ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ಡಿಟಿವಿವಾಹಿನಿ 24x7x365x20

By Staff
|
Google Oneindia Kannada News

prannoy roy ,NDTV 24x7x365x20
ನವದೆಹಲಿ, ನ. 25 : 24/7 ಇಂಗ್ಲಿಷ್ ವಾರ್ತಾ ವಾಹಿನಿಗಳ ಸಾಲಿನಲ್ಲಿ ಮಂಚೂಣಿಯಲ್ಲಿರುವ ಎನ್ ಡಿ ಟಿವಿ ಚಾನಲ್ಲಿಗೆ ಇದೀಗ 20ರ ಸಂಭ್ರಮ. 1988ರಲ್ಲಿ ನ್ಯೂ ದಿಲ್ಲಿ ಟಿಲಿವಿಷನ್ ಹೆಸರಿನಲ್ಲಿ ಸ್ಫಾಪಿಸಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳದು ನಿಂತಿದೆ. ಎನ್ ಡಿ ಟಿವಿಯ ಸಂಸ್ಥಾಪಕ, ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಚುನಾವಣಾ ವಿಶ್ಲೇಷಕ ಪ್ರಣಯ್ ರಾಯ್ ಎನ್ ಡಿಟಿವಿ ವಾರ್ತಾ ವಾಹಿನಿಯನ್ನು ದೇಶದ ಮಾಧ್ಯಮ ರಂಗದ ಮಂಚೂಣಿಗೆ ತಂದು ನಿಲ್ಲಿಸಿದ್ದಾರೆ.

ಎನ್ ಡಿಟಿವಿಗೆ 20 ವರ್ಷ ತುಂಬಿದ ಈ ಸಂಭ್ರಮದ ಗಳಿಗೆಯಲ್ಲಿ ಅನೇಕ ಗಣ್ಯರು ಪ್ರಣಯ್ ರಾಯ್ ಅವರಿಗೆ ಶುಭ ಹಾರೈಸಿದ್ದಾರೆ. ಭಾರತೀಯ ಸೇನಾ ದಂಡಾಧಿಕಾರಿ ದೀಪಕ್ ಕಪೂರ್, ಚೆಸ್ ಪಟು ವಿಶ್ವನಾಥನ್ ಆನಂದ್, ಚಿತ್ರ ಬಾಲಿವುಡ್ ಶಾರೂಕ್ ಖಾನ್, ನಟಿ ರಾಣಿ ಮುಖರ್ಜಿ ಸೇರಿ ಅನೇಕರು ಪ್ರಣಯ್ ಅವರಿಗೆ ಶುಭ ಸಂದೇಶ ಕಳುಹಿಸಿದ್ದಾರೆ.

ಪ್ರಣಯ್ ರಾಯ್ ಸಂಕ್ಷಿಪ್ತ ಪರಿಚಯ
ಡಾ. ಪ್ರಣಯ್ ರಾಯ್ 1949 ಅಕ್ಟೋಬರ್ 15 ರಂದು ಕೊಲ್ಕತ್ತಾದಲ್ಲಿ ಜನನ. ಡೆಹ್ರಾಡೂನಿನ ಡೂನ್ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, 1973 ಲಂಡನ್ನಿನ ಲಂಡನ್ ವಿಶ್ವವಿದ್ಯಾಲಯ ಕ್ವೀನ್ ಮೇರಿ ಕಾಲೇಜ್ ನಿಂದ ಅರ್ಥಶಾಸ್ತ್ರದಲ್ಲಿ ಪದವಿ. ದೆಹಲಿ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟ್ ರೇಟ್ ಪದವಿ. ಕೆಲ ಕಾಲ ಚಾರ್ಟಡ್ ಆಕೌಂಟಂಟ್ ಆಗಿ ಸೇವೆ ಸಲ್ಲಿಸಿದ ಇವರು, ದೂರದರ್ಶನ ಹಾಗೂ ಸ್ಟಾರ್ ಟಿವಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅರ್ಥಶಾಸ್ತ್ರದ ಜತೆಗೆ ರಾಜಕೀಯ ವಿದ್ಯಮಾನಗಳನ್ನು ಅರ್ಥೈಸುಯುವುದರಲ್ಲಿಯೂ ಅಪಾರ ಪಾಂಡಿತ್ಯ ಪಡೆದಿರುವ ಇವರು, ದೇಶದ ಉತ್ತಮ ರಾಜಕೀಯ ವಿಶ್ಲೇಷಕ ಎಂಬ ಬಿರುದುಗೆ ಬಾಜನರಾಗಿದ್ದಾರೆ.

ರಾಯ್ ಭಾರತೀಯ ಅರ್ಥಶಾಸ್ತ್ರ ಸಚಿವಾಲಯದಲ್ಲಿ ಅರ್ಥಶಾಸ್ತ್ರದ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಆನಂತರದಲ್ಲಿ ತಮ್ಮ ಮಾಲೀಕತ್ವದ ನ್ಯೂ ದಿಲ್ಲಿ ಟೆಲಿವಿಷನ್ ಸಂಸ್ಥೆಯನ್ನು ಹುಟ್ಟು ಹಾಕಿದರು. ಅಲ್ಲಿಂದ ರಾಯ್ ತಿರುಗಿ ನೋಡುವ ಪ್ರಶ್ನೆಯೆ ಉದ್ಭವಿಸಿಲ್ಲ. ಪ್ರಣಯ್ ಪತ್ನಿ ರಾಧಿಕಾ ರಾಯ್ ಅವರು ಸಿಪಿಐ(ಎಂ) ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಬೃಂದಾ ಕಾರಟ್ ಅವರ ಸಹೋದರಿಯಾಗಿದ್ದಾರೆ. ರಾಧಿಕಾ ಅವರು ಸದ್ಯ ಎನ್ ಡಿಟಿವಿಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X