ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಪನಾ ಲೋಕ ಅನಾವರಣಕ್ಕೆ ಬಂತು ತಂತ್ರಾಂಶ

By Staff
|
Google Oneindia Kannada News

Now, software that can reproduce images in dreams on screen
ನೆನ್ನೆ ಕನಸಿನಲ್ಲಿ ಕಂಡದ್ದನ್ನು ಬೆಳಗ್ಗೆ ಗಣಕದ ಪರದೆಯ ಮೇಲೆ ಕಾಣುವಂತಾದರೆ, ಎಷ್ಟು ಚೆನ್ನ ಅಲ್ವಾ. ಇದನ್ನು ಸಾಕಾರಗೊಳಿಸಲು ಜಪಾನಿನ ವಿಜ್ಞಾನಿಗಳು ಹಗಲು ರಾತ್ರಿ ನಿದ್ದೆಗೆಟ್ಟು ಕೆಲಸ ಮಾಡುತ್ತಿದ್ದಾರಂತೆ. ಹೊಸ ಸಾಧನವೊಂದನ್ನು ತಯಾರಿಸಿದ್ದು, ಮುಂದೊಂದು ದಿನ ಕನಸಿನ ಅರ್ಥವನ್ನು ತೆರೆಯ ಮೇಲೆ ಮೂಡಿಸುತ್ತದಂತೆ.

ಸಾಮಾನ್ಯ ವಿಜ್ಞಾನ ತಿಳುವಳಿಕೆ ಇದ್ದವರಿಗೆ ಗೊತ್ತಿರುವಂತೆ ನಿದ್ರಾವಸ್ಥೆಯ ವಿವಿಧ ಹಂತಗಳಲ್ಲಿ ಮೆದುಳಿನ ಕಾರ್ಯಚಲನೆಯನ್ನು ಈ ಸಾಧನ ಗುರುತಿಸಿ, ಅದನ್ನು ಚಿತ್ರ ರೂಪದಲ್ಲಿ ತೆರೆಯ ಮೇಲೆ ಮೂಡಿಸುತ್ತದೆ. ಇದರಿಂದ ಕನಸಿನಲ್ಲಿ ಕಂಡದ್ದನ್ನು ತಿಳಿಯಬಹುದು. ಮನಸ್ಸಿನ ಮಾತುಗಳು ಚಿತ್ರರೂಪದಲ್ಲಿ ಅರ್ಥನೀಡಲಿದೆ ಎನ್ನುತ್ತಾರೆ ವಿಜ್ಞಾನಿಗಳು.

ವಿವಿಧ ಸ್ಥಿತಿಯಲ್ಲಿ ಮೆದುಳಿನ ಕಾರ್ಯ ನಿರ್ವಹಣೆ, ಕಣ್ಣಿನ ರೆಟಿನಾ ದೃಶ್ಯಗಳ ಹಿಡಿದಿಡುವ ವಿಧಾನದ ಮೇಲೆ ಹೆಚ್ಚಿನ ಗಮನ ಹರಿಸಿ ಈ ಸಾಧನ ಕೆಲಸಮಾಡಲಿದೆ ಎಂದು ಈ ಯೋಜನೆಯ ಮುಖ್ಯಸ್ಥ ಯುಕಿಯಾಸೊ ಕಮಿತಿನಿ ಹೇಳುತ್ತಾರೆ. ಈ ಸಾಧನದಿಂದ ಈಗ ಚಾಲ್ತಿಯಲ್ಲಿರುವ ಬ್ರೈನ್ ಮ್ಯಾಪಿಂಗ್ ಹಾಗೂ ನಾರ್ಕೋ ಅನಾಲಿಸಸ್ ಕಾರ್ಯಗಳನ್ನು ಇನ್ನೂ ಸುಲಭವಾಗಿ ಮಾಡಬಹುದಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ಎಲ್ಲಾ ಬಗೆಯ ಮನುಷ್ಯರಿಗೆ ಈ ಸಾಧನವನ್ನು ಅಳವಡಿಸಿ ಪರೀಕ್ಷೆ ಮಾಡುವುದು ಬಾಕಿಯಿದೆಯಂತೆ. ಒಟ್ಟಿನಲ್ಲಿ ಇನ್ಮುಂದೆ ನೆಮ್ಮದಿಯಿಂದ ಕನಸು ಕಾಣುವುದೂ ಕಷ್ಟ ಎನ್ನುತ್ತಿದ್ದರೆ ಕೆಲ ಕುಹಕಿಗಳು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X