• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನಂತಮೂರ್ತಿ ಸೇರಿದಂತೆ ಐವರಿಗೆ ನಾಡೋಜ

By Staff
|

ಬೆಂಗಳೂರು, ಡಿ.24: ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಯು.ಅರ್.ಅನಂತಮೂರ್ತಿ ಸೇರಿದಂತೆ ಐದು ಮಂದಿ ಸಾಹಿತಿಗಳಿಗೆ ಈ ಬಾರಿಯ ನಾಡೋಜ ಪ್ರಶಸ್ತಿ ನೀಡಲಾಗಿದೆ.

ಅಖಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಲ್.ಬಸವರಾಜು ಸಾಹಿತಿಗಳಾದ ಡಾ.ಕಮಲಾಹಂಪನಾ, ಶ್ರೀನಿವಾಸ ಹಾವನೂರು ಹಾಗೂ ತೊಗಲುಗೊಂಬೆ ಕಲಾವಿದ ಹೆಡ್ರಮನಹಳ್ಳಿಯ ಭರಮಪ್ಪ ಅವರಿಗೆ ನಾಡೋಜ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹಂಪಿ ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಡಿಸೆಂಬರ್ ಅಂತ್ಯದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಗಣ್ಯರಿಗೆ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡುವರೆಂದು ಹಂಪಿ ವಿಶ್ವವಿದ್ಯಾಲಯ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

ಹಳ್ಳ ಬಂತು ಹಳ್ಳ ಕೃತಿಗೆ ಅಕಾಡೆಮಿ ಗೌರವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X