ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಬೆಲ್ ಪ್ರಶಸ್ತಿಗೂ ಹಿಡಿದ ಭ್ರಷ್ಟಾಚಾರದ ಗ್ರಹಣ?

By Super Admin
|
Google Oneindia Kannada News

Alfred Nobel
ಸ್ಟಾಕ್‌ಹೋಮ್, ಡಿ. 19 : ನೋಬೆಲ್ ಪ್ರಶಸ್ತಿ ಗಳಿಸಲು ಏನು ಮಾಡಬೇಕು?

ವಿಜ್ಞಾನ, ಸಾಹಿತ್ಯ, ಅರ್ಥಶಾಸ್ತ್ರ ಯಾವುದೇ ಕ್ಷೇತ್ರವಿರಲಿ ಜಾಗತಿಕ ಪ್ರಶಸ್ತಿಗಳಲ್ಲಿ ಸರ್ವಶ್ರೇಷ್ಠವೆನಿಸಿರುವ ನೋಬೆಲ್ ಪ್ರಶಸ್ತಿಗೆ ಸಂಬಂಧಿಸಿದಂತೆ ಈಮೊದಲು ಪ್ರಶ್ನೆ ಕೇಳಿದ್ದರೆ ಅಸಂಬದ್ಧ ಪ್ರಶ್ನೆ ಎನ್ನಬಹುದಿತ್ತು. ಆದರೆ ಈಗ ಈ ಅಪ್ರಸ್ತುತ ಪ್ರಶ್ನೆಯೇ ಪ್ರಸ್ತುತವೆನಿಸಿದೆ.

ನೋಬೆಲ್ ಪ್ರಶಸ್ತಿ ಯಾರಿಗೆ ನೀಡಬೇಕೆಂದು ನಿರ್ಣಯಿಸುವ ನೋಬೆಲ್ ಪ್ರಶಸ್ತಿ ಸಮಿತಿಯ ಜ್ಯೂರಿಗಳು ಪ್ರಯಾಣ, ಹೊಟೇಲು ಮತ್ತಿತರ ಸವಲತ್ತುಗಳನ್ನು ಪಡೆದು ಚೀನಾ ಪ್ರವಾಸ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ನೋಬೆಲ್ ಪ್ರಶಸ್ತಿ ವಿತರಣೆಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಸ್ವೀಡನ್ ನ ರೇಡಿಯೋ ವರದಿ ಮಾಡಿರುವ ಹಿನ್ನೆಲೆಯಲ್ಲಿ ಜ್ಯೂರಿಗಳ ವಿರುದ್ಧ ಸ್ವೀಡನ್ನಿ ಭಷ್ಟಾಚಾರ ವಿರೋಧಿ ಸಂಸ್ಥೆ ವಿಚಾರಣೆ ನಡೆಸುತ್ತಿದೆ.

ವೈದ್ಯಕೀಯ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಸಮಿತಿಯ ಮೂರು ಜ್ಯೂರಿಗಳನ್ನು 'ನೋಬೆಲ್ ಪ್ರಶಸ್ತಿ ಗಳಿಸಲು ಏನು ಮಾಡಬೇಕು?' ಎಂಬುದನ್ನು ಚರ್ಚಿಸಲು ಸಲಕ ಸವಲತ್ತುಗಳನ್ನು ನೀಡಿ ಚೀನಾ 2006 ಮತ್ತು 2008ರಲ್ಲಿ ಆಹ್ವಾನಿಸಿತ್ತು. ಚೀನಾ ಅಧಿಕಾರಿಗಳು ಅವರಿಗೆ ಪ್ರವಾಸ, ಹೊಟೇಲು, ಊಟ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಒದಗಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸ್ವೀಡಿಶ್ ಪ್ರಾಸಿಕ್ಯೂಟರ್ ಈ ಘಟನೆಗಳು ನಡೆದಿರುವುದನ್ನು ದೃಢಪಡಿಸಿದ್ದಾರೆ. ಆದರೆ, ಆ ಮೂವರು ಜ್ಯೂರಿಗಳು ಯಾರೆಂಬುದನ್ನು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದ್ದಾರೆ.

2008ರಲ್ಲಿ ಐವರು ಯುರೋಪಿಯನ್ನರು, ನಾಲ್ವರು ಅಮೆರಿಕನ್ನರು ಮತ್ತು ಮೂವರು ಜಪಾನಿಯರು ವಿವಿಧ ಕ್ಷೇತ್ರಗಳಲ್ಲಿ ನೋಬೆಲ್ ಪ್ರಶಸ್ತಿ ಗಳಿಸಿದ್ದಾರೆ. 1957ರಲ್ಲಿ ಇಬ್ಬರು ವಿಜ್ಞಾನಿಗಳು ಪ್ರಶಸ್ತಿ ಪಡೆದಿದ್ದು ಬಿಟ್ಟರೆ ಇಲ್ಲಿಯವರೆಗೆ ಚೀನಾ ದೇಶದವರು ನೋಬೆಲ್ ಪ್ರಶಸ್ತಿ ಪಡೆದಿಲ್ಲ. ನೋಬೆಲ್ ಪ್ರಶಸ್ತಿ ಗಳಿಸುವಲ್ಲಿ ಚೀನಾ ದೇಶದವರಿಗೆ ಸಹಾಯ ಮಾಡಲೆಂದೇ ಜ್ಯೂರಿಗಳು ಚೀನಾ ಪ್ರವಾಸ ಮಾಡಿದ್ದು ಸಾಬೀತಾದರೆ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಸಿಗುವ ಸಾಧ್ಯತೆಯಿದೆ. ಆದರೆ, ಅವರ ವಿರುದ್ಧ ದೋಷಾರೋಪಣೆ ಮಾಡದೆ ಬಿಡುವ ಸಾಧ್ಯತೆಯೇ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿವೆ.

(ಏಜೆನ್ಸೀಸ್)

ಪೂರಕ ಓದಿಗೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X