ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಕ್ಕೇರಿ ಮರುಚುನಾವಣೆ ಪ್ರಶ್ನೆಯೇ ಇಲ್ಲ,

By Staff
|
Google Oneindia Kannada News

ಬೆಂಗಳೂರು, ಡಿ. 29 : ಚಾಲಕನ ಅನಾರೋಗ್ಯದಿಂದ ಹುಕ್ಕೇರಿ ಉಪಚುನಾವಣೆ ಮತಯಂತ್ರಗಳನ್ನು ಸಾಗಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ ಮುಗುಚಿ ಬಿದ್ದಿದೆ. ಆದರೆ ಈ ಸಮಯದಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಎಂ ಎನ್ ವಿದ್ಯಾಶಂಕರ್ ಸ್ಪಷ್ಟಪಡಿಸಿದರು.

ಕಳೆದ ಭಾನುವಾರ ರಾತ್ರಿ ಮತದಾನ ಪ್ರಕ್ರಿಯೆ ಮುಗಿದ ನಂತರ ಹುಕ್ಕೇರಿ ಮತಕ್ಷೇತ್ರದ ಅಭ್ಯರ್ಥಿಗಳ ಹಣೆಬರಹದ ಮತಯಂತ್ರಗಳ ಹೊತ್ತೊಯ್ಯುತ್ತಿದ್ದ ಬಸ್ ಚಾಲಕನ ಬೇಜಾಬ್ದಾರಿಯಿಂದ ಮುಗುಚಿ ಬಿದ್ದಿತ್ತು. ಹುಕ್ಕೇರಿಯಿಂದ ಬಸ್ ಬೆಳಗಾವಿಗೆ ತೆರಳುತ್ತಿತ್ತು. ಮಧ್ಯರಾತ್ರಿ ಈ ಅವಘಡ ಸಂಭವಿಸಿದ್ದರಿಂದ ನಾನಾ ಅನುಮಾನಗಳಿಗೆ ಕಾರಣವಾಗಿತ್ತು. ಕಾಂಗ್ರೆಸ್ ಕಾರ್ಯಾದ್ಯಕ್ಷ ಡಿ ಕೆ ಶಿವಕುಮಾರ್ ಇದು ಸರ್ಕಾರದ ಪಿತೂರಿ, ಕೂಡಲೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದರು.

ಜೆಡಿಎಸ್ ಮುಖಂಡರೂ ಕೂಡಾ ಇದೇ ರಾಗ ಹಾಡಿದ್ದರು. ಆದ್ದರಿಂದ ಹುಕ್ಕೇರಿ ಕ್ಷೇತ್ರ ಉಪಚುನಾವಣೆಯನ್ನು ಇನ್ನೊಂದು ಸಲ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಇಂದು ಸ್ಪಷ್ಟನೆ ನೀಡಿದ ವಿದ್ಯಾಶಂಕರ್, ಬಸ್ ಚಾಲಕ ಅನಾರೋಗ್ಯದಿಂದ ಈ ಅವಘಢ ಸಂಭವಿಸಿದೆ. ಆದರೆ ಕೆಲ ಮುಖಂಡರು ಮಾಡುತ್ತಿರುವ ಆರೋಪದ ಹಾಗೆ ಯಾವ ಅಕ್ರಮಗಳೂ ಅಲ್ಲಿ ನಡೆದಿಲ್ಲ. ಬಸ್ ಅಪಘಾತವಾಗಿ ಬರೀ 20 ನಿಮಿಷಕ್ಕೆ ಬೆಳಗಾವಿ ಜಿಲ್ಲಾಧಿಕಾರಿಗಳು ಘಟನಾ ಸ್ಥಳದಲ್ಲಿ ಹಾಜರಾಗಿದ್ದಾರೆ. ಕೂಡಲೇ ಇನ್ನೊಂದು ವಾಹನದ ಮೂಲಕ ಮತಯಂತ್ರಗಳನ್ನು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಾಗಿಸಲಾಗಿದೆ ಎಂದು ಹೇಳಿದರು.

ಮರುಚುನಾವಣೆ ನಡೆಸುವ ಅಗತ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಮರುಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿದ್ಯಾಶಂಕರ್ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)
ಅಡ್ವಾಣಿ ಪಿಎಂ ಮಾಡುವುದೇ ಏಕೈಕ ಗುರಿ : ಸಿಎಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X