ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಂಗೆ ವಿಶ್ವಬ್ಯಾಂಕ್ ಎಂಟು ವರ್ಷ ನಿರ್ಬಂಧ

By Staff
|
Google Oneindia Kannada News

ನವದೆಹಲಿ, ಡಿ. 24 : ಅಸಮರ್ಪಕ ದಾಖಲಾತಿ ವಿವರ ನೀಡಿದ ಆರೋಪದ ಮೇಲೆ ಭಾರತದ ಸತ್ಯಂ ಕಂಪ್ಯೂಟರ್ ಮುಂದಿನ ಎಂಟು ವರ್ಷಗಳ ಕಾಲ ತನ್ನ ಜೊತೆ ಯಾವುದೇ ವ್ಯವಹಾರ ನಡೆಸುವುದನ್ನು ವಿಶ್ವಬ್ಯಾಂಕ್ ನಿಷೇಧಿಸಿದೆ. ಲಂಚ ಸೇರಿದಂತೆ ಹಲವು ಬಗೆಯ ದುರಾಡಳಿತದ ಆರೋಪಗಳನ್ನು ಇದಕ್ಕೆ ಕಾರಣವಾಗಿ ನೀಡಲಾಗಿದೆ.

ಬ್ಯಾಂಕ್ ಸಿಬ್ಬಂದಿಗೆ ಅಸಮರ್ಪಕ ಅನುಕೂಲಗಳು ಹಾಗೂ ಇನ್ ವಾಯ್ಸ್ ಗಳು ದಾಖಲಾತಿ ಇಲ್ಲದಿರುವ ಅಂಶಗಳು 2016ರ ವರಗಿನ ಈ ಬಹಿಷ್ಕಾರಕ್ಕೆ ಕಾರಣವಾಗಿದೆ ಎಂದು ವಿಶ್ವಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಸತ್ಯಂ ಅಧ್ಯಕ್ಷ ರಾಮಲಿಂಗಂರಾಜು ಅವರ ಇಬ್ಬರು ಮಕ್ಕಳು ಪ್ರವರ್ತಕರಾಗಿರುವ ಮೈತಾಸ್ ಪ್ರಾಪರ್ಟೀಸ್ ಹಾಗೂ ಮೈತಾಸ್ ಇನ್ ಫ್ರಾ ಕಂಪನಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶವೂ ಭಾರಿ ವಿವಾದವಾಗಿ ಪರಿಣಮಿಸಿತ್ತು. ನಂತರ ಹೂಡಿಕೆದಾರರಿಂದ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಡಲಾಗಿತ್ತು. 2003 ರಲ್ಲಿ ವಿಶ್ವ ಬ್ಯಾಂಕ್ ಗೆ ಐಟಿ ಸೇವೆಗಳನ್ನು ಒದಗಿಸಲು ಸತ್ಯಂ ಆರಂಭಿಸಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X