ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಪ್ಪತ್ತೈದು ಭಾರತೀಯರಿದ್ದ ಹಡಗು ಅಪಹರಣ

By Staff
|
Google Oneindia Kannada News

ಮುಂಬೈ,ನ.29:ಶಸ್ತ್ರಸಜ್ಜಿತ ಸೋಮಾಲಿಯ ಕಡಲುಗಳ್ಳರು ರಾಸಾಯನಿಕ ಸಾಮಗ್ರಿ ತುಂಬಿದ್ದ ಹಡಗನ್ನು ಆಡೆನ್ ಕೊಲ್ಲಿಯಿಂದ ಅಪಹರಿಸಿದ್ದಾರೆ. ಹಡಗಿನಲ್ಲಿ ಒಟ್ಟು 31 ಮಂದಿ ಪ್ರಯಾಣಿಕರಿದ್ದು ಅದರಲ್ಲಿ 25ಭಾರತೀಯರು ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಲಿಬಿಯ ದೇಶದ ನೋಂದಣಿ ಆಗಿರುವ ಈ ಹಡಗಿನಲ್ಲಿ 25 ಭಾರತೀಯರು, 3 ಬಾಂಗ್ಲಾದೇಶಿಯರು, ಇಬ್ಬರು ಬ್ರಿಟನ್ ಮತ್ತು ಒಬ್ಬರು ಐರಿಶ್ ನಾಗರಿಕರು ಇದ್ದರು ಎಂದು ಮುಂಬೈನ ನೌಕಾದಳ ಕಚೇರಿ ತಿಳಿಸಿದೆ.

ಈ ಹಡಗು ರಾಸಾಯನಿಕ ಸಾಮಗ್ರಿಗಳನ್ನು ಹೊತ್ತು ಇಂಡೋನೇಷ್ಯಾ ದಿಂದ ಯೂರೋಪ ಕಡೆಗೆ ಹೊರಟಿತ್ತು. ಕಡಲ್ಗಳ್ಳರು ಅಪಹರಿಸಿ ಬೇರೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಅಪಹರಣದ ಸುದ್ದಿ ತಿಳಿದ ತಕ್ಷಣ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆ ಈ ಸಂಬಂಧ ಕಾರ್ಯೋನ್ಮುಖವಾಗಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X