ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ಕರೆಗೆ ಅಶೋಕ್ ಚಕ್ರ ನೀಡಲು ಶಿಫಾರಸು

By Super
|
Google Oneindia Kannada News

Hemant Karkare
ಮುಂಬೈ, ಡಿ.24: ಮುಂಬೈ ಸ್ಪೋಟದ ಸಂದರ್ಭದಲ್ಲಿ ಉಗ್ರರೊಂದಿಗೆ ಹೋರಾಡಿ ಪ್ರಾಣತೆತ್ತ ಪೊಲೀಸ್ ಅಧಿಕಾರಿಗಳಿಗೆ ದೇಶದ ಅತ್ಯುನ್ನತ ಪ್ರಶಸ್ತಿ ಅಶೋಕ ಚಕ್ರ ನೀಡಬೇಕು ಎಂದು ಮುಂಬೈ ಪೊಲೀಸರು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ.

ದಾಳಿ ನಡೆದ ರಾತ್ರಿ ಉಗ್ರರನ್ನು ಹತ್ತಿಕ್ಕಿದ ಸಹಾಯಕ ಸಬ್ ಇನ್ಸ್ ಪೆಕ್ಟರ್ ತುಕಾರಾಂ ಓಂಬ್ಲೆ ಹೆಸರು ಸಹ ಪಟ್ಟ್ಟಿಯಲ್ಲಿದೆ. ಓಂಬ್ಲೆ ದಾಳಿ ನಡೆದ ರಾತ್ರಿ ಉಗ್ರರೊಂದಿಗೆ ಮುಖಾಮುಖಿ ಹೋರಾಟ ಮಾಡಿದ್ದರು. ಉಗ್ರರ ಮೇಲೆ ಅವರು ಗುಂಡಿನ ದಾಳಿ ಮಾಡುತ್ತಿದ್ದರೆ ಉಳಿದ ಪೋಲೀಸರು ಪ್ಲಾನ್ ಪ್ರಕಾರ ಉಗ್ರರನ್ನು ಮಟ್ಟಹಾಕುವ ಅವಕಾಶ ಸಿಕ್ಕಿತು. ಇದರ ಫಲಿತಾಗಿ ಓರ್ವ ಉಗ್ರನನ್ನು ಜೀವಂತವಾಗಿ ಹಿಡಿಯಲು ಸಾಧ್ಯವಾಯಿತು. ಆದರೆ ಈ ಹೋರಾಟದಲ್ಲಿ ತುಕಾರಾಂ ಓಂಬ್ಲೆ ಉಗ್ರರ ಗುಂಡಿಗೆ ಬಲಿಯಾದರು.

ಪತ್ನಿ ಮತ್ತು ನಾಲ್ಕು ಮಂದಿ ಹೆಣ್ಣುಮಕ್ಕಳ ತುಂಬು ಕುಟುಂಬ ತುಕಾರಾಂ ಅವರದು. ತುಕಾರಾಂ ಸಂಪಾದನೆ ಮೇಲೆ ಆಧಾರಪಟ್ಟ ಕುಟುಂಬ. ಇವರೊಂದಿಗೆ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಹೆಚ್ಚುವರಿ ಕಮೀಷನರ್ ಕಾಂಮ್ಟೆ, ಎನ್ ಕೌಂಟರ್ ಸ್ಪೆಷಲಿಸ್ಟ್ ಸಲಾಸ್ಕರ್ ಹೆಸರುಗಳು ಅಶೋಕ ಚಕ್ರ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಮುಂಬೈ ದಾಳಿಯಲ್ಲಿ 16 ಮಂದಿ ಪೊಲೀಸರು ಜೀವತೆತ್ತಿದ್ದಾರೆ. ಇವರಲ್ಲಿ 13 ಮಂದಿ ಹೆಸರುಗಳನ್ನು ಅಶೋಕ ಚಕ್ರ ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿದೆ.(ಏಜೆನ್ಸೀಸ್)

English summary
Karkare recommended for Ashok Chakra
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X