವಿರುದ್ಧ ಕೇವಲ 560 ಮತಗಳ ಅತ್ಯಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ ಎನ್ ರಾಜಣ್ಣ, ಈ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಾಚಾರವನ್ನೂ ಹಾಕಲಾಗಿತ್ತು.

ಆದರೆ ಅನಿತಾ ಕುಮಾರಸ್ವಾಮಿ ಅವರು ಈ ಎಲ್ಲ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡಿ 3,809 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಿಜೆಪಿ ಹುರಿಯಾಳು ಮಾಜಿ ಸಚಿವ ಸಿ ಚೆನ್ನಿಗಪ್ಪ ಹೀನಾಯ ಸೋಲುನುಭವಿಸುವ ಮೂಲಕ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ತುರುವೇಕೆರೆಯಲ್ಲಿ ಜೆಡಿಎಸ್ ಜಯ

ತಾಂತ್ರಿಕ ದೋಷದಿಂದ ಮತಎಣಿಕೆಯಲ್ಲಿ ವಿಳಂಬವಾಗಿತ್ತು. ಇದಕ್ಕೂ ಮೊದಲು ಬಿಜೆಪಿ ಅಭ್ಯರ್ಥಿ ಎಂ ಡಿ ಲಕ್ಷ್ಮಿನಾರಾಯಣ ಗೆಲುವು ಸಾಧಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ನಂತರದಲ್ಲಿ ರಾಜ್ಯ ಚುನಾವಣೆ ಆಯೋಗ ಅಧಿಕೃತವಾಗಿ ಘೋಷಣೆ ಮಾಡಿದ್ದು, ಜೆಡಿಎಸ್ ಅಭ್ಯರ್ಥಿ ಎಂ ಟಿ ಕೃಷ್ಣಪ್ಪ ಅವರು 3,301 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಫಲಿತಾಂಶ ಘೋಷಣೆ ಮಾಡಬಾರದು ಎಂದು ಲಕ್ಷ್ಮಿನಾರಾಯಣ ಆಯೋಗಕ್ಕೆ ದೂರು ನೀಡಿದ್ದರು. ಆದರೆ ಲಕ್ಷ್ಮಿನಾರಾಯಣ ದೂರನ್ನು ಮನ್ನಿಸದ ಆಯೋಗದ ಎಂ ಟಿ ಕೃಷ್ಣಪ್ಪ ಅವರ ಗೆಲುವು ಘೋಷಣೆ ಮಾಡಲು ಮುಂದಾಗುತ್ತಿದ್ದಂತೆಯೇ ಲಕ್ಷ್ಮಿನಾರಾಯಣ ಅವರಿಗೆ ಹೃದಯಾಘಾತವಾಯಿತು. ತಕ್ಷಣ ಅವರನ್ನು ತುಮಕೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತುರುವೇಕೆರೆ ತಿರುಗುಮುರುಗಾದ ಫಲಿತಾಂಶ?
ಜಯದ ಹಾದಿಯಲ್ಲಿ ಅನಿತಾ ಕುಮಾರಸ್ವಾಮಿ
ಮಧುಗಿರಿ, ಮದ್ದೂರಿನ ಜೆಡಿಎಸ್ ಗೆಲುವಿನ ನಗೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X