ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಯಂತ್ರದ ಬಸ್ ಪಲ್ಟಿ, ಮರುಮತದಾನಕ್ಕೆ ಆಗ್ರಹ

By Staff
|
Google Oneindia Kannada News

ಬೆಳಗಾವಿ, ಡಿ. 29 : ಹುಕ್ಕೇರಿ ಮತಕ್ಷೇತ್ರಕ್ಕೆ ಸಂಬಂಧಿಸಿದ ಮತಯಂತ್ರ ಸಾಗಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ಸೊಂದು ಅಪಘಾತತಕ್ಕೀಡಾಗಿ ಒಬ್ಬ ಮೃತಪಟ್ಟು ಎಂಟು ಮಂದಿ ಗಾಯಗೊಂಡಿರುವ ಘಟನೆ ಜರುಗಿದೆ. ಈ ಅಪಘಾತ ಪೂರ್ವನಿಯೋಜಿತ ಸಂಚು ಎದ್ದಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮರುಮತದಾನಕ್ಕೆ ಆಗ್ರಹಿಸಿವೆ.

ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಈ ಪ್ರಕರಣ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಮತಯಂತ್ರ ಇದ್ದ ಬಸ್ ರಾತ್ರಿ 12.20ಕ್ಕೆ ಹುಕ್ಕೇರಿ ಬಿಟ್ಟಿದ್ದು, 35 ಕಿಮೀ ರಸ್ತೆಯನ್ನು(ಬೆಳಗಾವಿಗೆ) 40 ನಿಮಿಷದಲ್ಲಿ ತಲುಪಬೇಕಿತ್ತು. ಆದರೆ, ಅಪಘಾತ ನಡೆದಿರುವ ಸ್ಥಳಕ್ಕೆ ಈ ಬಸ್ ತೆರಳಲು 75 ನಿಮಿಷ ತೆಗೆದುಕೊಂಡಿದೆ. ಇದು ಎಲ್ಲರಿಗೂ ಅನುಮಾನಕ್ಕೆ ಬರುವ ಸಂಗತಿಯಾಗಿದೆ ಎಂದು ಶಿವಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲ, ಅಪಘಾತ ಸಂಭವಿಸಿದ ತಕ್ಷಣ ಎಲ್ಲ ಅಭ್ಯರ್ಥಿಗಳಿಗೂ ಮಾಹಿತಿ ನೀಡಬೇಕಿತ್ತು. ಅವರ ಸಮಕ್ಷಮ ಚುನಾವಣಾಧಿಕಾರಿಗಳು ಬೇರೊಂದು ವಾಹನಕ್ಕೆ ಎಲ್ಲ ಮತಯಂತ್ರಗಳನ್ನು ಸಾಗಿಸಬೇಕಿತ್ತು. ಆದರೆ ಇರರಲ್ಲಿ ಕಾನೂನು ಗಾಳಿಗೆ ಅಕ್ರಮ ನಡೆಸಲಾಗಿದೆ ಎಂದು ಅವರು ಆರೋಪಿಸಿದರು.

(ದಟ್ಸ್ ಕನ್ನಡ ವಾರ್ತೆ)
ಉಪಚುನಾವಣೆಯಲ್ಲಿ ಶೇ.67ರಷ್ಟು ಮತದಾನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X